ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಐಡಿವೈಒ: ಆನ್‌ಲೈನ್ ಪ್ರತಿಭಟನೆ

Last Updated 1 ಮೇ 2020, 13:27 IST
ಅಕ್ಷರ ಗಾತ್ರ

ವಿಜಯಪುರ: ಕೊರೊನಾ ಲಾಕ್‌ಡೌನ್‌ನಿಂದ ಸಂಕಷ್ಟ ಎದುರಿಸುತ್ತಿರುವ ಜನರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ಪಂದಿಸಬೇಕು ಎಂದು ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ವತಿಯಿಂದ ‘ಅಖಿಲ ಭಾರತ ಆಗ್ರಹ ದಿನ’ವಾಗಿ ಆನ್ ಲೈನ್ ಪ್ರತಿಭಟನೆ ಶುಕ್ರವಾರ ಆರಂಭಿಸಲಾಯಿತು.

ಈ ಲಾಕ್‍ಡೌನ್ ಸಮಯದಲ್ಲಿ ಕೆಲಸವೂ ಇಲ್ಲದೆ, ಆದಾಯವೂ ಇಲ್ಲದೆ ಪರದಾಡುತ್ತಿರುವ ಬಡವರಿಗೆ ಸ್ಪಂದಿಸುವಲ್ಲಿ ಸರ್ಕಾರಗಳು ವಿಫಲವಾಗುತ್ತಿದೆ. ಈಗಾಗಲೇ ಕೋಟ್ಯಂತರ ಜನ ಉದ್ಯೋಗ ಕಳೆದುಕೊಳ್ಳುವ ಭೀತಿಯನ್ನು ಎದುರಿಸುತ್ತಿದ್ದಾರೆ ಎಂದು ಸಂಘಟನೆ ಆರೋಪಿಸಿದೆ.

ವಲಸೆ ಕಾರ್ಮಿಕರು, ದಿನಗೂಲಿಗಳು, ಇ-ಕಾಮರ್ಸ್ ಕಾರ್ಮಿಕರ ಹಿತರಕ್ಷಣೆ ಮಾಡಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದೆ.

ಕೋವಿಡ್-19 ಮುಂಚೂಣಿ ಹೋರಾಟಗಾರರಿಗೆ ಸುರಕ್ಷತಾ ಕಿಟ್ ಮತ್ತು ಮಾಸ್ಕ್‌ಗಳನ್ನು ನೀಡಬೇಕು. ಎಲ್ಲರ ಉದ್ಯೋಗ ಮತ್ತು ವೇತನವನ್ನು ಕಾಯಬೇಕು. ಸಾಮಾಜಿಕ ಅಂತರ ಅಲ್ಲ; ದೈಹಿಕ ಅಂತರ ಪದವನ್ನು ಬಳಸಬೇಕು ಎಂದು ಆಗ್ರಹಿಸಿದೆ.

ಪಡಿತರ ವ್ಯವಸ್ಥೆ ಮೂಲಕ ಎಲ್ಲರಿಗೂ ಆಹಾರವನ್ನು ತಲುಪಿಸಬೇಕು. ಎಫ್‍ಸಿಐ ಗೋದಾಮುಗಳಲ್ಲಿ ಇರುವ ಆಹಾರಧಾನ್ಯವನ್ನು ಬಡವರಿಗೆ ಮತ್ತು ಹಸಿದವರಿಗೆ ಹಂಚಬೇಕು. ಎಲ್ಲ ನಿರುದ್ಯೋಗಿಗಳಿಗೆ ಮತ್ತು ಜನಧನ ಖಾತೆದಾರರಿಗೆ ಮುಂದಿನ ಕನಿಷ್ಠ 6 ತಿಂಗಳು ಮಾಸಿಕ ₹ 5 ಸಾವಿರ ಸಹಾಯಧನ ನೀಡಬೇಕು ಎಂದು ಒತ್ತಾಯಿಸಿದರು.

ದಿನಬಳಕೆ ಗ್ರಾಹಕ ಸಾಮಾಗ್ರಿಗಳನ್ನು ಪಿಡಿಎಸ್ ಮೂಲಕ ಮುಂದಿನ ಕನಿಷ್ಠ ಮೂರು ತಿಂಗಳು ಹಂಚಿಕೆ ಮಾಡಬೇಕು. ನರೇಗಾ ಅಡಿಯಲ್ಲಿ ಕನಿಷ್ಠ ದುಡಿಯವ ದಿನಗಳ ಸಂಖ್ಯೆಯನ್ನು 200 ದಿನಗಳಿಗೆ ಏರಿಸಬೇಕು. ರಾಜ್ಯದಲ್ಲಿ ಸಂಪೂರ್ಣ ಪಾನ ನಿಷೇಧವನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದೆ.

ಎಐಡಿವೈಒ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಲಿಂಗ ಬಾಗೇವಾಡಿ, ಉಪಾಧ್ಯಕ್ಷ ಬಾಳು ಜೇವೂರ, ಸದಸ್ಯರಾದ ಆಕಾಶ ರಾಮತೀರ್ಥ, ಶಿವಾನಂದ ಬಡಿಗೇರ, ಕಲ್ಮೇಶ ಸೋಮದೇವರಹಟ್ಟಿ, ಅಶೋಕ ರಾಠೋಡ, ಪ್ರಸನ್ನ ಬುರುಣಾಪುರ, ಮುತ್ತು ಗುಣಕಿ, ರಾಹುಲ ಮಾದರ, ಮುತ್ತು ಬಿರಾದಾರ, ಶಿವರಾಜ ಗಂಗಾವತಿ, ನಿಖಿಲ್ ದಾವಣಗೇರಿ ಮತ್ತಿತರರು ಆನ್‌ಲೈನ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT