ಶನಿವಾರ, ಡಿಸೆಂಬರ್ 7, 2019
25 °C

ಹೈನುಗಾರಿಕೆಯಲ್ಲಿ ಹಸಿರು ಮೇವಿನ ಪಾತ್ರ ಮಹತ್ವದ್ದು: ವಿಜ್ಞಾನಿ ಡಾ.ದಿನೇಶ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಮಾಗಡಿ: ಹೈನುಗಾರಿಕೆಯಲ್ಲಿ ನೂತನ ಹಸಿರು ಮೇವಿನ ತಳಿ ಮತ್ತು ಅಜೊಲ್ಲಾದ ಪಾತ್ರ ಮಹತ್ವವಾಗಿದೆ ಎಂದು ಕೆವಿಕೆ ಬೇಸಾಯಶಾಸ್ತ್ರದ ವಿಜ್ಞಾನಿ ಡಾ.ದಿನೇಶ್‌.ಎಂ.ಎಸ್‌.ತಿಳಿಸಿದರು.

ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ನಡೆದ ‘ಹಸಿರು ಮೇವಿನ ತಳಿ ಮತ್ತು ಅಜೋಲ್ಲಾದ ಪಾತ್ರ ಕುರಿತ ತರಬೇತಿ’ಯಲ್ಲಿ ಅವರು ಮಾತನಾಡಿದರು.

ವರ್ಷವಿಡೀ ಹಸಿರು ಮೇವಿನ ತಳಿ ಮತ್ತು ಅಜೊಲ್ಲಾ ಬೆಳೆಸಿ, ಹೈನುಗಾರಿಕೆ ಮಾಡುವ ಮೂಲಕ ರೈತರು ಆರ್ಥಿಕವಾಗಿ ಸಬಲೀಕರಣ ಸಾಧಿಸಬಹುದು ಎಂದು ಅಭಿಪ್ರಾಯಪಟ್ಟರು.

ಸೋಲೂರು ಡೇರಿ ಉಪ ವ್ಯವಸ್ಥಾಪಕ ಡಾಶ್ರೀನಿವಾಸ್ ಮಾತನಾಡಿ, ಸಮರ್ಪಕ ಪಶು ಆಹಾರ ನಿರ್ವಹಣೆ ಬಗ್ಗೆ ಕೃಷಿ ವಿಜ್ಞಾನಿಗಳು ನೀಡುವ ಸಲಹೆಯನ್ನು ರೈತರು ಸ್ವೀಕರಿಸಬೇಕು ಎಂದು ಹೇಳಿದರು.

ಕೆಎಂಎಫ್‌ನ ಕೃಷಿ ಅಧಿಕಾರಿ ದಿವ್ಯ ಅವರು ಕೆಎಂಎಫ್ ವತಿಯಿಂದ ಲಭ್ಯವಿರುವ ವಿವಿಧ ಯೋಜನೆಗಳ ಬಗ್ಗೆ ವಿವರಿಸಿದರು. ವಿಜ್ಞಾನಿ ಡಾ.ಲತಾ ಆರ್. ಕುಲಕರ್ಣಿ ಅವರು ಕೇಂದ್ರದ ಧ್ಯೇಯೋದ್ದೇಶಗಳು ಹಾಗೂ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು