ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯುರ್ವೇದ ವಿವಿ ಸ್ಥಾಪನೆಗೆ ₹ 110 ಕೋಟಿ ನೀಡಲು ಆಗ್ರಹ

Last Updated 11 ಫೆಬ್ರುವರಿ 2020, 10:37 IST
ಅಕ್ಷರ ಗಾತ್ರ

ಶಿವಮೊಗ್ಗ: ನನೆಗುದಿಗೆ ಬಿದ್ದಿರುವ ಶಿವಮೊಗ್ಗ ಆಯುರ್ವೇದವಿಶ್ವವಿದ್ಯಾಲಯ ಸ್ಥಾಪನೆಗೆ ಈ ಬಾರಿಯ ಬಜೆಟ್‌ನಲ್ಲಿ ₨ 110 ಕೋಟಿ ನೀಡಬೇಕು ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಒತ್ತಾಯಿಸಿದೆ.

2011ರಲ್ಲಿ ಶಿವಮೊಗ್ಗದಲ್ಲಿ ಇದ್ದ ಸರ್ಕಾರಿ ಆಯುರ್ವೇದ ವೈದ್ಯಕೀಯ ಮತ್ತು ಬೋಧನಾ ಆಸ್ಪತ್ರೆ ಉನ್ನತೀಕರಿಸಿ100 ಹಾಸಿಗೆಗಳ ಸೌಲಭ್ಯ ಒದಗಿಸಲಾಗಿತ್ತು. ನಂತರ ವಿಶ್ವವಿದ್ಯಾಲಯಸ್ಥಾಪನೆಗೆ ಅಗತ್ಯವಾದಉಪನ್ಯಾಸಕರ ಹುದ್ದೆ, ಪ್ರಾಂಶುಪಾಲರು, ಬೋಧಕೇತರ ಹುದ್ದೆಗಳಿಗೆಅನುಮತಿ ನೀಡಲಾಗಿತ್ತು. ಅದಕ್ಕಾಗಿಯೇಸೋಗಾನೆ ಗ್ರಾಮದ ಸರ್ವೆ ನಂಬರ್ 120ರಲ್ಲಿ 100 ಎಕರೆ ಜಮೀನು ಮಂಜೂರು ಮಾಡಲಾಗಿದೆ.

400 ಮೀಟರ್ ಕಾಂಪೌಂಡ್ ನಿರ್ಮಿಸಲಾಗಿದೆ‌.ರೈತರಿಗೂ ಪರಿಹಾರ ನೀಡಲಾಗಿದೆ. ಕೆಲವು ರೈತರಿಗೆ ಪರಿಹಾರ ನೀಡಬೇಕಾದ ಹಣ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಮೀಸಲಿದೆ. ಆದರೂ, ಇಚ್ಚಾಶಕ್ತಿ ಕೊರತೆಪರಿಣಾಮ ವಿಶ್ವವಿದ್ಯಾಲಯ ಸ್ಥಾಪನೆ ನನೆಗುದಿಗೆ ಬಿದ್ದಿದೆ ಎಂದು ಟ್ರಸ್ಟ್ ಮುಖಂಡಕಲ್ಲೂರು ಮೇಘರಾಜ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಹೊಸಬಗೆಯ ವಿಚಿತ್ರ ಕಾಯಿಲೆಗಳಿಗೆ ಆಯುರ್ವೇದಿಕ್‌ ಚಿಕಿತ್ಸೆ ನೀಡಲು ಸಂಶೋಧನೆಗಳ ಅಗತ್ಯವಿದೆ. ಅದಕ್ಕಾಗಿ ವಿಶ್ವವಿದ್ಯಾಲಯ ಸ್ಥಾಪಿಸಬೇಕು. ಗಿಡಮೂಲಿಕೆಗಳು, ಔಷಧೀಯ ಸಸ್ಯಗಳ ಪ್ರಭೇದ ಮಲೆನಾಡಿನಲ್ಲಿ ದೊರಕುವ ಕಾರಣ ಶಿವಮೊಗ್ಗದಲ್ಲೇ ಅಂತಹ ವಿಶ್ವವಿದ್ಯಾಲಯ ಸ್ಥಾಪನೆಯ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹೊಳೆಮಡಿಲು ವೆಂಕಟೇಶ್, ಎಚ್.ಎಂ.ಸಂಗಯ್ಯ, ಹೊನ್ನಮ್ಮ ಮಾಲತೇಶ್, ರಾಜಮ್ಮ, ಶಂಕ್ರಾನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT