ಬಾಗಲಕೋಟೆ: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅನ್ವಯ ರಾಜ್ಯದಲ್ಲಿರುವ ಎಲ್ಲಾ ಆಹಾರ ವಸ್ತುಗಳ ತಯಾರಕರು, ಸಂಸ್ಕರಣೆ, ಸಾಗಣೆ, ವಿತರಕರು ಹಾಗೂ ಮಾರಾಟಗಾರರು ಆಹಾರ ಪರವಾನಗಿ, ನೋಂದಣಿ ಮಾಡಿಸಿಕೊಳ್ಳಲು ಫೆಬ್ರವರಿ 4 ಕೊನೆಯ ದಿನವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಅಧಿಕಾರಿಗಳು ತಿಳಿಸಿದ್ದಾರೆ.

ಆಹಾರ ವಿತರಣೆ ಮತ್ತು ಮಾರಾಟದಲ್ಲಿ ನಿರತರಾಗಿರುವವರು ಪರವಾನಗಿ ಪಡೆಯದೇ ಆಹಾರ ವಸ್ತುಗಳ ವಹಿವಾಟು ನಡೆಸುವಂತಿಲ್ಲ. ಪರವಾನಗಿ ರಹಿತ ಆಹಾರ ವಸ್ತುಗಳ ವ್ಯವಹಾರ ಕಾನೂನು ಬಾಹಿರವಾಗಿದ್ದು, ಉಲ್ಲಂಘನೆಯಾದಲ್ಲಿ 6 ತಿಂಗಳ ಸೆರೆವಾಸ ಮತ್ತು ₨ 5 ಲಕ್ಷದವರೆಗೆ ದಂಡವಿಧಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಎಲ್ಲ ಆಹಾರ ವಸ್ತುಗಳ ಉತ್ಪಾದಕರು, ಸಗಟು ವ್ಯಾಪಾರಿಗಳು, ವಿತರಕರು ಮತ್ತು ಮಾರಾಟಗಾರರು, ಎಲ್ಲಾ ಹೋಟೆಲ್ಗಳು, ರೆಸ್ಟೋರೆಂಟ್ಗಳು, ಕ್ಲಬ್ಗಳು, ಕ್ಯಾಂಟೀನ್ಗಳು, ಕ್ಯಾಟರಿಂಗ್ ವ್ಯವಹಾರ ಮಾಡುವವರು, ಎಲ್ಲಾ ಆಹಾರ ವಸ್ತುಗಳ ಸಾಗಣೆದಾರರು, ಆಹಾರ ಉಗ್ರಾಣ ಸಂಘಟನೆಗಳು, ಎಲ್ಲಾ ಆಹಾರ ಸಂಸ್ಕರಣ ಘಟಕಗಳು, ಆಹಾರ ವಸ್ತುಗಳ ಆಮದುದಾರರು ನೋಂದಣಿ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ಶ್ರೀಕಾಂತ ತೆಲಸಂಗ ದೂ.ಸಂ.08354-221445, ಬಾಗಲಕೋಟೆ ಹಿರಿಯ ಆಹಾರ ಸುರಕ್ಷತಾ ಅಧಿಕಾರಿಗಳಾದ ಎಂ. ಎನ್. ವೆಂಕಟೇಶ ಮೊ.ನಂ. 9986573690, ಕಿರಿಯ ಆಹಾರ ಸುರಕ್ಷತಾ ಅಧಿಕಾರಿ ಶಂಕರಗೌಡ ಕಂತಲಗಾವಿ ಮೊ.ನಂ. 94486 44782 ಹಾಗೂ ಇಸಾಕ್ ಫಾರುಖ್ ಮೊ.ನಂ.9886065733 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬಹುಮಾನ: ಕರ್ನಾಟಕ ಮಾಸ್ಟರ್ಸ್ ಅಥ್ಲೆಟಿಕ್ ಅಸೋಶಿಯೇಷನ್ ವತಿಯಿಂದ ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸಿ ಹ್ಯಾಮರ್ ಥ್ರೋನಲ್ಲಿ ಪ್ರಥಮ ಹಾಗೂ ಲಾಂಗ್ ಜಂಪ್ ನಲ್ಲಿ ದ್ವಿತೀಯ ಸ್ಥಾನಗಳಿಸಿದ ಬಾದಾಮಿ ತಾಲ್ಲೂಕಿನ ಜಾಲಿಹಾಳ ಗ್ರಾಮದ ಅಂಗವಿಕಲ ಕ್ರೀಡಾಪಟು ಅಬ್ದುಲ್ ಮುಲ್ಲಾ ಅವರನ್ನು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರಮೇಶ ತಳವಾರ ಅಭಿನಂದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.