ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ.22ರಂದು ಜನಿಸುವ ಪ್ರತಿ ಮಗುವಿಗೆ ₹5 ಸಾವಿರ ಠೇವಣಿ: ಪ್ರಶಾಂತ ಜವಳಿ

Published 21 ಜನವರಿ 2024, 15:52 IST
Last Updated 21 ಜನವರಿ 2024, 15:52 IST
ಅಕ್ಷರ ಗಾತ್ರ

ಗುಳೇದಗುಡ್ಡ: ಪಟ್ಟಣದ ಲಾಲಬಹ್ದೂರ ಶಾಸ್ತ್ರೀ ಪತ್ತಿನ ಸೌಹಾರ್ದ ಸಹಕಾರಿ ಸಂಘಕ್ಕೆ 10 ವರ್ಷ ತುಂಬುತ್ತಿರುವುದರಿಂದ ದಶಮಾನೋತ್ಸವದ ಸಂಭ್ರಮ ಆಚರಿಸಲಾಗುತ್ತಿದ್ದು ಹಾಗೂ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ಜ.22ರಂದು ಗುಳೇದಗುಡ್ಡದ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸುವ ಪ್ರತಿ ಮಗುವಿಗೆ 5 ಸಾವಿರ ಠೇವಣಿ ಇರಿಸಲಾಗುವುದು ಎಂದು ಸಂಘದ ಉಪಾಧ್ಯಕ್ಷ ಪ್ರಶಾಂತ ಜವಳಿ ತಿಳಿಸಿದ್ದಾರೆ.

ಸಂಘದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮಮಂದಿರ ಉದ್ಘಾಟನೆ ಇಡೀ ದೇಶಕ್ಕೆ ಒಂದು ಐತಿಹಾಸ ಕ್ಷಣವಾಗಿದ್ದು, ಅಲ್ಲದೇ ನಮ್ಮ ಸಂಘವು 10ನೇ ವರ್ಷಕ್ಕೆ ಪದಾರ್ಪಣೆ ಮಾಡಿದ ಪ್ರಯುಕ್ತ ಮಕ್ಕಳ ಅಭಿವೃದ್ಧಿ ಯೋಜನೆಯಡಿ ಈ ಯೋಜನೆ ಹಾಕಿಕೊಳ್ಳಲಾಗಿದೆ. ಜ.22ರಂದು ಜನಿಸುವ ಮಗುವಿಗೆ ದಿನ 5 ಸಾವಿರ ಕೊಟ್ಟರೆ ಹಣ ಉಳಿಯುವದಿಲ್ಲ. ಅದನ್ನೇ ಠೇವಣಿ ರೂಪದಲ್ಲಿಟ್ಟರೇ 18 ವರ್ಷದ ನಂತರ ಮಗುವಿನ ಶಿಕ್ಷಣಕ್ಕೆ ಅನುಕೂಲವಾಗುತ್ತದೆ. ಅಲ್ಲದೇ ರಾಮ ಮಂದಿರ ಉದ್ಘಾಟನೆಯ ದಿನವನ್ನು ಸ್ಮರಣೀಯವಾಗಿಸುವ ಉದ್ದೇಶದಿಂದ ಈ ಯೋಜನೆ ಹಾಕಿಕೊಂಡಿದ್ದೇವೆ ಎಂದು ಹೇಳಿದರು.

ಜ.22ರಂದು ಗುಳೇದಗುಡ್ಡ ಸರ್ಕಾರಿ ಆಸ್ಪತ್ರೆಯಲ್ಲಿ ಗಂಡು ಅಥವಾ ಹೆಣ್ಣು ಯಾವುದೇ ಮಗು ಜನಿಸಿದರೂ ಆ ಮಗುವಿನ ಹೆಸರಿಗೆ ₹5 ಸಾವಿರ ಠೇವಣಿ ಇರಿಸಲಾಗುವುದು ₹5 ಸಾವಿರ 18 ವರ್ಷ ಠೇವಣಿ ಇರಿಸಿ, 18 ವರ್ಷದ ನಂತರ ₹25 ಸಾವಿರ ಮಗುವಿಗೆ ನೀಡಲಾಗುವುದು ಎಂದು ಹೇಳಿದರು.

ಸಂಘದ ನಿರ್ದೇಶಕರಾದ ಶೇಖರ ರಾಠೋಡ, ರಾಚಪ್ಪ ಸಾರಂಗಿ, ಸುನಂದಾ ಸತ್ತಿಗೇರಿ, ರೂಪಾ ಪವಾರ, ಯಲ್ಲಪ್ಪ ಪವಾರ, ವ್ಯವಸ್ಥಾಪಕಿ ಭಾವನಾ ಅಲದಿ, ಎಂ.ಎಸ್.ಕಾಳನ್ನವರ, ಎಸ್.ಎಚ್.ಗೌಡರ, ದ್ರಾಕ್ಷಾಯಣಿ ವಾಳದುಂಕಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT