ಕೆರೂರ: ಪಟ್ಟಣದ ಮರ್ಚಂಟ್ಸ್ ಕೋ-ಆಪ್ ಕ್ರೆಡಿಟ್ ಸೊಸೈಟಿ ಸನ್ 2022-23 ಸಾಲಿನ ಹಣಕಾಸು ವರ್ಷದಲ್ಲಿ ₹ 95 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಧನಂಜಯ ಕಂದಕೂರ ಹೇಳಿದರು.
ಸಂಘದ ಪ್ರಧಾನ ಕಚೇರಿಯಲ್ಲಿ ಶನಿವಾರ ನಡೆದ 28ನೇ ವಾರ್ಷಿಕ ಸಭೆ ಉದ್ದೇಶಿಸಿ ಬ್ಯಾಂಕ್ ಅಧ್ಯಕ್ಷ ಧನಂಜಯ ಕಂದಕೂರ ಮಾತನಾಡಿದರು.
ಪ್ರಸ್ತುತ 2022-23 ಸಾಲಿನ ವರ್ಷದ ಸಂಘದಲ್ಲಿ ಒಟ್ಟು ಸದಸ್ಯರ ಸಂಖ್ಯೆ 3871 ಇದ್ದು, ₹ 78 ಲಕ್ಷ ಷೇರು ಹಣ ಸಂಗ್ರಹವಾಗಿರುತ್ತದೆ. ಇದರೊಂದಿಗೆ ಒಟ್ಟು ಠೇವು ಹಣ ₹ 31.70 ಕೋಟಿ, ದುಡಿಯುವ ಬಂಡವಾಳ ₹ 41.47 ಕೋಟಿ , ಸಾಲ ಪೂರೈಕೆ ಹಣ ₹ 21.96 ಕೋಟಿ ಹಾಗೂ ಗ್ರಾಹಕರಿಗೆ ಶೇ 12 ಡಿವಡೆಂಟ್ ಹಣ ಹಂಚಲಾಗಿದೆ ಎಂದು ತಿಳಿಸಿದರು.
ಸಂಘದ ನಿರ್ದೇಶಕ ಗಂಗಾಧರ ಘಟ್ಟದ ಮಾತನಾಡಿ, ಗ್ರಾಹಕರು ಬ್ಯಾಂಕಿನಲ್ಲಿ ಸಾಲ ತೆಗೆದುಕೊಂಡು ಸಕಾಲಕ್ಕೆ ಸಾಲ ಮರುಪಾವತಿ ಮಾಡಿ ಆರ್ಥಿಕವಾಗಿ ಅಬಿವೃದ್ದಿ ಹೊಂದಲು ಸಹಕರಿಸಿಬೇಕು. ಗ್ರಾಹಕರು ನಮ್ಮ ಬ್ಯಾಂಕಿನ ಮೇಲೆ ಇಟ್ಟ ವಿಶ್ವಾಸ, ಶ್ರದ್ದೆ, ಹಾಗೂ ಸಹಕಾರವೇ ಈ ಪ್ರಗತಿ ಹೊಂದಲು ಕಾರಣ ಎಂದು ಹೇಳಿದರು.
2022-23 ಸಾಲಿನ ಎಸ್ಎಸ್ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಬ್ಯಾಂಕಿನ ಸದಸ್ಯತ್ವ ಹೊಂದಿದ ಗ್ರಾಹಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಜಗದೀಶ ಯಂಡಿಗೇರಿ, ಆಡಳಿತ ಮಂಡಳಿ ಸದಸ್ಯರಾದ ಸುಭಾಸ ಪೂಜಾರ, ಶಂಕ್ರಪ್ಪ ಘಟ್ಟದ, ಕೇಶವ ಕಂದಕೂರ, ಗುರಪ್ಪ ಬಾಗೋಜಿ, ಪ್ರವೀಣ ಮಾನ್ವಿ, ಬಾಬು ರಾಮದುರ್ಗ, ಪ್ರಕಾಶ ಮೇದಾರ, ದಾನಪ್ಪ ಪೂಜಾರ, ರತ್ನವ್ವ ಕಡಕೊಳ, ತಾರಾ ಹಂದ್ರಾಳ, ಮುಖ್ಯ ನಿರ್ವಾಹಕ ರುದ್ರಪ್ಪ ಅಳಗವಾಡಿ ಹಾಗೂ ಸಿಬ್ಬಂದಿ ವರ್ಗದವರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.