ಬಾದಾಮಿ: ತಾಲ್ಲೂಕಿನ ನೆಲವಗಿ ಆಸರೆ ಗ್ರಾಮದಲ್ಲಿ ಜನರಿಗೆ ವಿತರಣೆಯಾಗದ ಹಕ್ಕುಪತ್ರ, ಖಾಲಿ ಇರುವ ಪ್ರಾಥಮಿಕ ಶಾಲಾ ಕಟ್ಟಡ, ಹಳೇ ಊರಿಂದ ಹೊಸ ಗ್ರಾಮಕ್ಕೆ ಹೋಗುವ ಹದಗೆಟ್ಟ ರಸ್ತೆ, ಆಸರೆ ಮನೆಗಳ ಮುಂದೆ ರಸ್ತೆಯಲ್ಲಿ ಆಳೆತ್ತರ ಬೆಳೆದ ಹುಲ್ಲು, ಆರಂಭವಾಗದ ಜೆಜೆಎಂ ಕುಡಿಯುವ ನೀರು ಯೋಜನೆ ಸೇರಿದಂತೆ ಸಮಸ್ಯೆಗಳು ಬೆಟ್ಟದಷ್ಟಿವೆ.

ಹಳೆಯ ನೆಲವಗಿ ಗ್ರಾಮದಿಂದ ಎರಡು ಕಿ.ಮೀ. ಹದಗೆಟ್ಟ ರಸ್ತೆಯಿಂದ ಕ್ರಮಿಸಿದರೆ ನೆಲವಗಿ ಆಸರೆ ಗ್ರಾಮ ಬರುತ್ತದೆ. ಗುಡ್ಡದ ಪಕ್ಕದಲ್ಲಿ ನಿರ್ಮಿಸಿರುವ ಈ ಊರಲ್ಲಿ ಜನರು ವಾಸವಾಗಿದ್ದಾರೆ.

ಗ್ರಾಮದಲ್ಲಿ 255 ನಿವೇಶನ ರಚಿಸಲಾಗಿದೆ. 194 ಮನೆಗಳನ್ನು ನಿರ್ಮಿಸಲಾಗಿದೆ. 168 ಜನರಿಗೆ ಹಕ್ಕುಪತ್ರ ವಿತರಣೆ ಮಾಡಲಾಗಿದೆ. ಇನ್ನೂ ಹಲವರಿಗೆ ಹಕ್ಕುಪತ್ರಗಳ ವಿತರಣೆ ಮಾಡಬೇಕಿದೆ.

168 ಆಸರೆ ಮನೆಗಳ ಪೈಕಿ ಅಂದಾಜು ನೂರು ಮನೆಗಳಲ್ಲಿ ಕುಟುಂಬಗಳು ವಾಸವಾಗಿವೆ. ಕೆಲವರಿಗೆ ಹಕ್ಕುಪತ್ರವನ್ನೂ ಕೊಟ್ಟಿಲ್ಲ. ಹಕ್ಕುಪತ್ರ ಪಡೆದ ಕೆಲವರು ಮನೆಗೆ ಬೀಗ ಹಾಕಿದ್ದಾರೆ. ತಮ್ಮ ಹೆಸರಿನಲ್ಲಿ ಮನೆ ಬಾರದಿದ್ದರೂ ಕೆಲವರು ಇಲ್ಲಿ ವಾಸವಾಗಿದ್ದಾರೆ.

2021-22ರಲ್ಲಿ ₹20 ಲಕ್ಷ ವೆಚ್ಚದಲ್ಲಿ ಪ್ರಾಥಮಿಕ ಶಾಲೆಯ ಎರಡು ಕೊಠಡಿ ನಿರ್ಮಿಸಿದ್ದು, ಸುತ್ತ ಕಾಂಪೌಂಡ್ ನಿರ್ಮಾಣ ಮಾಡಲಾಗಿದೆ. ಶಾಲಾ ಆವರಣದಲ್ಲಿ ಎರಡು ಕುರಿ ದೊಡ್ಡಿಗಳಲ್ಲಿ ಕುರಿ, ಆಡುಗಳನ್ನು ಕಟ್ಟಲಾಗುತ್ತಿದೆ. ಮೇವಿನ ಬಣವೆ ಸಹ ಇದೆ. ಆಕ್ರಮ ಚಟುವಟಿಕೆಗಳ ಕೇಂದ್ರವಾಗಿದೆ ಎಂದು ನಿವಾಸಿಗಳು ದೂರಿದರು.

‘ಒಂದರಿಂದ ಏಳನೇ ತರಗತಿಯವರೆಗಿನ ಮಕ್ಕಳು ಸಾಲಿ ಕಲಿಯಾಕ ಹಳೆ ಊರಿಗೆ (ನೆಲವಗಿ) ನಡಕೊಂಡ ಹೋಗಬೇಕ್ರಿ. ನಮ್ಮೂರಾಗ ಸಾಲಿ ಕಟ್ಟಡ ಐತ್ರಿ. ಆದರ, ಚಾಲೂ ಮಾಡಿಲ್ಲ. ಸಾಲಿ ಮುಂದ ಬಣಿವೆ ವಟ್ಯಾರ ಮತ್ತ ಕುರಿ ದೊಡ್ಡಿ ಮಾಡ್ಯಾರ. ಸಾಲಿ ಕಟ್ಟಿಸಿ ಏನೂ ಉಪಯೋಗ ಅಗಿಲ್ಲ. ಇಲ್ಲೇ ಸಾಲಿ ಚಾಲೂ ಮಾಡಿದರ ಮಕ್ಕಳಿಗೆ ಅನುಕೂಲ ಆಗತ್ತರಿ’ ಎಂದು ಬಸಪ್ಪ ಕರಕನ್ನವರ ಹೇಳಿದರು.

ಶಾಲೆ ಬಿಟ್ಟ ನಂತರ ಬಂದ ಮಕ್ಕಳು ‘ದಿನಾ ಮಳಿಯಾಗ, ಬಿಸಲಾಗ ನಡಕೊಂಡ ಹಳೆ ಊರ ಸಾಲಿಗೆ ಹೋಗಬೇಕ್ರಿ. ಸುತ್ತರದ ಕಬ್ಬು ಬೆಳದಾರ್ರಿ. ದಾರ್ಯಾಗ ಹೋಗಾಗ ನಮಗ ಹೆದರಿಕಿ ಬರತೈತಿ. ನಮ್ಮೂರಾಗ ಸಾಲಿ ಚಾಲೂ ಆದರ ಬೇಸಿ ಆಗತ್ತರಿ’ ಎಂದರು.

‘ಹಳೆ ಊರಾಗ ಮನಿ ಎಲ್ಲ ಬಿದ್ದಾವರಿ. ನಮಗ ಮನಿ ಬಂದಿಲ್ಲರಿ. ಇಲ್ಲೇ ಬಂದ ಅದೀವಿ. ನಮಗ ಇನ್ನೂ ಹಕ್ಕಪತ್ರ ಕೊಟ್ಟಿಲ್ರೀ. ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಕೊಟ್ಟು ಕೊಟ್ಟು ತಿರಗ್ಯಾಡಿ ಬ್ಯಾಸರಾತ್ರಿ. ಇನ್ನೂ ನಮಗ ಹಕ್ಕು ಪತ್ರ ಕೊಟ್ಟಿಲ್ಲ’ ಎಂದು ಕೋರವ್ವ ಕಂಬಾರ ಅಳಲು ತೋಡಿಕೊಂಡರು.

‘ಹಕ್ಕುಪತ್ರ ವಿತರಣೆ, ಖಾಲಿ ನಿವೇಶನದ ಬಗ್ಗೆ ಸರ್ವೆ ಮಾಡಲು ಶಾಸಕರು ತಿಳಿಸಿದ್ದರು. ಸರ್ವೆ ಕಾರ್ಯ ಮುಗಿದಿದೆ. ಶೀಘ್ರ ಹಕ್ಕು ಪತ್ರ ವಿತರಿಸಲಾಗುವುದು’ ಎಂದು ನಂದಿಕೇಶ್ವರ ಗ್ರಾಮ ಪಂಚಾಯಿತಿ ಪಿಡಿಒ ಮುತ್ತಣ್ಣ ಚಲವಾದಿ ಹೇಳಿದರು.

ಹೊಸ ಗ್ರಾಮದ ರಸ್ತೆಯಲ್ಲಿ ಬೆಳೆದ ಹುಲ್ಲನ್ನು ತೆಗೆಸಲಾಗುವುದು. ನರೇಗಾ ಯೋಜನೆಯಡಿ ರಸ್ತೆ ಸಿಡಿ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿ ಕೈಗೊಳ್ಳಲಾಗುವುದು.
ಮುತ್ತಣ್ಣ ಚಲವಾದಿ, ಪಿಡಿಒ, ನಂದಿಕೇಶ್ವರ

ಚಿಕ್ಕ ಮಕ್ಕಳಿಗೆ ತೊಂದರೆಯಾಗಿದೆ. ಕಿರಿಯ ಪ್ರಾಥಮಿಕ ಶಾಲೆಯನ್ನು ಆಸರೆ ಬಡಾವಣೆಯಲ್ಲಿಯೇ ಆರಂಭಿಸಬೇಕು.
ಮಲ್ಲಣ್ಣ ಗಾರವಾಡ, ಸದಸ್ಯ, ಗ್ರಾಮ ಪಂಚಾಯಿತಿ ನೆಲವಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.