ಬಾದಾಮಿ: ಸಮೀಪದ ಮಹಾಕೂಟೇಶ್ವರ ದೇವಾಲಯದ ದರ್ಶನಕ್ಕೆ ಜೂನ್ 8 ರಿಂದ ಭಕ್ತರಿಗೆ ಅವಕಾಶವಿದೆ ಎಂದು ಪೂಜಾ ಸಮಿತಿ ಅಧ್ಯಕ್ಷ ಕುಮಾರಗೌಡ ಜನಾಲಿ ತಿಳಿಸಿದ್ದಾರೆ.

ಇಲ್ಲಿನ ಪುಷ್ಕರಣಿಯಲ್ಲಿ ಭಕ್ತರಿಗೆ ಪುಣ್ಯ ಸ್ನಾನಕ್ಕೆ ಅವಕಾಶವಿಲ್ಲ. ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡು ಬರಬೇಕು. ಯಾವುದೇ ಪೂಜಾ ವಸ್ತುಗಳನ್ನು ತರುವಂತಿಲ್ಲ. ದೇವಾಲಯದಲ್ಲೂ ಪೂಜಾ ಸೇವೆ ಇಲ್ಲ. ತೀರ್ಥ, ಪ್ರಸಾದ ಮತ್ತು ಅನ್ನದಾಸೋಹ ಇರುವುದಿಲ್ಲ ಎಂದು ತಿಳಿಸಿದ್ದಾರೆ.

ದೇವಾಲಯದ ಹೊರಗೆ ಥರ್ಮಲ್ ಸ್ಕ್ರೀನಿಂಗ್ ಮತ್ತು ಸ್ಯಾನಿಟೈಸರ್ ವ್ಯವಸ್ಥೆ ಮಾಡಿದೆ. ಸುರಕ್ಷಿತ ಅಂತರ ಕಾಪಾಡಿಕೊಂಡು ದರ್ಶನ ಪಡೆಯಬೇಕು ಎಂದು ಹೇಳಿದ್ದಾರೆ.

ಶಿವಯೋಗಮಂದಿರ ದರ್ಶನ : ಶಿವಯೋಗಮಂದಿರದಲ್ಲಿ ಭಕ್ತರಿಗೆ ಕುಮಾರ ಶಿವಯೋಗಿಗಳ ಮತ್ತು ಸದಾಶಿವ ಶ್ರೀಗಳ ಗದ್ದುಗೆ ದರ್ಶನ ಹೊನ್ನುಗ್ಗಿಯಿಂದ ಆರಂಭವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.