ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ ಲೋಕಸಭಾ ಕ್ಷೇತ್ರ | ದಾಖಲೆ ಬರೆದ ಮತದಾರ

ಮತಯಂತ್ರದಲ್ಲಿ ಭದ್ರವಾದ ಅಭ್ಯರ್ಥಿಗಳ ಭವಿಷ್ಯ
Published 8 ಮೇ 2024, 5:09 IST
Last Updated 8 ಮೇ 2024, 5:09 IST
ಅಕ್ಷರ ಗಾತ್ರ

ಬಾಗಲಕೋಟೆ: ಬಾಗಲಕೋಟೆ ಲೋಕಸಭಾ ಕ್ಷೇತ್ರದ ಚುನಾವಣಾ ಇತಿಹಾಸದಲ್ಲಿ ಮತದಾರರು ಮತದಾನ ಪ್ರಮಾಣದ ಹೊಸ ದಾಖಲೆಯನ್ನೇ ಬರೆದಿದ್ದಾರೆ. 1957ರಿಂದ ಇಲ್ಲಿಯವರೆಗೆ ನಡೆದ ಮತದಾನದಲ್ಲಿ ಹೆಚ್ಚಿನ ಪ್ರಮಾಣದ್ದಾಗಿದೆ.

2019ರಲ್ಲಿ ನಡೆದ ಶೇ70.63 ಮತದಾನವೇ ಹೆಚ್ಚಿನ ಪ್ರಮಾಣದ್ದಾಗಿತ್ತು. ಆದರೆ, ಈ ಬಾರಿ ಪ್ರಾಥಮಿಕ ಮಾಹಿತಿಯಿಂತೆ ಈಗಾಗಲೇ ಮತದಾನದ ಪ್ರಮಾಣ ಶೇ72.64 ಆಗಿದೆ. ನಾಳೆ ಬೆಳಿಗ್ಗೆ ವೇಳೆಗೆ ಅಂತಿಮ ವರದಿಯಲ್ಲಿ ಮತದಾನದ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.

ಬಿಸಿಲಿನ ಉಷ್ಣಾಂಶದ ಪ್ರಮಾಣದ ಹಿಂದಿನ ದಾಖಲೆಗಳನ್ನು ಮೀರಿ, ಬಿಸಿ ಗಾಳಿ ಬೀಸಲಾರಂಭಿಸಿದ್ದರಿಂದ ಮತದಾನದ ಪ್ರಮಾಣ ಕಡಿಮೆಯಾಗಲಿದೆ ಎಂದೇ ನಿರೀಕ್ಷಿಸಲಾಗಿತ್ತು. ಮತದಾನ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗವೂ ನೆರಳು ಒದಗಿಸುವುದೂ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿತ್ತು.

ಕಾಂಗ್ರೆಸ್‌, ಬಿಜೆಪಿಗೆ ಗೆಲುವು ಬಹಳ ಮುಖ್ಯುವಾಗಿದೆ. ಹಾಗಾಗಿ, ಸ್ಪರ್ಧೆ ತೀವ್ರವಾಗಿತ್ತು. ಎರಡೂ ಪಕ್ಷಗಳ ಮುಖಂಡರು ಜಿಲ್ಲೆಗೆ ಬಂದು ಅಭ್ಯರ್ಥಿಗಳ ಪರವಾಗಿ ಬಿರುಸಿನ ಪ್ರಚಾರ ನಡೆಸಿದ್ದರು. ಅಭ್ಯರ್ಥಿಗಳು ಬಿಸಿಲನ್ನು ಲೆಕ್ಕಿಸದೇ ಪ್ರಚಾರ ಮಾಡಿದ್ದರು.

ಸತತ ನಾಲ್ಕು ಬಾರಿ ಗೆಲುವು ಸಾಧಿಸಿರುವ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಐದನೇ ಬಾರಿಗೆ ಗೆಲುವಿಗಾಗಿ ಶ್ರಮಿಸಿದರೆ, ಕಮಲ ಕೋಟೆಯನ್ನು ಕೆಡವಿ ಕೈ ಮೇಲಾಗಿಸಲು ಕಾಂಗ್ರೆಸ್‌ ಅಭ್ಯರ್ಥಿ ಸಂಯುಕ್ತಾ ಪಾಟೀಲ ಪ್ರಯತ್ನಿಸಿದ್ದರು. 

ಗದ್ದಿಗೌಡರ ಅವರನ್ನು ಗೆಲ್ಲಿಸುವ ಮೂಲಕ ಮೂರನೇ ಬಾರಿ ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿಸಲು ಬಿಜೆಪಿ ನಾಯಕರು ಕ್ಷೇತ್ರದಾದ್ಯಂತ ಓಡಾಡಿದ್ದರೆ, ತಮ್ಮ ಪುತ್ರಿಯನ್ನು ಗೆಲ್ಲಿಸಿಕೊಳ್ಳುವ ಮೂಲಕ ಪುತ್ರಿಗೆ ರಾಜಕೀಯ ಭವಿಷ್ಯ ಗೆಲ್ಲಿಸಲು ಸಚಿವ ಶಿವಾನಂದ ಪಾಟೀಲ ಸಹ ತೀವ್ರ ಯತ್ನ ಮಾಡಿದ್ದರು.

ಒಟ್ಟಾರೆಯಾಗಿದೆ ಚುನಾವಣಾ ಕಣದಲ್ಲಿದ್ದ 22 ಅಭ್ಯರ್ಥಿಗಳ ಭವಿಷ್ಯ ಮಂಗಳವಾರ ಮತಯಂತ್ರಗಳನ್ನು ಸೇರಿದೆ. ಜೊತೆಗೆ ಗೆಲುವಿನ ಲೆಕ್ಕಾಚಾರವೂ ಶುರುವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT