ಮಹಾಲಿಂಗಪುರ: ಜ್ಞಾನಯಜ್ಞದ ಸಫಲತೆಯಿಂದ ಮಾನವ ಜನ್ಮ ಸಾರ್ಥಕವಾಗುತ್ತದೆ. ಶಿವರಾತ್ರಿ ಮತ್ತು ನವರಾತ್ರಿಗಳು ಶಿವಶಕ್ತಿ(ಶಿವಪಾರ್ವತಿ)ಯರ ಎಂದರೆ ಪರಮಾತ್ಮ ಮತ್ತು ಜೀವಾತ್ಮಗಳನ್ನು ಒಂದುಗೂಡಿಸುವ ಅವಕಾಶಗಳಾಗಿವೆ. ಜ್ಞಾನ ಯಜ್ಞವೇ ಜಗತ್ತಿನ ಸರ್ವ ಯಜ್ಞಗಳಿಗಿಂತ ಶ್ರೇಷ್ಠ ಯಜ್ಞ ಎಂದು ಶ್ರೀಶೈಲ ಪೀಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.

ಸಮೀಪದ ರನ್ನಬೆಳಗಲಿಯ ಚಕ್ರಪುರವಾಸಿನಿ ಚಕ್ರೇಶ್ವರಿ ಜ್ಯೋತಿರ್ವಿಜ್ಞಾನ ಸಂಶೋಧನಾ ಕೇಂದ್ರದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ನವರಾತಿ ಉತ್ಸವ ಹಾಗೂ ಮಹಾಕಾಳಿಕಾ ಭುವನೇಶ್ವರಿ ವನದ ಅಡಿಗಲ್ಲು ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಯಜ್ಞಗಳಲ್ಲಿ ಬಹಿರಂಗ ಯಜ್ಞ ಮತ್ತು ಅಂತರಂಗ ಯಜ್ಞ ಎಂಬ ಎರಡು ವಿಧಗಳಿವೆ. ಬಹಿರಂಗ ಯಜ್ಞಕ್ಕೆ ಬಾಹ್ಯ ಹವಿಸ್ಸು ನೀಡಿ ಆಸೆ, ಆಕಾಂಕ್ಷೆಗಳನ್ನು ಈಡೇರಿಕೊಳ್ಳಬಹುದು. ಆದರೆ, ಭಗವಂತ ಹಚ್ಚಿರುವ ಅಂತರಂಗದ ಆತ್ಮವೆಂಬ ಅಂತರಂಗ ಯಜ್ಞಕ್ಕೆ ಶಬ್ದ, ಸ್ಪರ್ಶ, ರೂಪ, ರಸ, ಗಂಧ ಎಂಬ ಪಂಚ ವಿಷಯಗಳ ಹವಿಸ್ಸು ನೀಡುವುದೇ ಜ್ಞಾನ ಯಜ್ಞ ಎಂದರು.

ನಿಡಸೋಸಿ ಸಿದ್ಧಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಮನುಷ್ಯನ ಸರ್ವ ಸಂಕಷ್ಟಗಳಿಗೆ ಪರಿಹಾರವೇ ಧರ್ಮ. ಅಹಂಕಾರ ತ್ಯಜಿಸಿ, ದೇವರ ಮೇಲಿನ ದೃಢ ನಂಬಿಕೆ ಇಟ್ಟರೆ ಅಸಾಧ್ಯವಾದದ್ದೂ ಸಾಧ್ಯವಾಗುತ್ತದೆ. ಸಮಾಜ ಮತ್ತು ದೇಶ ಪರಿವರ್ತನೆಗಾಗಿ ಧಾರ್ಮಿಕ ಕಾರ್ಯಗಳು ಅಗತ್ಯವಾಗಿವೆ ಎಂದರು.

ಸಂಸದ ಪಿ.ಸಿ.ಗದ್ದಿಗೌಡರ, ಶಾಸಕರಾದ ಸಿದ್ದು ಸವದಿ, ಜಗದೀಶ ಗುಡಗುಂಟಿ, ದುರ್ಯೋಧನ ಐಹೊಳೆ, ಬಿಜೆಪಿ ಮುಖಂಡ ಅರುಣ ಕಾರಜೋಳ ಮಹಾಕಾಳಿಕಾ ಭುವನೇಶ್ವರಿ ವನದ ಶಂಕುಸ್ಥಾಪನೆ ನೆರವೇರಿಸಿದರು. ಕೊಣ್ಣೂರ ಕಲ್ಯಾಣ ಹೊರಗಿನಮಠದ ವಿಶ್ವಪ್ರಭುದೇವ ಶಿವಾಚಾರ್ಯರು, ಹುಕ್ಕೇರಿ ಕ್ಯಾರಗುಡ್ಡದ ಅಭಿನವ ಮಂಜುನಾಥ ಮಹಾರಾಜರು, ರನ್ನಬೆಳಗಲಿ ಶಿವಯೋಗಾಶ್ರಮದ ಸಿದ್ಧರಾಮ ಶಿವಯೋಗಿಗಳು, ಕರ್ನಾಟಕ ಜಾನಪದ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷೆ ಮಂಜಮ್ಮ ಜೋಗತಿ, ಬೆಳಗಲಿ ಪಟ್ಟಣ ಪಂಚಾಯ್ತಿ ಸದಸ್ಯ ಸಿದ್ದುಗೌಡ ಪಾಟೀಲ ಮಾತನಾಡಿದರು.

ಕೇಂದ್ರದ ರಮೇಶಕುಮಾರ ಶಾಸ್ತ್ರೀಗಳ ಕಾರ್ಯ ಶ್ಲಾಘಿಸಿ ಅವರ ಹೆಸರನ್ನು ಚಿದಾನಂದ ಮಹಾರಾಜರು ಎಂದು ಬದಲಾಯಿಸಿ ಇನ್ಮುಂದೆ ಹಾಗೆಯೇ ಕರೆಯಲು ಧರ್ಮಸಭೆಯಲ್ಲಿ ಘೋಷಿಸಲಾಯಿತು.

ಚಿಮ್ಮಡದ ವಿರಕ್ತಮಠದ ಪ್ರಭು ಸ್ವಾಮೀಜಿ, ಕಡಕೋಳ ಎಂ.ಚಂದರಗಿಯ ವೀರಭದ್ರ ಶಿವಾಚಾರ್ಯರು, ಹೊಸಯರಗುದ್ರಿ ಈರಲಿಂಗೇಶ್ವರ ಮಠದ ಸಿದ್ಧಪ್ರಭು ಶಿವಾಚಾರ್ಯರು, ಕೆ.ಆರ್.ಮಾಚಪ್ಪನವರ, ಧರೆಪ್ಪ ಸಾಂಗಲಿಕರ, ನಾರನಗೌಡ ಉತ್ತಂಗಿ, ರಾಘವೇಂದ್ರ ನೀಲನ್ನವರ ಇದ್ದರು. ಇ

ದಕ್ಕೂ ಮುನ್ನ ಬೆಳಿಗ್ಗೆ ಆಯುತ ಮಹಾಚಂಡಿಕಾ ಯಾಗ, ಜಾನಪದ ಕಲಾ ಸಂಸ್ಕೃತಿ ಉತ್ಸವ, ಜಂಬೂ ಸವಾರಿ, ಕುಂಭ ಮೇಳ, ಉಡಿ ತುಂಬುವ ಕಾರ್ಯ ಮುಂತಾದ ಕಾರ್ಯಗಳು ನಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.