ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ: ರಸ್ತೆ ಅಗೆತ, ಆಸ್ಪತ್ರೆಗೆ ಕರೆದೊಯ್ಯಲಾಗದೆ ವೃದ್ಧೆ ಸಾವು

Last Updated 12 ಏಪ್ರಿಲ್ 2020, 15:54 IST
ಅಕ್ಷರ ಗಾತ್ರ

ಬಾಗಲಕೋಟೆ: ಬೆಳಗಾವಿ-ಬಾಗಲಕೋಟೆ ನಡುವಿನ ಅಂತರ ಜಿಲ್ಲೆ ಸಂಪರ್ಕ ರಸ್ತೆಯನ್ನು ಅಗೆದು ಬಂದ್ ಮಾಡಿದ ಪರಿಣಾಮ ಸಕಾಲದಲ್ಲಿ ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗದೇ ಹೃದಯಾಘಾತಕ್ಕೀಡಾಗಿದ್ದ ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ.

ತೇರದಾಳ ಪಟ್ಟಣದ ನಿರ್ಮಲಾ‌ ಕೆಳಗಿನಮನಿ (61) ಸಾವಿಗೀಡಾದವರು.

ಎದೆನೋವಿನಿಂದ ಬಳಲುತ್ತಿದ್ದ ನಿರ್ಮಲಾ ಅವರನ್ನು ಶನಿವಾರ ರಾತ್ರಿ ಹೆಚ್ಚಿನ ಚಿಕಿತ್ಸೆಗಾಗಿ ಕುಟುಂಬದವರು ತೇರದಾಳದಿಂದ 10 ಕಿ.ಮೀ. ದೂರದ ಬೆಳಗಾವಿ ಜಿಲ್ಲೆಯ ಹಾರೂಗೇರಿಗೆ ಕಾರಿನಲ್ಲಿ ಕರೆದೊಯ್ಯುತ್ತಿದ್ದರು.

ಆದರೆ ಮುಖ್ಯ ರಸ್ತೆಯನ್ನು ಅಗೆದಿದ್ದರಿಂದ ಸಂಚಾರ ಸಾಧ್ಯವಾಗಲಿಲ್ಲ. ಒಳ ರಸ್ತೆಗಳ ಮೂಲಕ ವೃದ್ಧೆಯನ್ನು ಕರೆದೊಯ್ಯಲು ಪ್ರಯತ್ನಿಸಿದರೂ ಎಲ್ಲ ರಸ್ತೆಗಳು ಬಂದ್ ಆಗಿದ್ದವು. ಹೀಗಾಗಿ ಎರಡು ಗಂಟೆ ವ್ಯಯವಾದರೂ ಆಸ್ಪತ್ರೆ ತಲುಪಲು ಸಾಧ್ಯವಾಗಲಿಲ್ಲ. ಅಷ್ಟರಲ್ಲಿ ವೃದ್ಧೆಗೆ ತೀವ್ರ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. '

ವೃದ್ಧೆಯ ಸಾವಿಗೆ ಮುಖ್ಯ ರಸ್ತೆ ಅಗೆದಿರುವ ತಾಲ್ಲೂಕು ಆಡಳಿತವೇ ಹೊಣೆ' ಎಂದು ಕುಟುಂಬದವರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT