ಬಾಗಲಕೋಟೆ: ಜಿಲ್ಲೆಯ ಕೆಲವು ಅಂಗಡಿಗಳಲ್ಲಿ ಮಾರಾಟ ಮಾಡುವ ಮೆಣಸಿನಕಾಯಿ ಪುಡಿ, ಮಸಾಲ ಪದಾರ್ಥ, ಚಹಾ ಪುಡಿ, ಟೊಮೆಟೊ ಸಾಸ್, ಬೆಲ್ಲ, ಉಪ್ಪು ಮುಂತಾದ ವಸ್ತುಗಳು ಕಳಪೆ ಗುಣಮಟ್ಟದ್ದಾಗಿವೆ. ಇನ್ನೂ ಕೆಲವು ಬಳಕೆಗೆ ‘ಅಸುರಕ್ಷಿತ’ ವಾಗಿವೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳು ಜಿಲ್ಲೆಯಲ್ಲಿ ವಿವಿಧ ಹೋಟೆಲ್, ಕಿರಾಣಿ ಅಂಗಡಿ, ಬಾರ್ ಆ್ಯಂಡ್ ರೆಸ್ಟೊರೆಂಟ್, ಬೇಕರಿ ಸೇರಿದಂತೆ ಹಲವು ಕಡೆಗಳ ಮೇಲೆ ದಾಳಿ ಮಾಡಿ, ಅವುಗಳ ಗುಣಮಟ್ಟ ಪರಿಶೀಲಿಸಿದಾಗ ಗುಣಮಟ್ಟ ಕಳಪೆಯಾಗಿರುವುದು ಕಂಡು ಬಂದಿದೆ.

2024 ಏಪ್ರಿಲ್ನಿಂದ 2024 ಡಿಸೆಂಬರ್ ವರೆಗೆ 1,114 ಆಹಾರ ಮಾದರಿಗಳ ಸರ್ವೆ ಮಾಡಲಾಗಿದೆ. ಅದರಲ್ಲಿ ಕಳಪೆ ಗುಣಮಟ್ಟದ ವಸ್ತುಗಳ ಮಾರಾಟ ಮಾಡುತ್ತಿದ್ದ 15 ವ್ಯಾಪಾರಿಗಳ ವಿರುದ್ಧ ಹೆಚ್ಚುವರಿ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ 15 ಪ್ರಕರಣಗಳನ್ನು ದಾಖಲಿಸಲಾಗಿದೆ. ಅದರಲ್ಲಿ 14 ಪ್ರಕರಣಗಳು ಇತ್ಯರ್ಥವಾಗಿದ್ದು, ₹1.39 ಲಕ್ಷ ದಂಡ ವಿಧಿಸಲಾಗಿದೆ.

ಮೇಲಿನ ಅವಧಿಯಲ್ಲಿ ಅಸುರಕ್ಷಿತ ವಸ್ತುಗಳ ಮಾರಾಟಕ್ಕೆ ಸಂಬಂಧಿಸಿದಂತೆ ಎರಡು ಪ್ರಕರಣ ನ್ಯಾಯಾಲಯದಲ್ಲಿ ದಾಖಲಿಸಲಾಗಿದೆ. ನಾಲ್ಕು ಪ್ರಕರಣಗಳಲ್ಲಿ ಪ್ರಯೋಗಾಲಯದ ವರದಿ ಬರಬೇಕಿದೆ.

ನೋಂದಣಿ, ಪರವಾನಗಿಯಲ್ಲಿ ಹಿಂದೆ: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಗೆ 8,073 ನೋಂದಣಿಗೆ ಗುರಿ ನೀಡಲಾಗಿದ್ದು, ಜನವರಿ ಅಂತ್ಯದ ವರೆಗೆ 5,055 ನೋಂದಣಿ ಮಾಡಲಾಗಿದ್ದು, ಶೇ63ರಷ್ಟು ಗುರಿ ಸಾಧನೆಯಾಗಿದೆ. ಅದೇ ರೀತಿ 2,691 ಪರವಾನಗಿ ನೀಡಲು ಗುರಿ ನೀಡಲಾಗಿದ್ದು, 1,522 ಪರವಾನಗಿ ನೀಡಲಾಗಿದ್ದು, ಶೇ 57ರಷ್ಟು ಸಾಧನೆಯಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಕಲಬೆರಕೆ ಆಹಾರ ಪದಾರ್ಥ ಹಾಗೂ ಆಹಾರದ ಮಾರಾಟದ ದೂರುಗಳು ಆಗಾಗ ಕೇಳಿ ಬರುತ್ತಲೇ ಇವೆ. ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಹೊಂದಿರುವ ಕಲರ್ಗಳ ಬಳಕೆ ಮಾಡಲಾಗುತ್ತಿದೆ. ಅಜಿನಮೊಟೊ ಬಳಸದಂತೆ ಸೂಚಿಸಿದ್ದರೂ, ಹಲವು ಕಡೆಗಳಲ್ಲಿ ಬಳಕೆ ಮಾಡಲಾಗುತ್ತಿದೆ.

ಕರಿಯಲು ಬಳಸಿದ ಎಣ್ಣೆಯನ್ನು ಮತ್ತೆ ಅಡುಗೆಗೆ ಬಳಸುವುದರಿಂದ ಹಲವು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಆದರೆ, ಹೋಟೆಲ್ಗಳಲ್ಲಿ ಸಾಮಾನ್ಯವಾಗಿ ಈ ಎಣ್ಣೆಯನ್ನು ಅಡುಗೆಗೆ ಬಳಸಲಾಗುತ್ತದೆ. ಹೋಟೆಲ್ಗಳಲ್ಲಿ ಕೆಲಸ ಮಾಡುವವರ ವೈದ್ಯಕೀಯ ಪರೀಕ್ಷೆ ಮಾಡಿರಬೇಕು. ಅಡುಗೆ ಮಾಡುವವರು ಮಾಸ್ಕ್, ಕ್ಯಾಪ್ ಧರಿಸಿರಬೇಕು ಎನ್ನುವುದು ಸೇರಿದಂತೆ ಹಲವು ನಿಯಮಗಳಿವೆ. ಆದರೆ, ಅವುಗಳ ಪಾಲನೆ ಆಗುವುದಿಲ್ಲ.

‘ಹೋಟೆಲ್, ಕಿರಾಣಿ, ಆಹಾರ ಉತ್ಪನ್ನಗಳು ಉತ್ಪಾದಿಸುವ ಕಾರ್ಖಾನೆಗಳು, ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಹಲವರು ಇಲಾಖೆಯ ವ್ಯಾಪ್ತಿಯಲ್ಲಿ ಬರುತ್ತಾರೆ’ ಎಂದು ಜಿಲ್ಲಾ ಅಂಕಿತ ಅಧಿಕಾರಿ ಡಾ.ವಿಜಯಕುಮಾರ ‘ಪ್ರಜಾವಾಣಿ‘ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.