ಬಾಗಲಕೋಟೆ: ಕುಡಿತದ ಚಟಕ್ಕೆ ದಾಸನಾಗಿದ್ದ ಪುತ್ರ, ಹಣದ ವಿಚಾರಕ್ಕೆ ಸಂಬಂಧಿಸಿ ವಾಗ್ವಾದ ನಡೆದು ತಾಯಿಯನ್ನೇ ಆಯುಧದಿಂದ ಹೊಡೆದು ಗುರುವಾರ ಕೊಲೆ ಮಾಡಿದ್ದಾನೆ.

ಕಲಾದಗಿ ಪೊಲೀಸ್ ಠಾಣೆ ವ್ಯಾಪ್ತಿಯ ತುಳಸಿಗೇರಿಯಲ್ಲಿ ಕೊಲೆ ನಡೆದಿದೆ. ಶಾವಕ್ಕ ಎಂಬುವವರೇ ಕೊಲೆಗೀಡಾದವರು.

ಶಾವಕ್ಕ, ಅವರ ಪುತ್ರ ಯಂಕಪ್ಪ ಕೂಲಿ ಕೆಲಸ ಮಾಡಿಕೊಂಡು ತುಳಸಿಗೇರಿಯಲ್ಲಿ ವಾಸವಾಗಿದ್ದರು. ಕುಡಿಯುವ ಅಭ್ಯಾಸ ಬೆಳೆಸಿಕೊಂಡಿದ್ದ ಯಂಕಪ್ಪ, ಹಣಕ್ಕಾಗಿ ಆಗಾಗ ತಾಯಿಯೊಂದಿಗೆ ಗಲಾಟೆ ಮಾಡುತ್ತಿದ್ದ.

ತಾಯಿಯನ್ನು ಕೊಲೆ ಮಾಡಿದ ಆರೋಪಿ, ಮನೆ ಬಾಗಿಲಿಗೆ ಬೀಗ ಹಾಕಿಕೊಂಡು ಹೊರ ಹೋಗಿದ್ದ. ಸಂಜೆಯವರು ಯಾರೂ ಹೊರಗೆ ಬಾರದ್ದನ್ನು ಕಂಡು ಕಿಟಕಿ ಮೂಲಕ ವೀಕ್ಷಿಸಿದಾಗ ಶಾವಕ್ಕ ಕೊಲೆಯಾಗಿರುವುದು ಗೊತ್ತಾಗಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪರಿಶೀಲನೆ ನಡೆಸಿದ ಪೊಲೀಸರು ಸ್ಥಳದಲ್ಲಿ ಆಯುಧ ಹಾಗೂ ಆರೋಪಿಯ ರಕ್ತದ ಕಲೆಯ ಬಟ್ಟೆಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನೂ ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಸಿದ್ದಾರ್ಥ ಗೋಯಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.