ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಕ್ರೀದ್ ಆಚರಣೆ: ಮಸಾಲೆ ಪದಾರ್ಥಗಳಿಗೆ ಭಾರಿ ಬೇಡಿಕೆ

Published 16 ಜೂನ್ 2024, 13:39 IST
Last Updated 16 ಜೂನ್ 2024, 13:39 IST
ಅಕ್ಷರ ಗಾತ್ರ

ರಬಕವಿ ಬನಹಟ್ಟಿ: ಜೂನ್‌ 17 ರಂದು ನಡೆಯುವ ಬಕ್ರೀದ್ ಆಚರಣೆಗಾಗಿ ಬೇಕಾಗುವ ಮಸಾಲೆ ಪದಾರ್ಥಗಳಿಗೆ ನಗರದಲ್ಲಿ ಭಾರಿ ಬೇಡಿಕೆ ಕಂಡು ಬಂತು.

ನಗರದ ಮಂಗಳವಾರ ಪೇಟೆಯಲ್ಲಿ ಭಾನುವಾರ ಸಂಜೆ ಜನರು ಮಸಾಲೆ ಪದಾರ್ಥ ಖರೀದಿ ಮಾಡಲು ಮುಂದಾದರು.

ಬಕ್ರೀದ್ ಸಂದರ್ಭದಲ್ಲಿ ಮನೆಯಲ್ಲಿ ತಯಾರಿಸುವ ಸಿಹಿ ತಿನಿಸಿಗೆ ಬೇಕಾಗುವ ಬಾದಾಮಿ, ಗೋಡಂಬಿ, ಪಿಸ್ತಾ, ಅಕ್ರೋಟ್‌, ಚಾರೊಳ್ಳಿ, ಶ್ಯಾವಿಗೆ, ಕಸಕಸೆ, ಒಣ ದ್ರಾಕ್ಷಿ, ಜಾಯಿಕಾಯಿ, ಖಾರೀಕಗಳಿಗೆ ಭಾರಿ ಬೇಡಿಕೆ ಇತ್ತು.

ಚಾರೊಳ್ಳಿ ಒಂದು ಕೆ.ಜಿಗೆ ₹ 2,600, ಅಕ್ರೂಟ್‌ ₹ 1,200, ಪಿಸ್ತಾ ಮತ್ತು ಕಸಕಸೆ ಒಂದು ಕೆ.ಜಿಗೆ ₹ 1,800 ರಂತೆ ಮಾರಾಟವಾದವು ಎಂದು ವ್ಯಾಪಾರಸ್ಥ ಮುಸ್ತಾಕ್ ಲೆಂಗ್ರೆ ತಿಳಿಸಿದರು. ಬಹುತೇಕ ಮಸಾಲೆ ಪದಾರ್ಥಗಳು ಬೆಲೆ ಹೆಚ್ಚಾಗಿತ್ತು.

ಬಕ್ರೀದ್‌ಗಾಗಿ ಜನ ಹೊಸ ಟೊಪ್ಪಿಗೆ, ಅತ್ತರ, ಮೆಹಂದಿ ಮತ್ತು ಕರವಸ್ತ್ರಗಳನ್ನು ಖರೀದಿಸಿದರು ಎಂದು ಮಾರಾಟಗಾರ ಚಿಸ್ತಿಮಿಯಾ ಜಕಾತಿ ತಿಳಿಸಿದರು.

ಬನಹಟ್ಟಿಯ ಮಂಗಳವಾರ ಪೇಟೆಯ ಗಾಂಧಿ ವೃತ್ತ ಬಳಿ ಬಕ್ರಿದ್ ಹಬ್ಬಕ್ಕಾಗಿ ಬೇಕಾಗುವ ವಸ್ತುಗಳನ್ನು ಮಾರಾಟ ಮಾಡುತ್ತಿರುವುದು.
ಬನಹಟ್ಟಿಯ ಮಂಗಳವಾರ ಪೇಟೆಯ ಗಾಂಧಿ ವೃತ್ತ ಬಳಿ ಬಕ್ರಿದ್ ಹಬ್ಬಕ್ಕಾಗಿ ಬೇಕಾಗುವ ವಸ್ತುಗಳನ್ನು ಮಾರಾಟ ಮಾಡುತ್ತಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT