ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಸಿ ಪ್ರಮಾಣ ಪತ್ರ ನೀಡಿ: ಪ್ರಕಾಶ ಕಟ್ಟಿಮನಿ ಅವರಿಗೆ ಮನವಿ

ಬೇಡ ಜಂಗಮ ಸಮಾಜದ ತಾಲ್ಲೂಕಾ ಘಟಕ ಒತ್ತಾಯ
Last Updated 20 ಫೆಬ್ರುವರಿ 2022, 16:34 IST
ಅಕ್ಷರ ಗಾತ್ರ

ಜಮಖಂಡಿ: ಬೇಡ ಜಂಗಮರಿಗೆ (ಜಂಗಮರಿಗೆ) ನ್ಯಾಯಾಲಯ, ಸರ್ಕಾರದ ಸೂರ್ಯನಾಥ ಕಾಮತ ವರದಿ ಸುತ್ತೋಲೆ, 1990 ಇದರ ಪೂರಕದಾಖಲೆ ಪರಿಗಣಿಸಿ ಬೇಡಜಂಗಮ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬೇಕೆಂದು ಒತ್ತಾಯಿಸಿ ಶಿರಸ್ತೇದಾರ್ ಪ್ರಕಾಶ ಕಟ್ಟಿಮನಿ ಅವರಿಗೆ ಮನವಿ ಸಲ್ಲಿಸಿದರು.

ಇಲ್ಲಿನ ತಾಲ್ಲೂಕಾ ಆಡಳಿತ ಸೌಧ ಮುಂದೆ ಬೇಡ ಜಂಗಮ ಸಮಾಜದ ತಾಲ್ಲೂಕಾ ಘಟಕ ಪ್ರಮುಖರು ಮನವಿ ಸಲ್ಲಿಸಿ ಮಾತನಾಡಿ, ನಾವು ಜಾತಿಯಿಂದ ಬೇಡಜಂಗಮರು ಸರ್ಕಾರದ ತಪ್ಪು ನಿರ್ಧಾರಗಳಿಂದ ಸರ್ಕಾರ ವೀರಶೈವ ಲಿಂಗಾಯತ ಎಂದು ಸುಳ್ಳು ಮತ್ತು ತಪ್ಪು ಜಾತಿ ಪ್ರಮಾಣಪತ್ರ ಕೊಡುತ್ತಿದೆ ಎಂದರು. ಈ ಸಂದರ್ಭದಲ್ಲಿ ಮಲ್ಲಯ್ಯ ಮಠದ, ಡಾ.ಬಸಯ್ಯ ಮಠಪತಿ, ಮಹೇಶ್ವರ ಹಿರೇಮಠ, ಶ್ರೀಶೈಲ ಹಿರೇಮಠ, ಪಂಚಾಕ್ಷರಿ ಗೆಣ್ಣೂರಮಠ, ಜಗದೀಶ ಕರಡಿ, ಬಸಯ್ಯ ಪೂಜಾರಿ, ಚಂದ್ರಕಾಂತ ಪೂಜಾರಿ, ಎಸ್.ಕೆ.ಕಂಬಿ, ಬಸಯ್ಯ ಆಲಬಾಳ, ರಾಚಯ್ಯ ಕಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT