ಬುಧವಾರ, ಆಗಸ್ಟ್ 4, 2021
23 °C

ಬೈಕ್ ಕಳ್ಳತನ: ಆರೋಪಿಗಳ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತೇರದಾಳ: ಇಲ್ಲಿನ ಪೊಲೀಸ್ ಠಾಣೆ ವ್ಯಾಪ್ತಿಯ ತೇರದಾಳ, ರಬಕವಿ ಪಟ್ಟಣ ಹಾಗೂ ಜಮಖಂಡಿ ತಾಲ್ಲೂಕಿನ ಮರೇಗುದ್ದಿ ಗ್ರಾಮದಲ್ಲಿ ಬೈಕ್ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ತೇರದಾಳ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ₹ 1.50 ಲಕ್ಷ ಮೊತ್ತದ ಮೂರು ಬೈಕ್ ಜಪ್ತಿ ಮಾಡಿದ್ದಾರೆ.

ರಬಕವಿ ಪಟ್ಟಣದ ಬಸವರಾಜ ಹುಚ್ಚಪ್ಪ ಕೊಕ್ಕನವರ, ಬೆಳಗಾವಿ ಜಿಲ್ಲೆ ಮೂಡಲಗಿಯ ಪ್ರಭಾಕರ ಸುಭಾಸ ಮೆಣಸಿಕಾಯಿ ಹಾಗೂ ಮಹಾಲಿಂಗಪುರದ ಶಾರೂಕಖಾನ ಮುನೀರ ಶೇಖ ಬಂಧಿತರು.

ಎಸ್ಪಿ ಲೋಕೇಶ ಜಗಲಾಸರ, ಡಿಎಸ್ಪಿ ಎಂ. ಪಾಂಡುರಂಗಯ್ಯ ಅವರ ಮಾರ್ಗದರ್ಶನದಲ್ಲಿ ಬನಹಟ್ಟಿ ಸಿಪಿಐ ಜೆ. ಕರುಣೇಶಗೌಡ ಹಾಗೂ ಠಾಣಾಧಿಕಾರಿ ವಿಜಯ ಕಾಂಬಳೆ, ಎಎಸ್‌ಐ ಎಲ್.ಬಿ. ಮಾಳಿ, ಕೆ.ಎಚ್. ಸನಹಟ್ಟಿ, ಆರ್.ವೈ. ಪೂಜೇರಿ, ಎಂ.ಕೆ. ಯಳ್ಳಂಟಿ, ಎ.ಬಿ. ಸವದಿ, ಬಿ.ಎಸ್. ಚೌಲಗಿ, ಎಂ.ಎಲ್. ಬುಗಟಿ, ಎಂ.ಆರ್. ಕೆಂಚೆನ್ನವರ, ವಿ.ಎಸ್. ಅಜ್ಜನಗೌಡರ, ಎ.ಎಂ. ಜಮಖಂಡಿ ಹಾಗೂ ಬಿ.ಸಿ. ಮುದಿಬಸನಗೌಡರ ನೇತೃತ್ವದ ತಂಡ ಆರೋಪಿಗಳನ್ನು ಬಂದಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು