ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಜನ ವಿರೋಧಿ ಸರ್ಕಾರ: ಉಮಾಶ್ರೀ

Published 3 ಮೇ 2024, 15:17 IST
Last Updated 3 ಮೇ 2024, 15:17 IST
ಅಕ್ಷರ ಗಾತ್ರ

ಗುಳೇದಗುಡ್ಡ: ‘ಬಡವರಿಗೆ, ರೈತರಿಗೆ, ನೇಕಾರರಿಗೆ, ಕಾರ್ಮಿಕರಿಗೆ, ಮಹಿಳೆಯರಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದು ನುಡಿದಂತೆ ಕಾಂಗ್ರೆಸ್ ಸರ್ಕಾರ ನಡೆದಿದೆ. ಆದರೆ ಬಿಜೆಪಿ ಬರೀ ಸುಳ್ಳುಗಳನ್ನು ಹೇಳುತ್ತಾ ಜನರನ್ನು ದಾರಿ ತಪ್ಪಿಸುವ ಜನ ವಿರೋಧಿ ಸರ್ಕಾರ’ ಎಂದು ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಟೀಕಿಸಿದರು.

ಪಟ್ಟಣದಲ್ಲಿ ಗುರುವಾರ ನಡೆದ ನೇಕಾರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ‘ಈ ಬಾರಿ ಸತ್ಯ ಮತ್ತು ಸುಳ್ಳುಗಳ ನಡುವೆ ಚುನಾವಣೆ ನಡೆದಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರ ಖಾತೆಗೆ ₹15ಲಕ್ಷ ಹಾಕುತ್ತೇವೆಂದು ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದಿತು. ಆದರೆ ಯಾರೋಬ್ಬರ ಖಾತೆಗೂ ಒಂದುಪೈಸೆ ಬರಲಿಲ್ಲ. ಹೀಗಾಗಿ ಗಾಂಗ್ರೆಸ್‍ಗೆ ಮತ ನೀಡಿ’ ಎಂದರು.

ಮುಖಂಡ ರವೀಂದ್ರ ಕಲಬುರ್ಗಿ ಮಾತನಾಡಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದಲ್ಲಿ ನೇಕಾರಿಕೆ ಉದ್ಯೋಗಕ್ಕೆ ಪುನಶ್ಚೇತನ ಹಾಗೂ ಉತ್ತೇಜನ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ 10ಎಚ್.ಪಿ.ವರೆಗೆ ಉಚಿತ ವಿದ್ಯುತ್, ನೇಕಾರ ಮಕ್ಕಳಿಗೆ ಶಿಷ್ಯವೇತನ ನೀಡಿದ್ದಾರೆ. ಬಡವರ ನೋವಿಗೆ ಸ್ಪಂದಿಸುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಂಯುಕ್ತ ಪಾಟೀಲ ಗೆದ್ದರೆ ಜಿಲ್ಲೆಯ ನೇಕಾರರ ಇನ್ನೂ ಹಲವು ಬೇಡಿಕೆಗಳು ಈಡೇರಲಿವೆ’ ಎಂದರು.

ಶಾಸಕ ಭೀಮಸೇನ ಚಿಮ್ಮನಕಟ್ಟಿ, ಮುಖಂಡರಾದ ಬಿ.ಜೆ.ಗಣೇಶ, ಜವಳಿ, ಗೋ ತಿಪ್ಪೇಶ, ಸಿ.ದೇವಾನಂದ ಬಳ್ಳಾರಿ, ಆರ್.ಜೆ.ರಾಮದುರ್ಗ, ವಿನೋದ ಮದ್ದಾನಿ, ರಾಜು ಜವಳಿ, ಸಿ.ಎಂ.ಚಿಂದಿ, ಹನಮಂತ ಒಡ್ಡೊಡಗಿ, ಮಲ್ಲೇಶಪ್ಪ ಬೆಣ್ಣಿ, ವೈ.ಆರ್.ಹೆಬ್ಬಳ್ಳಿ ಹನಮಂತಸಾ ಕಾಟವಾ, ನಾಗೇಶಪ್ಪ ಪಾಗಿ, ಶಿಲ್ಪಾ ಹಳ್ಳಿ, ಗೋಪಾಲ ಭಟ್ಟಡ, ರಾಜಶೇಖರ ಹೆಬ್ಬಳ್ಳಿ, ವಿಠ್ಠಲಸಾ ಕಾವಡೆ, ರಾಜು ಸಂಗಮ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT