ಇಳಕಲ್: ‘ತತ್ವಜ್ಞಾನಿ ದಿ.ಮಾನಪ್ಪಜ್ಜ ಅವ್ವಣ್ಣಪ್ಪ ನಾಲತವಾಡ ಅವರ ‘ಅನುಭವ ರಸಾಯನ ಗ್ರಂಥ’ ಶ್ರೇಷ್ಠ ತತ್ವಜ್ಞಾನದ ಗ್ರಂಥವಾಗಿದೆ’ ಎಂದು ಜನಾರ್ಧನ ಪಾಣಿಬಾತೆ ಹೇಳಿದರು.

ನಗರದ ಚೌಡೇಶ್ವರಿ ಮಂಗಲ ಭವನದಲ್ಲಿ ಈಚೆಗೆ ನಡೆದ ತತ್ವಜ್ಞಾನಿ ದಿ.ಮಾನಪ್ಪಜ್ಜ ಅವರ ಸ್ಮರಣೋತ್ಸವ ಹಾಗೂ ಅನುಭವ ರಸಾಯನ ಕೃತಿಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಶ್ರೀಶಾಲ್ಯ ಸಂಸ್ಥಾನದ ಕೃಷ್ಣರಾಜರು ಪ್ರಣೀತಪ್ಪ ಅವರು ಬರೆದ ಮೂಲ ಗ್ರಂಥವನ್ನು ದಿ.ಮಾನಪ್ಪಜ್ಜ ಅವರು ಹಳೇಗನ್ನಡಕ್ಕೆ ಗುರು ಶಿಷ್ಯರ ಸಂಭಾಷಣೆಯೊಂದಿಗೆ ಅನುವಾದಿಸಿದ್ದರು. ಈ ಗ್ರಂಥವನ್ನು ಇವತ್ತಿನ ಕನ್ನಡಕ್ಕೆ ಅನುವಾದಿಸುವ ಸೌಭಾಗ್ಯ ನನ್ನದಾಗಿದೆ’ ಎಂದರು.

ಮುರನಾಳದ ಮಳೆರಾಜೇಂದ್ರಮಠದ ನಿತ್ಯಾನಂದ ಸ್ವಾಮೀಜಿ, ಗುರುನಾಥ ಸ್ವಾಮೀಜಿ ಹಾಗೂ ಬ್ರಹ್ಮಾನಂದ ಭೇರಿ ಮಠದ ವಿಶ್ವನಾಥ ಸ್ವಾಮೀಜಿ, ಬಸವಂತಾಚಾರ್ಯ ಗುರುವಿನ ಸಾನ್ನಿಧ್ಯ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಸಾಹಿತಿ ಪ್ರೊ.ವಿಶ್ವನಾಥ ವಂಶಾಕೃತಮಠ ಹಾಗೂ ನಿವೃತ್ತ ಪ್ರಾಚಾರ್ಯ ಶಂಕರ ಕಂದಗಲ್ ಅವರಿಗೆ ಅ‘ಧ್ಯಾತ್ಮ ಸೇವಾ ರತ್ನ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಅಮ್ಮಾ ಸೇವಾ ಸಂಸ್ಥೆಯ ಸಂಸ್ಥಾಪಕ ಗುರುದಾಸ ನಾಗಲೋಟಿ, ವಿಶ್ವಕರ್ಮ ಸಮಾಜದ ಮುಖಂಡರಾದ ರಾಮಣ್ಣ ಮರೋಳ, ವೀರಭದ್ರಪ್ಪ ಹಿಪ್ಪರಗಿ, ಚಿನ್ನಪ್ಪ ಸೂಳಿಭಾವಿ, ಗಂಗಾಧರ ನಾಲತವಾಡ, ವಿಶ್ವಕರ್ಮ ನಾಲತವಾಡ, ಸುವರ್ಣಬಾಯಿ ನಾಲತವಾಡ, ಶಿಲ್ಪಾ ನಾಲತವಾಡ, ವೈಶಾಲಿ ನಾಲತವಾಡ, ಲಕ್ಷ್ಮೀ ನಾಲತವಾಡ, ಮುರಳಿಧರ ನಾಲತವಾಡ, ಶಶಿಧರ ನಾಲತವಾಡ, ವಿಶ್ವಕರ್ಮ ಸಮಾಜದ ಹಿರಿಯರು, ಯುವಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಾಹಿತ್ಯ ಬುತ್ತಿ ಹೊತ್ತು ತಂದ ಶ್ರೀರಕ್ಷಾ ನಾಲತವಾಡ ಎಲ್ಲರ ಗಮನ ಸೆಳೆದರು. ಜಗನ್ನಾಥ ಮರೋಳ ಪ್ರಾರ್ಥಿಸಿದರು. ಮೌನೇಶ ನಾಲತವಾಡ ಪ್ರಾಸ್ತಾವಿಕ ಮಾತನಾಡಿದರು. ಮಂಜುನಾಥ ಮರೋಳ ಪರಿಚಯಿಸಿದರು. ಮೌನೇಶ ಪತ್ತಾರ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.