ಬುಧವಾರ, ಸೆಪ್ಟೆಂಬರ್ 22, 2021
24 °C

ಕೇಂದ್ರದ ಮಾದರಿಯಲ್ಲೇ ರಾಜ್ಯದಲ್ಲೂ ಸಂಪುಟ ವಿಸ್ತರಣೆ: ಯತ್ನಾಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ರಾಜ್ಯದಲ್ಲಿ ಸಮುದಾಯ, ಮೂಲ ಹಿಂದುತ್ವ ಹಾಗೂ ಪ್ರಾದೇಶಿಕತೆ ಆಧರಿಸಿ ಸಂಪುಟದಲ್ಲಿ ಸ್ಥಾನ ನೀಡಲಾಗುತ್ತಿದೆ ಎಂದು ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಂಪುಟ ವಿಸ್ತರಣೆಯಲ್ಲೂ ಪ್ರಧಾನಿ ಇದೇ ಮಾದರಿ ಅನುಸರಿಸಿದ್ದಾರೆ. ರಾಜ್ಯದಲ್ಲೂ ಅದೇ ಆಗಲಿದೆ ಎಂದರು.

ಇದನ್ನೂ ಓದಿ: 

ಮುಖ್ಯಮಂತ್ರಿ ಆಗಿ ಬಸವರಾಜ ಬೊಮ್ಮಾಯಿ ನೇಮಕ ಪಕ್ಷದ ನಿಧಾ೯ರ. ನಾನು ಪಕ್ಷದ ಶಿಸ್ತಿನ ಸಿಪಾಯಿಯಾಗಿ ಅದನ್ನು ಒಪ್ಪುತ್ತೇನೆ ಎಂದರು.

'ಪಂಚಮಸಾಲಿ ಸಮುದಾಯಕ್ಕೆ ಸಿಎಂ ಸ್ಥಾನ ನೀಡಬೇಕಿತ್ತು' ಎಂದು ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಯತ್ನಾಳ, 'ಜಾತಿ ವ್ಯವಸ್ಥೆ ಮೇಲೆ ಸಿಎಂ ಆಯ್ಕೆ ಇಲ್ಲ, ಬಿಜೆಪಿಯಲ್ಲಿ ಇರಲಿಲ್ಲ, ಅದು ಈಗ ಬಂದಿದೆ. ನಾವೆಲ್ಲಾ ಹಿಂದುತ್ವದ ಮೇಲೆ ಆರಿಸಿ ಬಂದವರು. ಜಾತಿಯಿಂದ ಅಲ್ಲ'

'ನಮ್ಮಲ್ಲಿ ವಿಜಯಪುರದಲ್ಲಿ ಹಿಂದೂಗಳೇ ಹೆಚ್ಚು.. ಹೀಗಾಗಿ ಹಿಂದುತ್ವದಿಂದ ಆಯ್ಕೆಯಾಗಿದ್ದೇವೆ.. ನಮ್ಮ ದೇಶ, ನಮ್ಮ ಧಮ೯ದ ಕಲ್ಪನೆಯಲ್ಲಿ ಬೆಳೆದು ಬಂದಿದ್ದೇವೆ' ಎಂದರು.

ಇದನ್ನೂ ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು