ಬಾಗಲಕೋಟೆ: ‘ಯಾರೇ ಅಧಿಕಾರದಲ್ಲಿದ್ದರೂ ಜಾತಿ ಸಮೀಕ್ಷಾ ವರದಿ ಮತ್ತು ಒಳ ಮೀಸಲಾತಿ ಸಮೀಕ್ಷೆ ವಿಷಯಕ್ಕೆ ಕೈ ಹಾಕಿದರೇ ಅದು ಜೇನುಗೂಡಿಗೆ ಕೈ ಹಾಕಿದಂತೆ. ಸುಮ್ಮನೇ, ಇದನ್ನು ಮಾಡುವುದು ಸರಿಯಲ್ಲ’ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.

‘ಯಾವುದೇ ಮೀಸಲಾತಿಯಿರಲಿ ಶೇ 50ಕ್ಕಿಂತ ಹೆಚ್ಚು ಇರಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹೀಗಾಗಿ ಇದೆಲ್ಲ ಜಗಳಕ್ಕೆ ಕಾರಣವಾಗುತ್ತದೆ. ಇಂತಹ ಸಂದರ್ಭದಲ್ಲಿ ಜಾತಿ ಸಮೀಕ್ಷೆಯ ಅಗತ್ಯವಿರಲಿಲ್ಲ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ’ ಎಂದು ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

‘ಪುಕ್ಕಟ್ಟೆ ಕೊಡುವ ಯೋಜನೆಗಳಿಂದ ದೇಶ ಅಥವಾ ರಾಜ್ಯ ಉದ್ಧಾರವಾಗಲ್ಲ. ಇದರಿಂದ ಆರ್ಥಿಕ ಪರಿಸ್ಥಿತಿಯ ಮೇಲೂ ವ್ಯತಿರಿಕ್ತ ಪರಿಣಾಮವಾಗುತ್ತದೆ’ ಎಂದರು.

ವಿಧಾನ ಪರಿಷತ್ತು ಸದಸ್ಯ ಸಿ.ಟಿ.ರವಿ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳಕರ ನಡುವಿನ ಅವಾಚ್ಯ ಪದ ಬಳಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಸವರಾಜ ಹೊರಟ್ಟಿ, ‘ಈ ಬಗ್ಗೆ ಇಬ್ಬರ ಜೊತೆ ಮಾತಾಡಿ ನನ್ನ ನಿರ್ಧಾರ ಹೇಳಿದ್ದೇನೆ. ಸದ್ಯ ನೀತಿ ನಿರೂಪಣಾ ಸಮಿತಿಯಲ್ಲಿದೆ. ಅಲ್ಲಿ ಏನಾಗುತ್ತದೋ ನೋಡೋಣ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.