ಹುನಗುಂದ: ತಾಲ್ಲೂಕಿನ ತಿಮ್ಮಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಂಜವಾಡಗಿ ಕ್ಲಸ್ಟರ್ ಮಟ್ಟದ ಎಫ್ಎಲ್ಎನ್ ಮಕ್ಕಳ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಎಸ್.ಡಿ.ಎಂ.ಸಿ. ನೂತನ ಅಧ್ಯಕ್ಷ ಯಮನಪ್ಪ ವಡ್ಡರ ಉದ್ಘಾಟಿಸಿದರು.

ತಾಲ್ಲೂಕಿನ ಬಿಂಜವಾಡಗಿ ಕ್ಲಸ್ಟರ್, ಸಮೂಹ ಸಂಪನ್ಮೂಲ ಅಧಿಕಾರಿ ಲಕ್ಷ್ಮಣ ಲಮಾಣಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಸಾಮಾಜಿಕವಾಗಿ ಹಿಂದುಳಿದವರ ಮಕ್ಕಳೇ ಹೆಚ್ಚಾಗಿ ಓದುತ್ತಿದ್ದು, ದೈಹಿಕ, ಮಾನಸಿಕ ಮತ್ತು ಬೌದ್ದಿಕವಾಗಿ ಅತ್ಯಂತ ಸಮರ್ಥರಿದ್ದಾರೆ. ಅವರನ್ನು ನಗರದ ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳೊಂದಿಗೆ ಸ್ಪರ್ಧೆಗಿಳಿಯುವಂತೆ ಮಾಡುವಲ್ಲಿ ಇಂತಹ ಕಾರ್ಯಕ್ರಮಗಳು ಪೂರಕವಾಗಿವೆ ಎಂದರು.

ಶಾಲೆಯ ಮುಖ್ಯ ಶಿಕ್ಷಕಿ ಕೆ.ಎಚ್. ಬೆಲ್ಲದ ಮಾತನಾಡಿ, ಕನ್ನಡ ಶಾಲಾ ಕಲಿಕಾ ಹಬ್ಬಗಳು ಮಕ್ಕಳ ಕಲಿಕೆಯನ್ನು ಉತ್ತೇಜಿಸುತ್ತವೆ. ಸಾಕ್ಷಾರತೆ ಮತ್ತು ಅಕ್ಷರ ಜ್ಞಾನವನ್ನು ಬಲಪಡಿಸಲು ಸರ್ಕಾರವು ಕಲಿಕಾ ಹಬ್ಬ ಆಯೋಜಿಸಲಾಗಿದೆ. ಈ ಹಬ್ಬಗಳಲ್ಲಿ ಸ್ಪರ್ಧೆಗಳು ಸಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮಕ್ಕಳಲ್ಲಿ ಕಲಿಕಾ ಪ್ರೇರಣೆ ಮತ್ತು ಪ್ರತಿಭೆಗಳನ್ನು ಹೊರತರುವ ಕಾರ್ಯ ನಡೆಯುತ್ತಿವೆ ಎಂದರು.

ಹಿರೇಬಾದವಾಡಗಿ ಶಾಲೆಯ ಮುಖ್ಯಶಿಕ್ಷಕಿ ಎಸ್.ಜಿ. ಹೂಗಾರ, ಜಾಲಕಮಲದಿನ್ನಿಯ ಪ್ರಬಾರಿ ಮುಖ್ಯ ಶಿಕ್ಷಕ ಆನಂದ ಬೇಗಾರ. ಘಟ್ಟಿಗನೂರ ಪ್ರಬಾರಿ ಮುಖ್ಯ ಶಿಕ್ಷಕಿ ಜಿ.ಎಸ್.ದರಗಾದ ಗ್ರಾಮ ಪಂಚಾಯತ ಸದಸ್ಯೆ ಶರಣಮ್ಮ ರಾಟಿ, ಮಲ್ಲಮ್ಮ ಹನಮಗೌಡರ ಎಸ್.ಡಿ.ಎಮ್.ಸಿ. ಉಪಾಧ್ಯಕ್ಷೆ ಶೈಲಾ ಹೇರೂರ, ಸೈನಜಾ ಬೇಗಂ, ಬಾಷಾಸಾಬ ದರ್ಜಿ, ಮಾಂತೇಶ ಪೂಜಾರಿ, ಗೀತಾ ತಾರಿವಾಳ, ಕಡಿವಾಲ ಇನಾಂ ಶಾಲೆಯ ಮುಖ್ಯ ಗುರುಮಾತೆ ಐ.ಪಿ ನಾಯಕ, ಬಿ.ಎಸ್. ತೋಟಿಗೇರ ಸ್ವಾಗತಿಸಿ ಪರಿಚರಿಸಿದರು. ಮಂಜುನಾಥ ಟಕ್ಕಳಿಕಿ ನಿರೂಪಿಸಿದರು. ಶಾರದಾ ಹೂಲಗೇರಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.