ಬುಧವಾರ, ಜನವರಿ 22, 2020
27 °C
ಕೊಲೆಯಾದ ರಮೀಜಾ ಆರೋಪಿಯ 3ನೇ ಪತ್ನಿ

ಶೀಲ ಶಂಕಿಸಿ ಪತ್ನಿ ಕೊಲೆ ಮಾಡಿದ ಪತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಇಲ್ಲಿನ ವಾಂಬೆ ಕಾಲೊನಿಯಲ್ಲಿ ಸೋಮವಾರ ರಾತ್ರಿ ಪತ್ನಿಯ ಶೀಲ ಶಂಕಿಸಿ ಮಲಗಿದ್ದ ಆಕೆಯ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಪತಿ ಪರಾರಿಯಾಗಿದ್ದಾನೆ.

ಬಾಗಲಕೋಟೆಯ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ರಮೀಜಾ ಲಾಲ್‌ಸಾಬ್ ಬಾಂದಾರ (32) ಕೊಲೆಯಾದ ಮಹಿಳೆ. ರಾತ್ರಿಯಿಡೀ ಪತಿ ಲಾಲ್‌ಸಾಬ್ ಹಾಗೂ ರಮೀಜಾ ನಡುವೆ ಜಗಳ ಆಗಿದ್ದು, ಮನೆಯ ಹೊರಗೆ ಮಲಗಿದ್ದ ಮಕ್ಕಳು ಬೆಳಿಗ್ಗೆ ಬಂದು ನೋಡಿದಾಗ ತಾಯಿ ಕೊಲೆ ಆಗಿದ್ದರು. ಮನೆಯೊಳಗಿದ್ದ ‍ಪರಸಿಕಲ್ಲನ್ನು(ಟೈಲ್ಸ್‌) ರಮೀಜಾ ತಲೆ ಮೇಲೆ ಎತ್ತಿ ಹಾಕಿರುವುದು ಕಂಡುಬಂದಿದೆ.

ಮೂರನೇ ಪತ್ನಿ:ಲಾಲ್‌ಸಾಬ್ ಹಾಗೂ ರಮೀಜಾ ದಂಪತಿಗೆ ನಾಲ್ವರು ಹೆಣ್ಣು ಮಕ್ಕಳಿದ್ದಾರೆ. ಲಾಲ್‌ಸಾಬ್‌ಗೆ ಇದು ಮೂರನೇ ಮದುವೆ. ಮೊದಲ ಪತ್ನಿ ಸಾವಿಗೀಡಾಗಿದ್ದು, ಎರಡನೇ ಪತ್ನಿ ಬೇರೊಬ್ಬನೊಂದಿಗೆ ಓಡಿಹೋಗಿದ್ದಾಳೆ. ಪತ್ನಿಯ ಶೀಲ ಶಂಕಿಸಿ ಲಾಲ್‌ಸಾಬ್ ಪದೇ ಪದೇ ಜಗಳವಾಡುತ್ತಿದ್ದ ಎಂದು ತಿಳಿದುಬಂದಿದೆ. ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದ್ದು, ಲಾಲ್‌ಸಾಬ್ ಮೊದಲ ಪತ್ನಿಯ ಸಾವಿನ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು