ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಮಖಂಡಿ: ಕೃಷ್ಣಾ ನದಿತೀರಯಲ್ಲಿ ಮೊಸಳೆ ಪ್ರತ್ಯಕ್ಷ

Published : 23 ಜೂನ್ 2023, 6:44 IST
Last Updated : 23 ಜೂನ್ 2023, 6:44 IST
ಫಾಲೋ ಮಾಡಿ
Comments

ಜಮಖಂಡಿ: ತಾಲ್ಲೂಕಿನ ಬಿದರಿ ಗ್ರಾಮದ ಹತ್ತಿರದ ಕೃಷ್ಣಾ ನದಿಯಲ್ಲಿ ನೀರು ಖಾಲಿಯಾಗಿದ್ದು, ನದಿತೀರದ ಗಡ್ಡಿ ಪ್ರದೇಶದಲ್ಲಿ ಗುರುವಾರ ಮೊಸಳೆ ಪ್ರತ್ಯಕ್ಷವಾಗಿದೆ.

ಮೊಸಳೆಯನ್ನು ಗ್ರಾಮಸ್ಥರು ಸೆರೆಹಿಡಿದು, ಬಾಯಿಗೆ ಹಗ್ಗ ಕಟ್ಟಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು, ಮೊಸಳೆಯನ್ನು ಟ್ರ್ಯಾಕ್ಟರ್ ಮೂಲಕ ಆಲಮಟ್ಟಿ ಹಿನ್ನೀರಿನಲ್ಲಿ ಬಿಟ್ಟಿದ್ದಾರೆ.

13 ಅಡಿ ಉದ್ದ, ಸುಮಾರು ಆರು ಕ್ವಿಂಟಲ್ ತೂಕದ ಬೃಹತ್ ಮೊಸಳೆಯನ್ನು ಗ್ರಾಮಸ್ಥರಾದ ಪ್ರವೀಣ ಶಿರಗೂರ, ಸಚಿನ ಶಿರಹಟ್ಟಿ, ಮಂಜು ಸಾವಕಾರ, ಗುರು ಶಿರಗೂರ ಸೇರಿದಂತೆ 15 ಜನ ಸೇರಿ ಹಿಡಿದಿದ್ದಾರೆ.

ಮೊಸಳೆ ನೋಡಲು ಬಿದರಿ ಹಾಗೂ ಸುತ್ತಮುತ್ತಲಿನ ಗ್ರಾಮದ ಜನರು ಮುಗಿಬಿದ್ದಿದ್ದರು.

ಜಮಖಂಡಿ ತಾಲ್ಲೂಕಿನ ಬಿದರಿ ಗ್ರಾಮಸ್ಥರು ಸೆರೆಹಿಡಿದ ಮೊಸಳೆಯನ್ನು ನೋಡಲು ಜನರು ನೆರೆದಿರುವುದು
ಜಮಖಂಡಿ ತಾಲ್ಲೂಕಿನ ಬಿದರಿ ಗ್ರಾಮಸ್ಥರು ಸೆರೆಹಿಡಿದ ಮೊಸಳೆಯನ್ನು ನೋಡಲು ಜನರು ನೆರೆದಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT