ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾದಾಮಿ: ವಿದ್ಯುತ್ ಬಿಲ್ ಸಂಗ್ರಹ ಕಾರ್ಯಾಲಯಕ್ಕೆ ಬೀಗ

Published 20 ಮೇ 2024, 14:17 IST
Last Updated 20 ಮೇ 2024, 14:17 IST
ಅಕ್ಷರ ಗಾತ್ರ

ಬಾದಾಮಿ: ಪಟ್ಟಣದ ಮಾರುತಿ ದೇವಾಲಯದ ಎದುರಿನ ಹೆಸ್ಕಾಂ ವಿದ್ಯುತ್ ಬಿಲ್ ಪಾವತಿಸುವ ಕಾರ್ಯಾಲಯಕ್ಕೆ ಬೀಗ ಹಾಕಲಾಗಿದೆ. ಜನರು ವಿದ್ಯುತ್ ಬಿಲ್ ಭರಿಸಲು ಮುಖ್ಯ ಹೆಸ್ಕಾಂ ಕಾರ್ಯಾಲಯಕ್ಕೆ ಅಲೆದಾಡುವಂತಾಗಿದೆ.

ಸಾರ್ವಜನಿಕರ ಬೇಡಿಕೆಯ ಮೇರೆಗೆ ಪಟ್ಟಣದ ಮಧ್ಯದಲ್ಲಿ ಐದಾರು ವರ್ಷಗಳ ಹಿಂದೆ ಹೆಸ್ಕಾಂನಿಂದ ವಿದ್ಯುತ್ ಬಿಲ್ ಪಾವತಿಸುವ ಕಾರ್ಯಾಲಯವನ್ನು ಆರಂಭಿಸಲಾಗಿತ್ತು.

ವರ್ತಕರಿಗೆ, ವೃದ್ಧರಿಗೆ, ಮಹಿಳೆಯರಿಗೆ ವಿದ್ಯುತ್ ಬಿಲ್ ಭರಿಸಲು ಅನುಕೂಲವಾಗಿತ್ತು. ಈಗ ಕಾರ್ಯಾಲಯಕ್ಕೆ ಬೀಗ ಹಾಕಿದ್ದು, ವಿದ್ಯುತ್ ಬಿಲ್ ಭರಿಸಲು ಪಟ್ಟಣದ ಹೊರವಲಯದ ಹೆಸ್ಕಾಂ ಕಾರ್ಯಾಲಯಕ್ಕೆ ಹೋಗಬೇಕಾಗಿದೆ. ಜನರ ತೊಂದರೆ ನಿವಾರಿಸಲು ಬಿಲ್ ಪಾವತಿ ಕಾರ್ಯಾಲಯವನ್ನು ಮತ್ತೆ ಆರಂಭಿಸಬೇಕು ಎಂದು ಪಟ್ಟಣದ ಹಿರಿಯ ನಾಗರಿಕ ಮಹಾಗುಂಡಪ್ಪ ಮಣ್ಣೂರ ಸೇರಿದಂತೆ ಅನೇಕ ನಾಗರಿಕರು ಮತ್ತು ವರ್ತಕರು ಹೆಸ್ಕಾಂಗೆ ಮನವಿ ಮೂಲಕ ಒತ್ತಾಯಸಿದ್ದಾರೆ.

‘ವಿದ್ಯುತ್ ಬಿಲ್ ಪಾವತಿ ಸಲುವಾಗಿ ಪಟ್ಟಣದ ಮಧ್ಯದಲ್ಲಿ ಬಾಡಿಗೆ ರೂಪದಲ್ಲಿ ಒಂದು ಕೊಠಡಿಯನ್ನು ಪಡೆಯಲಾಗಿದೆ. ಇಲ್ಲಿ ಒಬ್ಬ ಸಿಬ್ಬಂದಿಯನ್ನು ನೇಮಿಸಬೇಕು. ನಮ್ಮಲ್ಲಿಯೂ ಸಿಬ್ಬಂದಿಯ ಕೊರತೆ ಇದೆ’ ಎಂದು ಹೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಎ.ಆರ್. ನದಾಫ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಸರ್ಕಾರವು ಗೃಹ ಜ್ಯೋತಿ ಯೋಜನೆ ಅಡಿ ಉಚಿತ ವಿದ್ಯುತ್ ವಿತರಣೆ ಆರಂಭವಾದ ನಂತರ ಮನೆಗಳಿಂದ ವಿದ್ಯುತ್‌ ಬಿಲ್ ಸಂಗ್ರಹ ಕಡಿಮೆಯಾಗಿದೆ. ಹೆಸ್ಕಾಂ ಹಿರಿಯ ಅಧಿಕಾರಿಗಳು ಬಂದು ವೀಕ್ಷಿಸಿ, ರದ್ದು ಮಾಡಿದ್ದಾರೆ. ಮತ್ತೆ ಸೇವೆ ಆರಂಭಿಸಲು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT