ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹4.19 ಲಕ್ಷ ಮೌಲ್ಯದ ಸ್ಪೋಟಕ ಜಪ್ತಿ, ನಾಲ್ವರ ವಿರುದ್ದ ಪ್ರಕರಣ, ಇಬ್ಬರು ವಶಕ್ಕೆ

Published 5 ಜನವರಿ 2024, 15:53 IST
Last Updated 5 ಜನವರಿ 2024, 15:53 IST
ಅಕ್ಷರ ಗಾತ್ರ

ಇಳಕಲ್ : ಗೂಡ್ಸ್‌ ವಾಹನದಲ್ಲಿ ಜಿಲೆಟಿನ್, ತ್ರಿಡಿ ಕಾರ್ಡ್ ಸೇರಿದಂತೆ ₹4.19 ಲಕ್ಷ ಮೌಲ್ಯದ ಸ್ಪೋಟಕ ವಸ್ತುಗಳನ್ನು ಸಾಗಿಸುತ್ತಿದ್ದ ಗೂಡ್ಸ್ ವಾಹನವನ್ನು ಗುರುವಾರ ರಾತ್ರಿ ವಶಕ್ಕೆ ಪಡೆದಿರುವ ಇಳಕಲ್ ನಗರ ಠಾಣೆಯ ಪೊಲೀಸರು, ನಾಲ್ವರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

ಮುದ್ದೇಬಿಹಾಳ ತಾಲ್ಲೂಕಿನ ಬಳವಾಟ ಗ್ರಾಮದ ಸಚಿನಕುಮಾರ ಯಾಳವಾರ, ಬಸನಗೌಡ ಬಿರಾದಾರ ಎಂಬುವವರನ್ನು ವಶಕ್ಕೆ ಪಡೆದಿದ್ದು, ಸಿಂದಗಿಯ ರವಿ ಬಿರಾದಾರ, ಇಳಕಲ್‌ನ ಮಂಜುಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. 

ಸಿಪಿಐ ಸುನಿಲ್ ಸವದಿ ನೇತೃತ್ವದಲ್ಲಿ ಇಳಕಲ್ ನಗರ ಠಾಣೆಯ ಪಿಎಸ್ಐ ಎಸ್.ಆರ್.ನಾಯಕ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT