ಶನಿವಾರ, ಅಕ್ಟೋಬರ್ 1, 2022
23 °C

ಘಟಪ್ರಭಾ ನದಿನೀರಿನಲ್ಲಿ ಕೊಚ್ಚಿ ಹೋದ ರೈತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಘಟಪ್ರಭಾ ನದಿ ನೀರಿನಲ್ಲಿ ಮುಳುಗುತ್ತಿದ್ದ ಪಂಪ್‌ಸೆಟ್‌ ಮೇಲೆತ್ತಲು ನದಿಗಿಳಿದಿದ್ದ ಬೀಳಗಿ ತಾಲ್ಲೂಕಿನ ಚಿಕ್ಕ ಆಲಗುಂಡಿಯ ರೈತ ಬಸವರಾಜ ಹಲಗಲಿ (36) ಭಾನುವಾರ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.

ಡ್ರಮ್‌ಗಳ ಸಹಾಯದಿಂದ ನದಿಯಲ್ಲಿದ್ದ ಪಂಪ್‌ಸೆಟ್‌ ನೀರು ಹೆಚ್ಚಾಗಿ ಮುಳುಗಲಾರಂಭಿಸಿತ್ತು. ಅದನ್ನು ಮೇಲೆತ್ತಲು ನೀರಿಗಿಳಿದಾಗ ಸೆಳೆತಕ್ಕೆ ಸಿಕ್ಕು ಕೊಚ್ಚಿ ಹೋಗಿದ್ದಾರೆ.

‘ಬೋಟ್‌ ಸಹಾಯದಿಂದ ನದಿಯಲ್ಲಿ ಬಸವರಾಜ ಅವರ ಹುಡುಕಾಟ ನಡೆಸಿದೆವು. ಆದರೆ, ಪತ್ತೆಯಾಗಿಲ್ಲ. ಕತ್ತಲಾಗಿದ್ದರಿಂದ ಕಾರ್ಯಾಚರಣೆ ನಿಲ್ಲಿಸಿದ್ದು, ಸೋಮವಾರ ಬೆಳಿಗ್ಗೆ ಮತ್ತೆ ಮುಂದುವರಿಸಲಾಗುವುದು’ ಎಂದು ಜಿಲ್ಲಾ ಅಗ್ನಿ ಶಾಮಕ ದಳದ ಅಧಿಕಾರಿ ಮಲ್ಲಿಕಾರ್ಜುನಪ್ಪ ‘ಪ್ರಜಾವಾಣಿ‘ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು