ಬೀಳಗಿ: ಸೊನ್ನ ಏತ ನೀರಾವರಿ ಕಾಲುವೆಯಲ್ಲಿ ಆಳೆತ್ತರ ಬೆಳೆದಿರುವ ಮುಳ್ಳುಕಂಟಿಗಳಲ್ಲಿ ಮರೆಯಾಗಿದೆ. ಇದೀಗ ರೈತರು ಮುಳ್ಳುಕಂಟಿ ಕಸಕಡ್ಡಿಯ ಹೂಳೆತ್ತಿ ಸ್ವಚ್ಚ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಕಾಲುವೆ ಎಲ್ಲಿದೆ ಹುಡುಕಿ ಕೊಡಿ: ರೈತರು ಕಾಲುವೆ ಎಲ್ಲಿದೆ ಎಂದು ಪ್ರಶ್ನೆ ಕೇಳುವಂತಹ ಪರಿಸ್ಥಿತಿ ಸೊನ್ನ ಏತ ನೀರಾವರಿ ವಿಚಾರದಲ್ಲಿ ನಿರ್ಮಾಣವಾಗಿದೆ.

ಈ ಬಾರಿ ತಾಲ್ಲೂಕಿನಲ್ಲಿ ಮುಂಗಾರು ಮಳೆಯೋ ಅಷ್ಟಕ್ಕಷ್ಟೇ ಪರಿಣಾಮ ರೈತರ ಪರಿಸ್ಥಿತಿ ಚಿಂತಾ ಜನಕವಾಗಿದೆ. ಇಂತಹ ಸಂದರ್ಭದಲ್ಲಿ ಏತ ನೀರಾವರಿ ಕಾಲುವೆಯನ್ನು ಸ್ವಚ್ಛ ಮಾಡದೆ ನೀರನ್ನು ಬಿಟ್ಟರೆ ಕಾಲುವೆಯ ಕೊನೆಯ ಹಂತದ ವರೆಗೆ ನೀರು ಬಂದು ತಲುಪುವುದಿಲ್ಲ. ಇದರಿಂದ ಬಹಳಷ್ಟು ರೈತರ ಹೊಲಗಳಿಗೆ ನೀರು ಸಿಗದೇ ಬಿತ್ತಿದ ಬೆಳೆಗಳು ಒಣಗಿ ಹೋಗುತ್ತವೆ ಎನ್ನುವ ಭಯ ರೈತರಲ್ಲಿ ಮನೆಮಾಡಿದೆ.

ಈ ವಿಷಯದ ಕುರಿತು ರೈತರು ಅಧಿಕಾರಿಗಳನ್ನು ಕೇಳಿದರೆ, ‘ಕಾಲುವೆ ಸ್ವಚ್ಛಗೊಳಿಸಲು ನಮಗೆ ಅನುದಾನ ಬಂದಿಲ್ಲ. ಹಾಗಾಗಿ ಸ್ವಚ್ಛ ಮಾಡಲು ಸಾಧ್ಯವಾಗುವುದಿಲ್ಲ, ಈಗ ನೀರನ್ನು ಬಿಡುತ್ತೇವೆ’ ಎಂದಿದ್ದಾರೆ.

ಸುರೇಶ ಸಿದ್ದಪ್ಪ ಹೂಗಾರ, ಸಲಿಂ ವಾಲಿಕಾರ,ರಾಮಣ್ಣ ಕಣ್ಣಿ, ಭಾರತಿ ಸಿದ್ದಪ್ಪ ಸಾರಾವರಿ, ಶ್ರೀಶೈಲ ಬಂಗಿ, ಶಿವಾನಂದ ರಂಗಪ್ಪ ಮಾದರ, ಶೇಖಪ್ಪ ಕಣ್ಣಿ, ರವಿ ಹೂಗಾರ , ಈರಪ್ಪ ಹೂಗಾರ , ಪ್ರಕಾಶ ನಿಡೋಣಿ, ಗುರು ಪರಡಿಮಠ, ಕೃಷ್ಣಾ ಲಮಾಣಿ, ರಮೇಶ ಬಳಬಟ್ಟಿ ಮುಂತಾದ ರೈತರು ಕಾಲುವೆಯ ಸ್ವಚ್ಚತಾ ಕಾರ್ಯದಲ್ಲಿ ಸುಮಾರು ಒಂದು ವಾರದಿಂದ ತೊಡಗಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.