ಕೆರೂರ: ಇಲ್ಲಿಯ ಹರಣಶಿಕಾರಿ ಜನಾಂಗದ ದುರ್ಗಾದೇವಿ ಜಾತ್ರೆ ಶುಕ್ರವಾರ ಸಂಭ್ರಮದಿಂದ ನಡೆಯಿತು.

ಬೆಳಿಗ್ಗೆ ದೇವಸ್ಥಾನದಲ್ಲಿ ದೇವಿಗೆ ವಿಶೇಷ ಪೂಜೆ ನಡೆಯಿತು. ನಂತರ ಪಲ್ಲಕ್ಕಿಯಲ್ಲಿ ದೇವಿಯ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಸಂಜೆ ದೇವಸ್ಥಾನದಲ್ಲಿ 11 ಕಾಯಿಗಳನ್ನು ದೇವಸ್ಥಾನದ ಅರ್ಚಕ ಬಾಬು ಪೂಜಾರಿ ತಲೆಗೆ ಒಡೆದುಕೊಂಡು,ಈ ಬಾರಿ ಉತ್ತಮ ಮಳೆ, ಬೆಳೆ ಆಗಲಿದೆ ಎಂದು ದೈವವಾಣಿ ನುಡಿದರು.

ದೇವಸ್ಥಾನಕ್ಕೆ ಬಂದಿದ್ದ ನೂರಾರು ಭಕ್ತರು ಸರತಿಯಲ್ಲಿ ನಿಂತು ದೇವಿಯ ಆಶೀರ್ವಾದ ಪಡೆದರು. ಜಾತ್ರೆ ಅಂಗವಾಗಿ ಶಾಸಕ ಭೀಮಸೇನ ಚಿಮ್ಮನಕಟ್ಟಿ, ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಜಿ.ಕಿತ್ತಲಿ, ಬಿ.ಕೆ.ಕೊವಳ್ಳಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ನಿರ್ಮಲಾ ಮದಿ, ಉಪಾಧ್ಯಕ್ಷ ಮೋದಿನಸಾಬ ಚಿಕ್ಕೂರ, ಪಟ್ಟಣ ಪಂಚಾಯಿತಿ ಸದಸ್ಯರಾದ ವಿಠ್ಠಲಗೌಡ ಗೌಡರ, ಬಸವರಾಜ ಹರಣಶಿಕಾರಿ, ಪ್ರಮುಖರಾದ ಬಾಬು ಹರಣಶಿಕಾರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.