ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಲಿಂಗಪುರ | ಭ್ರೂಣಹತ್ಯೆ: ಮತ್ತಿಬ್ಬರ ಬಂಧನ

Published 1 ಜೂನ್ 2024, 0:14 IST
Last Updated 1 ಜೂನ್ 2024, 0:14 IST
ಅಕ್ಷರ ಗಾತ್ರ

ಮಹಾಲಿಂಗಪುರ (ಬಾಗಲಕೋಟೆ): ಪಟ್ಟಣದಲ್ಲಿ ನಡೆದ ಭ್ರೂಣಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರಾದ ಸೋನಾಲಿ ಕಮದ್ ಅವರ ತಂದೆ ಸಂಜಯ ಗೌಳಿ ಹಾಗೂ ತಾಯಿ ಸಂಗೀತಾ ಗೌಳಿ ಅವರನ್ನು ಬಂಧಿಸಲಾಗಿದೆ. ಈವರೆಗೆ ಒಟ್ಟು ಐವರ ಬಂಧನವಾಗಿದೆ.

ಭ್ರೂಣಹತ್ಯೆ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸುಂಬೆ ಸುದ್ದಿಗಾರರ ಜೊತೆ ಮಾತನಾಡಿ, ‘ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು, ಮೂರು ದಿನಗಳಲ್ಲಿ ಅಧಿಕಾರಿಗಳಿಂದ ವರದಿ ತರಿಸಿಕೊಳ್ಳಲಾಗುವುದು. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗುವುದು’ ಎಂದರು.

‘ಭ್ರೂಣ ಹತ್ಯೆಯು ವ್ಯವಸ್ಥಿತ ಯೋಜನಾಬದ್ಧ ಹೇಯ ಕೃತ್ಯ. 2019 ಮತ್ತು 2022ರಲ್ಲಿ ಇಲ್ಲಿ ಭ್ರೂಣಹತ್ಯೆ ನಡೆದಿದ್ದು  ಬೆಳಕಿಗೆ ಬಂದಿತ್ತು. ಮತ್ತೆ ನಡೆದಿರುವುದಕ್ಕೆ ಅಧಿಕಾರಿಗಳ ಸಹಕಾರ ಇರುವುದರ ಬಗ್ಗೆ ಅನುಮಾನವಿದೆ. ಇಂತಹ ಪ್ರಕರಣದಲ್ಲಿ ತ್ವರಿತಗತಿಯಲ್ಲಿ ಶಿಕ್ಷೆ ಕೊಡಿಸುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಪತ್ರ ವ್ಯವಹಾರವನ್ನು ಮಾಡಲು ಆಯೋಗ ಸಿದ್ಧವಿದೆ’ ಎಂದು  ಹೇಳಿದರು.

‘ಎಂಟಿಪಿ (ಮೆಡಿಕಲ್ ಟರ್ಮಿನೇಟಡ್ ಪ್ರೆಗ್ನೆಸಿ) ಮತ್ತು ಪಿಸಿಪಿಎನ್‌ಡಿಟಿ (ಗರ್ಭಪೂರ್ವ ಮತ್ತು ಪ್ರಸವಪೂರ್ವ ಲಿಂಗ ಪತ್ತೆ) ನಿಷೇಧ ಕಾಯ್ದೆಯಡಿ ದೂರು ದಾಖಲಿಸಲು ಅಧಿಕಾರಿಗಳಿಗೆ ಸೂಚಿಸಿರುವೆ. ಕವಿತಾ ಅವರ ಮೊಬೈಲ್‌ಫೋನ್ ಪರಿಶಲನೆ ಮಾಡಲಾಗುತ್ತಿದೆ. ಇಂಥ ಪ್ರಕರಣಗಳಲ್ಲಿ ಬೇರೆಯವರದ್ದು ಪಾತ್ರವಿದ್ದರೆ, ಅವರ ವಿರುದ್ಧವೂ ಕೂಡ ಕ್ರಮ ಜರುಗಿಸ ಲಾಗುವುದು’ ಎಂದರು.

ಸಂಗೀತಾ ಗೌಳಿ

ಸಂಗೀತಾ ಗೌಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT