ಹುನಗುಂದ: ಅಧಿಕಾರಿಗಳು ಸಭೆ ಮಾಡಿ ಕೈಬಿಡಬೇಡಿ. ಸಂತ್ರಸ್ತರಿಗೆ ಶಾಶ್ವತ ಪರಿಹಾರ ಒದಗಿಸುವ ಕಾರ್ಯ ಮಾಡಿ ಎಂದು ವಿಜಯಾನಂದ ಕಾಶಪ್ಪನವರ ಸೂಚಿಸಿದರು.

ಮಂಗಳವಾರ ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ನಡೆದ ಪ್ರವಾಹ ಪೀಡಿತ ಗ್ರಾಮಗಳ ಸ್ಥಳಾಂತರ, ಹಕ್ಕುಪತ್ರ ವಿತರಣೆ, ಮೂಲಭೂತ ಸೌಕರ್ಯಗಳ ಪರಿಶೀಲನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

1976 ರಲ್ಲಿನ ನಾರಾಯಣಪುರ ಹಿನ್ನೀರಿನಿಂದ ಬಾಧಿತ ಪ್ರದೇಶಗಳಲ್ಲಿ ರಸ್ತೆ, ಚರಂಡಿ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳು ಮರಿಚಿಕೆಯಾಗಿವೆ. ಪುನರ್ವಸತಿ ಕೇಂದ್ರಗಳಲ್ಲಿ ಸ್ಮಶಾನ, ದೇವಸ್ಥಾನ, ಸಮುದಾಯ ಭವನ ನಿರ್ಮಾಣಕ್ಕೆ ಜಾಗ ಗುರುತಿಸಿಕೊಟ್ಟಿಲ್ಲ. ಜಾಗ ಹಸ್ತಾಂತರ ಮಾಡಿದರೆ ನಾವೇ ಪಂಚಾಯಿತಿಯಿಂದ ಕೆಲಸ ಮಾಡಿಸಿಕೊಳ್ಳುತ್ತೇವೆ ಎಂದು ಹೇಳಿದರು.

ಭೂಮಿ ಕಳೆದುಕೊಂಡ ರೈತರಿಗೆ ಅನ್ಯಾಯವಾಗಿದೆ. ನಿಗದಿತ ಸಮಯದೊಳಗೆ ಕೆಲಸಗಳು ಆಗುತ್ತಿಲ್ಲ. ಕೆಲವು ಗ್ರಾಮಗಳಿಗೆ ಇನ್ನು ಹಕ್ಕುಪತ್ರ ಕೊಡಲು ಸಾಧ್ಯವಾಗಿಲ್ಲ. ಹಕ್ಕುಪತ್ರ ವಿತರಣೆಯಲ್ಲಿ ಸಣ್ಣ ಪುಟ್ಟ ಸಮಸ್ಯೆಗಳಿದ್ದಲ್ಲಿ ಸಂತ್ರಸ್ತರ ಪುನರ್ವಸತಿ ಕೇಂದ್ರಗಳಿಗೆ ಅಧಿಕಾರಿಗಳು ಭೇಟಿ ನೀಡಿ ಗ್ರಾಮ ಪಂಚಾಯತಿ 9 ನಂಬರ್ ಪುಸ್ತಕ (ಅಸ್ತಿ ವಿವರ) ದಲ್ಲಿನ ಆಧಾರದ ಮೇಲೆ ಠರಾವು ಮಾಡಿ ಹಕ್ಕುಪತ್ರ ವಿತರಿಸಿ ಎಂದರು.

ನಾರಾಯಣಪುರ ಹಿನ್ನೀರಿನಿಂದ ಬಾಧಿತ 13 ಗ್ರಾಮಗಳಲ್ಲಿ 10 ಗ್ರಾಮಗಳ ಸಂತ್ರಸ್ತರಿಗೆ ಹಕ್ಕು ಪತ್ರ ವಿತರಿಸಲಾಗಿದೆ. ಅಡಿಹಾಳ, ಕೆಂಗಲ್ ಮತ್ತು ಕಡಪಟ್ಟಿ ಗ್ರಾಮಗಳಿಗೆ ಹಕ್ಕು ಪತ್ರ ಕೊಟ್ಟಿಲ್ಲ. ಉಳಿದ ಇನ್ನೊಂದು ಗ್ರಾಮವಾದ ಎಮ್ಮಟ್ಟಿಯಲ್ಲಿ ಪುನರ್ವಸತಿ ಕೇಂದ್ರದ ಜಾಗಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಶಾಸಕರ ಪ್ರಶ್ನೆಗಳಿಗೆ ಅಧಿಕಾರಿಗಳು ಉತ್ತರಿಸಿದರು.

ಪುನರ್ವಸತಿ ಕೇಂದ್ರಕ್ಕೆ ಬಂದು 20 ವರ್ಷ ಆಯಿತು. ಸ್ಮಶಾನಕ್ಕೆ ಜಾಗವಿಲ್ಲ. ಮೃತರ ಅಂತ್ಯಕ್ರಿಯೆಗೆ 4-5 ಕೀ.ಮೀ ದೂರ ಹೋಗಬೇಕಾಗಿದೆ ಎಂದು ಜಿಲ್ಲಾಧಿಕಾರಿ ಅವರ ಬಳಿ ಕೂಡಲಸಂಗಮದ ಸುಲೇಮಾನ್ ಮುಲ್ಲಾ ತಮ್ಮ ನೋವು ತೋಡಿಕೊಂಡರು.

ಮುಳುಗಡೆ ಸಂತ್ರಸ್ತರಾದ ನಾವು ಮುಳುಗಿ ಹೋಗುತ್ತಿದ್ದೇವೆ. ಕೆಲವರು ಶಿಥಿಲವಾಗಿರುವ ಶೆಡ್ ಗಳಲ್ಲಿ ವಾಸವಿದ್ದಾರೆ. ನಿತ್ಯ ಅವರ ಬದುಕು ನರಕ ಯಾತನೆಯಾಗಿದೆ. ಅವರಿಗೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಇದ್ದಲಗಿ ಗ್ರಾಮದ ಮಹಾಂತೇಶ ನಾಡಗೌಡ ಅವರು ಶಾಸಕರು ಮತ್ತು ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು.

ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ, ಕೆಲಸ ಕಾರ್ಯಗಳಿಗೆ ಸಂತ್ರಸ್ತರನ್ನು ಅಲೆದಾಡಿಸಬೇಡಿ. ಸಾರ್ವಜನಿಕರ ಬಳಿ ಹೋಗಿ ಕೆಲಸ ಮಾಡಿಕೊಡಿ ಎಂದರು.

ಪುನರ್ವಸತಿ ಮತ್ತು ಪುನರ್ ನಿರ್ಮಾಣದ ವಿಶೇಷ ಜಿಲ್ಲಾಧಿಕಾರಿ ಮಾರುತಿ ಬ್ಯಾಕೋಡ, ಪುನರ್ವಸತಿ ಮತ್ತು ಪುನರ್ ನಿರ್ಮಾಣದ ಉಪ ಮಹಾ ವ್ಯವಸ್ಥಾಪಕ, ಮಹಾದೇವ ಮುರುಗಿ, ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ಪುನರ್ವಸತಿ ಮತ್ತು ಪುನರ್ ನಿರ್ಮಾಣದ ಸೂಪರಿಡೆಂಟ್ ಎಂಜನಿಯರ್ ಸುಜಾತ, ಪುನರ್ವಸತಿ ಕೇಂದ್ರದ ಅಧಿಕಾರಿ ಎಂ.ಬಿ.ನಾಗಠಾಣ, ಆಲಮಟ್ಟಿ, ನಾರಾಯಣಪುರ ಇಲಾಖೆ ಅಧಿಕಾರಿಗಳು ಇತರರಿದ್ದರು.

ನೋಟಿಸ್ ನೀಡಲು ಸೂಚನೆ

ಹುನಗುಂದ ಭೂ ದಾಖಲೆಗಳ ವಿಭಾಗದಲ್ಲಿ ಸಾರ್ವಜನಿಕರ ನಿಗದಿತ ಸಮಯದೊಳಗೆ ಕೆಲಸ ಮಾಡದೇ ವಿಳಂಬ ಮಾಡಿದ್ದರಿಂದ ಸಂಬಂಧಿಸಿದ ಅಧಿಕಾರಿಗಳಿಗೆ ದಂಡ ವಿಧಿಸಿ ನೋಟಿಸ್ ಜಾರಿ ಮಾಡುವಂತೆ ಜಿಲ್ಲಾಧಿಕಾರಿ ಸಂಗಪ್ಪ ಅವರು ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ ಅವರಿಗೆ ಆದೇಶ ಮಾಡಿದ ಘಟನೆ ನಡೆಯಿತು. ತಹಶೀಲ್ದಾರ್ ಕಾರ್ಯಲಯದ ಸಿಬ್ಬಂದಿಗಳ ಕೊಠಡಿಗೆ ಭೇಟಿ ನೀಡಿ ಪ್ರತಿ ಸಿಬ್ಬಂದಿಗಳು ನಿರ್ವಹಿಸುವ ಕೆಲಸ ಕಾರ್ಯಗಳ ಬಗ್ಗೆ ಜಿಲ್ಲಾಧಿಕಾರಿ ಮಾಹಿತಿ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.