ಜಮಖಂಡಿ (ಬಾಗಲಕೋಟೆ): ತಾಲ್ಲೂಕಿನ ಸಿದ್ದಾಪುರ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಹತ್ತಿರ ರಾತ್ರಿ 12.30ಕ್ಕೆ ಕಬ್ಬಿನ ಟ್ರ್ಯಾಕ್ಟರ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಯುವಕರು ಮೃತಪಟ್ಟಿದ್ದಾರೆ.

ಸಿದ್ದಾಪುರ ಗ್ರಾಮದ ವಿಶ್ವನಾಥ ಕುಂಬಾರ(17), ಪ್ರವೀಣ ಶೇಡಬಾಳ(22), ಗಣೇಶ ಅಳ್ಳಿಮಟ್ಟಿ( 20), ಪ್ರಜ್ವಲ್ ಶೇಡಬಾಳ(17) ಮೃತರು.

ಸಿದ್ದಾಪುರ ಗ್ರಾಮದಿಂದ ಸ್ನೇಹಿತರು ಸೇರಿಕೊಂಡು ತಡರಾತ್ರಿ ಶಿರೋಳ ಕಾಡಸಿದ್ಧೇಶ್ವರ ದೇವರ ಜಾತ್ರೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ.

ಕಬ್ಬು ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್ ಗೆ ಕಾರು ರಭಸವಾಗಿ ಹಿಂದಿನಿಂದ ಡಿಕ್ಕಿ ಹೊಡೆದಿದೆ.

ಜಮಖಂಡಿ ಗ್ರಾಮೀಣ ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.