ಬಾಗಲಕೋಟೆ: ಮಧುಮೇಹಿ ಮಕ್ಕಳಿಗೆ ಪ್ರತಿ ತಿಂಗಳು ಮೊದಲ ಮಂಗಳವಾರ ಉಚಿತ ಇನ್ಸುಲಿನ್ ಔಷಧ ನೀಡಲಾಗುತ್ತದೆ ಎಂದು ಎಸ್. ನಿಜಲಿಂಗಪ್ಪ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯರಾದ ಡಾ.ಭುವನೇಶ್ವರಿ ಯಳಮಲಿ ಹೇಳಿದರು.

ಮಕ್ಕಳ ಉಚಿತ ತಪಾಸಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಜ್ಞ ವೈದ್ಯರು ಮಧುಮೇಹಿ ಮಕ್ಕಳಿಗೆ ಪರಿಣಾಮಕಾರಿ ಚಿಕಿತ್ಸೆ ನೀಡುತ್ತಿದ್ದಾರೆ. ಜನರು ಸೌಲಭ್ಯದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಕುಮಾರೇಶ್ವರ ಆಸ್ಪತ್ರೆಯಲ್ಲಿ ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳಿಗೆ ಎಂಡೋಕ್ರೈನಾಲಾಜಿ ವಿಭಾಗದ ತಜ್ಞವೈದ್ಯರಾದ ಡಾ.ಅನಿಲ ಸತ್ಯರಡ್ಡಿ ಮತ್ತು ಡಾ. ನವೀನ ಚರಂತಿಮಠ ಉಚಿತ ತಪಾಸಣೆ ಮಾಡುವರು ಮಕ್ಕಳಿಗೆ ದೈನಂದಿನ ಚಟುವಟಿಕೆ, ಆಹಾರ ಪದ್ಧತಿ ಕಲಿಸಿಕೊಡುತ್ತಾರೆ. 2021 ರಿಂದ ಇಲ್ಲಿಯವರೆಗೆ 960 ಮಕ್ಕಳಿಗೆ ಮಧುಮೇಹ ಕಾಯಿಲೆ ಗುರುತಿಸಿ, ಉಚಿತ ಇನ್ಸುಲಿನ್ ನೀಡಲಾಗುತ್ತಿದೆ ಎಂದು ಹೇಳಿದರು.

ಮಧುಮೇಹ ತಜ್ಞವೈದ್ಯ ಡಾ. ಅನೀಲ ಸತ್ಯರೆಡ್ಡಿ ಮಾತನಾಡಿದರು. ಏರಿಸ್ ಲೈಫ್ ಸೈನ್ಸ್ ಕಂಪನಿಯ ಮಲ್ಲಿಕಾರ್ಜುನ ಬಗಲಿ ಸ್ವಾಗತಿಸಿದರು. ಡಾ.ನವೀನ ಚರಂತಿಮಠ, ಡಾ.ಅಶೋಕ ಬಡಕಲಿ, ಡಾ.ರಮೇಶ ಪೋಳ, ಡಾ.ವಿನಯಕುಮಾರ, ಡಾ.ಅರುಣ ಕಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.