ಶನಿವಾರ, ಜೂನ್ 19, 2021
22 °C

ಮೊದಲ ಹಂತದ ಚುನಾವಣೆ: ಜಮಖಂಡಿ ಉಪವಿಭಾಗ ಮತದಾನ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಮೊದಲ ಹಂತದ ಚುನಾವಣೆಗೆ ಮಂಗಳವಾರ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಮತದಾರರು ಉತ್ಸಾಹದಿಂದ ಬಂದು ಮತ ಚಲಾಯಿಸುತ್ತಿದ್ದಾರೆ.

ಚುಮು ಚುಮು ಚಳಿಯ ನಡುವೆ ಮುಂಜಾನೆ 7 ಗಂಟೆಯಿಂದ ಮತದಾನ ಕೇಂದ್ರದತ್ತ ಮತದಾರರು ಬರುತ್ತಿದ್ದಾರೆ.

ಮತದಾನಕ್ಕೆ ಮತಗಟ್ಟೆಯಲ್ಲಿ ಸಿದ್ಧತೆ ನಡೆದಿದೆ. ಬೀಳಗಿ ತಾಲ್ಲೂಕಿನ ಹೊಸ ಕೊರ್ತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಕೇಂದ್ರದಲ್ಲಿ ಮತದಾನ ನಿಧಾನವಾಗಿ ಚುರುಕುಗೊಳ್ಳುತ್ತಿರುವುದು ಕಂಡುಬಂದಿತು.

ನಾಲ್ಕು ತಾಲ್ಲೂಕುಗಳಲ್ಲಿ ಮತದಾನ ಇಂದು: ಜಮಖಂಡಿ ಉಪವಿಭಾಗದ ವ್ಯಾಪ್ತಿಯ ನಾಲ್ಕು ತಾಲ್ಲೂಕುಗಳ (ಜಮಖಂಡಿ, ಮುಧೋಳ, ರಬಕವಿ-ಬನಹಟ್ಟಿ, ಬೀಳಗಿ) 88 ಗ್ರಾಮ ಪಂಚಾಯಿತಿಗಳ 1397 ಸ್ಥಾನಗಳಿಗೆ ಮಂಗಳವಾರ ಚುನಾವಣೆ ನಡೆಯುತ್ತಿದೆ. ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ  ನಡೆಯಲಿದೆ. 

ಚುನಾವಣಾ ಕಾರ್ಯಕ್ಕೆ 720 ಪ್ರಿಸೆಂಡಿಗ್ ಅಧಿಕಾರಿ, 720 ಸಹಾಯಕ ಪ್ರಿಸೆಂಡಿಂಗ್ ಅಧಿಕಾರಿ ಹಾಗೂ 1440 ಮತಗಟ್ಟೆ ಅಧಿಕಾರಿ ಸೇರಿ ಒಟ್ಟು 2880 ಸಿಬ್ಬಂದಿ ನಿಯೋಜಿಸಲಾಗಿದೆ.

ಜಮಖಂಡಿ ಉಪವಿಭಾಗದಲ್ಲಿ ಒಟ್ಟು 4.80,242 ಮತದಾರರು ಇದ್ದು, ಅದರಲ್ಲಿ 2.39,437 ಪುರುಷರು, 2.40,787 ಮಹಿಳೆಯರು 18 ಇತರೆ ಮತದಾರರಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು