ಬಾಗಲಕೋಟೆ: ಹಳಗನ್ನಡ ಕನ್ನಡ ಭಾಷೆಯ ಅಸ್ಮಿತೆಯಾಗಿದ್ದು, ನಾಡಿನ ಸಾಂಸ್ಕೃತಿಕ ಪರಂಪರೆಯ ಅರಿವಿಗೆ ಹಳಗನ್ನಡ ಸಾಹಿತ್ಯ ಓದುವಿಕೆ ಅತ್ಯಗತ್ಯ. ಮಕ್ಕಳಲ್ಲಿ ಪಠ್ಯದ ಜೊತೆಗೆ ಜೀವನದ ಮೌಲ್ಯಗಳ ಸಂಸ್ಕಾರ ನೀಡಿ ಎಂದು ಬಿ.ವಿ.ವಿ. ಸಂಘದ ಆಡಳಿತಾಧಿಕಾರಿ ವಿಜಯಕುಮಾರ ಕಟಗಿಹಳ್ಳಿಮಠ ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗ, ಪದವಿಪೂರ್ವ ಶಿಕ್ಷಣ ಇಲಾಖೆ, ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಕನ್ನಡ ಉಪನ್ಯಾಸಕರ ಒಕ್ಕೂಟ, ಕಸಾಪ ತಾಲ್ಲೂಕು ಘಟಕದ ಸಹಯೋಗದಲ್ಲಿ ಡಿ.ಎಲ್. ನರಸಿಂಹಾಚಾರ್ಯ ದತ್ತಿ ನಿಧಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಿಗೆ ಹಳಗನ್ನಡ ಸಾಹಿತ್ಯ ಬೋಧನಾ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯವು ಇಂತಹ ಶಿಬಿರಗಳ ಮೂಲಕ ಕನ್ನಡ ಭಾಷಾ ಪರಂಪರೆಯನ್ನು ಮತ್ತಷ್ಟು ಗಟ್ಟಿಗಳಿಸುತ್ತಿದೆ. ಇಂದಿನ ಮಕ್ಕಳಿಗೆ ಪಠ್ಯದ ಜೊತೆಗೆ ನೈತಿಕ ಮೌಲ್ಯಗಳನ್ನು ಕಲಿಸುವ ಸಾಮಾಜಿಕ ಜವಾಬ್ದಾರಿ ಉಪನ್ಯಾಸಕರ ಮೇಲಿದೆ ಎಂದರು.

ಶಿಕ್ಷಣ ಚಿಂತಕ ಸಿದ್ದರಾಮ ಮನಹಳ್ಳಿ ಮಾತನಾಡಿ, ಕನ್ನಡ ಸಾಹಿತ್ಯದ ಆರಂಭವೇ ಹಳಗನ್ನಡದಿಂದಾಗಿರುವಾಗ ಹಳಗನ್ನಡದ ಅರಿವು ಅಗತ್ಯವಾಗಿದೆ. ಕನ್ನಡದ ಭಾಷಾ ಬೋಧಕರು ಸಾಹಿತ್ಯ, ಸಂಸ್ಕೃತಿಯ ವಾಹಕರು ಎಂದರು.

ಶಿಬಿರದ ಸಂಚಾಲಕ ವೀರೇಶ ಬಡಿಗೇರ ಮಾತನಾಡಿ, ಶಿಬಿರದ ಅನುಭವಗಳನ್ನು ತರಗತಿಯಲ್ಲಿ ಮಕ್ಕಳಿಗೆ ಧಾರೆ ಎರೆಯಬೇಕು. ಆ ಮೂಲಕ ಯುವ ಪೀಳಿಗೆಗೂ ಹಳಗನ್ನಡದ ಮಹತ್ವ ಸಾರುವ ಕೆಲಸವಾಗಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷ ಸಂಗಮೇಶ ಕೋಟಿ ಮಾತನಾಡಿ, ಇಂದಿನ ಯುವಜನತೆಗೆ ಕನ್ನಡ ನಾಡು ಹಾಗೂ ಸಾಹಿತ್ಯ ಪರಂಪರೆಯ ಅರಿವು ಮೂಡಿಸುವ ಕಾರ್ಯಕ್ರದಲ್ಲಿ ಹೆಚ್ಚಾಗಬೇಕಿದೆ ಎಂದರು.

ಸಂಚಾಲಕ ಚಂದ್ರಶೇಖರ ಕಾಳನ್ನವರ, ಸಿದ್ದರಾಮ ಖಾನಾಪುರ, ಸಂಗಮೇಶ ಬ್ಯಾಳಿ, ಸಂತೋಷ ಕಾಳನ್ನವರ, ಸಂಗಮೇಶ ಬಡಿಗೇರ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಪಾಂಡುರಂಗ ಸಣ್ಣಪ್ಪನವರ, ಹುನಗುಂದ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸಜ್ಜನ, ಎಚ್.ಬಿ. ಗೊರವ, ಶಿಕ್ಷಣ ಚಿಂತಕ ಸಿ.ಎನ್. ಬಾಳಕ್ಕನವರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.