ಗುಳೇದಗುಡ್ಡ: ‘ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ರಾಜ್ಯಪಾಲ ಗೆಹ್ಲೋಟ್ ಅವರು ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿದ್ದನ್ನು ಕೂಡಲೇ ಹಿಂಪಡೆಯದಿದ್ದರೆ ಹೋರಾಟ ನಿಶ್ಚಿತ’ ಎಂದು ಮುಖಂಡ ಹೊಳಬಸು ಶೆಟ್ಟರ ಹಾಗೂ ಸಿದ್ದರಾಮಯ್ಯ ಅಭಿಮಾನಿ ಬಳಗದವರು ಎಚ್ಚರಿಸಿದ್ದಾರೆ.
‘ರಾಜ್ಯಪಾಲರು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಕೈಗೊಂಬೆಯಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ಅಧಿಕಾರದ ಪ್ರಹಾರ ಮಾಡುತ್ತಿರುವುದು ಸರಿಯಲ್ಲ. ಪ್ರಾಸಿಕ್ಯೂಶನ್ ಹಿಂಪಡೆಯದಿದ್ದಲ್ಲಿ ರಾಜ್ಯದಲ್ಲಿ ರಕ್ತಕ್ರಾಂತಿಯಾಗುವುದರಲ್ಲಿ ಎರಡು ಮಾತಿಲ್ಲ’ ಎಂದು ಸಿದ್ದರಾಮಯ್ಯ ಅಭಿಮಾನಿ ಬಳಗದ ಮಹಾಂತೇಶ ಸರಗಣಾಚಾರಿ, ವಿರೇಶ ಚಿಂದಿ, ಪುರಸಭೆ ಸದಸ್ಯ ವಿಠ್ಠಲ ಕಾವಡೆ, ಚಂದ್ರು ಪಟ್ಟಣಶೆಟ್ಟಿ, ಶ್ಯಾಮ ಮೇಡಿ, ಪ್ರದೀಪ ಕಂಚ್ಯಾಣಿ, ಸಾಗರ ಕೊಣ್ಣುರ, ರವಿ ಬಳಿಗೇರಿ ಸೇರಿದಂತೆ ಇತರರು ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.
ಪ್ರಾಸಿಕ್ಯೂಶನ್ ಹಿಂಪಡೆಯಲು ಆಗ್ರಹ
ಗುಳೇದಗುಡ್ಡ: ‘ಸಿದ್ದರಾಮಯ್ಯನವರ ಮೇಲೆ ರಾಜ್ಯಪಾಲರು ಪ್ರಾಸಿಕ್ಯೂಶನ್‍ಗೆ ಅನುಮತಿ ನೀಡಿದ್ದನ್ನು ತಕ್ಷಣವೇ ಹಿಂಪಡೆಯದಿದ್ದರೆ ರಾಜ್ಯದಾದ್ಯಂತ ಕುರುಬ ಸಮಾಜ ಬೃಹತ್ ಪ್ರಮಾಣದಲ್ಲಿ ಹೋರಾಟ ಮಾಡುತ್ತದೆ’ ಎಂದು ತಾಲ್ಲೂಕು ಕುರುಬ ಸಮಾಜದ ಮುಖಂಡ ರಮೇಶ ಬೂದಿಹಾಳ ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ಕುರುಬ ಸಮಾಜದಿಂದ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ತಾಲ್ಲೂಕು ಕುರುಬ ಸಂಘದ ಅಧ್ಯಕ್ಷ ನಿಂಗಪ್ಪ ವಾಲಿಕಾರ ಮಾತನಾಡಿ, ‘ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಪ್ರಬಲ ನಾಯಕರಾಗಿರುವ ಸಿದ್ದರಾಮಯ್ಯನವರ ಹೆಸರಿಗೆ ಮಸಿ ಬಳಿಯಬೇಕೆಂಬ ಉದ್ದೇಶದಿಂದ ಪ್ರಾಸಿಕ್ಯೂಶನ್ ತಂತ್ರ ಪ್ರಯೋಗಿಸಿದ್ದಾರೆ’ ಎಂದರು.
ಗ್ರಾ.ಪಂ ಅಧ್ಯಕ್ಷ ಹನಮಗೌಡ ಹೊಸಗೌಡ್ರ, ಗ್ರಾ.ಪಂ ಮಾಜಿ ಅಧ್ಯಕ್ಷ ಡಿ.ಎಸ್.ಗೌಡರ ಮಾತನಾಡಿ, ಕೇಂದ್ರ ನಾಯಕರ ಕೈಗೊಂಬೆಯಂತೆ ಮಾಡುತ್ತಿರುವ ರಾಜ್ಯಪಾಲರನ್ನು ರಾಷ್ಟ್ರಪತಿಗಳು ಕೂಡಲೇ ಸೇವೆಯಿಂದ ವಜಾಗೊಳಿಸಬೇಕು’ ಎಂದು ಆಗ್ರಹಿಸಿದರು.
ಲೆಂಕೆಪ್ಪ ಹಿರೇಕುರುಬರ, ವೈ.ಬಿ.ಗೌಡರ, ಬಸಪ್ಪ ಗೋಡಿ, ಪುರಸಭೆ ಸದಸ್ಯ ಹನಮಂತ ಗೌಡರ, ಮೂಕಪ್ಪ ಹೂನೂರ, ಆಸೆಂಗೆಪ್ಪ ಅಚನೂರ, ಮಲ್ಲನಗೌಡ ಪಾಟೀಲ, ಬಸವರಾಜ ತಿಮ್ಮನವರ, ಶಿವನಗೌಡ ಪಾಟೀಲ,ಈಶ್ವರಗೌಡ ಹೊಸಗೌಡ್ರ, ಎಚ್.ಎಸ್.ಘಂಟಿ, ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.