ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಠದ ವಿರೋಧಿಯಲ್ಲ: ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ

ಮುರುಘಾಮಠ ಗದ್ದುಗೆ ತೆರವು ಚರ್ಚೆ
Last Updated 1 ಮೇ 2022, 2:53 IST
ಅಕ್ಷರ ಗಾತ್ರ

ಗುಳೇದಗುಡ್ಡ: ‘ನಾನು ಮಠದ ಅಥವಾ ಸ್ವಾಮೀಜಿ ವಿರೋಧಿಯಲ್ಲ. ನಾನೊಬ್ಬ ಭಕ್ತನಾಗಿ ಹಾಗೂ ಗುಳೇದಗುಡ್ಡದ ಅಭಿವೃದ್ಧಿಯ ದೃಷ್ಟಿಯಿಂದ ಮುರುಘಾಮಠದ ಗದ್ದುಗೆ ಸ್ಥಳಾಂತರಿಸಿ ರಸ್ತೆ ನಿರ್ಮಿಸಲು ಸಲಹೆ ನೀಡಿದ್ದೇನೆ’ ಎಂದು ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ ಸ್ಪಷ್ಟಪಡಿಸಿದರು.

ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಗುಳೇದಗುಡ್ಡದಲ್ಲಿ ಸುಮಾರು ₹40 ಕೋಟಿ ವೆಚ್ಚದ ರಸ್ತೆ ನಿರ್ಮಾಣವಾಗುತ್ತಿದೆ. ಆದರೆ ಸದ್ಯ ರಸ್ತೆಯ ಮಧ್ಯದಲ್ಲಿನ ಮುರುಘಾಮಠದ ಗದ್ದುಗೆಯಿಂದಾಗಿ ಕಾಮಗಾರಿ ನಿಂತಿದೆ. ಇದನ್ನು ಮನದಲ್ಲಿಟ್ಟುಕೊಂಡು ರಸ್ತೆಯಲ್ಲಿನ ಗದ್ದುಗೆ ಮಠದಲ್ಲಿ ಸ್ಥಳಾಂತರಿಸಿ ಅಲ್ಲಿ ನಿತ್ಯ ಪೂಜೆಗೆ ಅವಕಾಶ ಮಾಡಿಕೊಳ್ಳುವುದು ಉತ್ತಮ. ಈ ದೃಷ್ಟಿಯಿಂದ ಗದ್ದುಗೆಯ ಪೂರ್ಣ ಅವಶೇಷಗಳನ್ನು ಮೆಲಕ್ಕೆತ್ತಿ ಅದನ್ನು ಮುರುಘಾಮಠದಲ್ಲಿ ಪ್ರತಿಷ್ಠಾಪಿಸಬೇಕು. ಅಂದಾಗ ಗದ್ದುಗೆಗೂ ಒಂದು ವಿಶೇಷತೆ ಬರುತ್ತದೆ. ಮತ್ತು ಪಟ್ಟಣದ ಅಭಿವೃದ್ಧಿಗೂ ಸಹಕಾರ ನೀಡಿದಂತಾಗುತ್ತದೆ’ ಎಂದು ನಂಜಯ್ಯನಮಠ ಸ್ಪಷ್ಟಪಡಿಸಿದ್ದಾರೆ.

‘ಇದೇ ರಸ್ತೆಯಲ್ಲಿ ಚರ್ಚ್ ಹಾಗೂ ನೇಕಾರ ಸಮಾಜದ ನೀಲಕಂಠೇಶ್ವರ ದೇವಸ್ಥಾನ ಬರುತ್ತದೆ.
ಆದರೆ ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಅವರು ಸಹಕಾರ ನೀಡಿದ್ದಾರೆ. ಆದರೆ ಮುರುಘಾಮಠದ ಗದ್ದುಗೆಯಿಂದ ಅಭಿವೃದ್ಧಿ ಕಾಮಗಾರಿ ನಿಲ್ಲಬಾರದು. ತಾಖತ್‌ ಇದ್ದರೆ ರಸ್ತೆ ಪಕ್ಕದ ಶೆಡ್‌ ತೆರವುಗೊಳಿಸಿ ಎಂದು ಸವಾಲು ಹಾಕುತ್ತಿದ್ದಾರೆ. ಆದರೆ ನಾನು ತಾಖತ್‌, ಸ್ಪರ್ಧೆಯ ಮನುಷ್ಯನಲ್ಲ. ಶೆಡ್ ತೆಗೆಸಲು ನಾನು ಜಾಗದ ಮಾಲೀಕನಲ್ಲ. ಅದು ಪಿಡಬ್ಲ್ಯೂಡಿ ಜಾಗ. ಇಲ್ಲಿ ದ್ವೇಷ, ಅಸೂಹೆ ಬರಬಾರದು’ ಎಂದರು. ಮುಖಂಡ ಉಮೇಶ ಹುನಗುಂದ, ರಾಜು ಸಂಗಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT