ಜಮಖಂಡಿ: ನಗರದ ಉಪ ಕೃಷಿ ನಿರ್ದೇಶಕರು-2 ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮ ಕಾಂಗ್ರೆಸ್-ಬಿಜೆಪಿ ಮುಖಂಡರ ಕಾರ್ಯಕರ್ತರ ಮಾತಿನ ಚಕಮಕಿಯಿಂದ ಪ್ರಾರಂಭದಲ್ಲಿಯೇ ಮುಕ್ತಾಯಗೊಂಡಿತು

ಘಟನೆ ವಿವರ: ಜಮಖಂಡಿ ಕೃಷಿಕ ಸಮಾಜದ ಆಡಳಿತ ಪದಾಧಿಕಾರಿಗಳು, ಸದಸ್ಯರು ಕಟ್ಟಡ ಉದ್ಘಾಟನೆಗೆ ಸ್ವಾಗತ ಕೋರಿ ಬ್ಯಾನರ್ ಅಳವಡಿಸಿದ್ದರು. ಬ್ಯಾನರ್ನಲ್ಲಿ ಮಾಜಿ ಶಾಸಕ ಆನಂದ ನ್ಯಾಮಗೌಡ ಭಾವಚಿತ್ರ ಇರುವುದಕ್ಕೆ ಬಿಜೆಪಿ ಪದಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಬ್ಯಾನರ್ ಅನ್ನು ತೆರವುಗೊಳಿಸಲಾಯಿತು.

‘ಇದು ಸರ್ಕಾರಿ ಕಾರ್ಯಕ್ರಮ. ಇಲ್ಲಿ ಶಿಷ್ಟಾಚಾರ ಪಾಲನೆ ಆಗಬೇಕು. ಬೇರೆಯವರು (ಕಾಂಗ್ರೆಸ್ನ ಆನಂದ ನ್ಯಾಮಗೌಡ) ವೇದಿಕೆ ಮೇಲೆ ಕುಳಿತುಕೊಳ್ಳಲು ಬಿಡುವುದಿಲ್ಲ. ಅವರು ಬಂದರೆ ನಾನು ವೇದಿಕೆಗೆ ಬರಲ್ಲ’ ಎಂದು ಶಾಸಕ ಜಗದೀಶ ಗುಡಗುಂಟಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಇದರಿಂದ ಆನಂದ ನ್ಯಾಮಗೌಡ ವೇದಿಕೆಯ ಮೇಲೆ ಹೋಗದೇ ಮುಂಭಾಗ ಕುಳಿತುಕೊಂಡರು.

ವೇದಿಕೆಯ ಬ್ಯಾನರ್ನಲ್ಲಿ ಶಾಸಕ ಜಗದೀಶ ಗುಡಗುಂಟಿ ಭಾವಚಿತ್ರ ಏಕೆ ಹಾಕಿಲ್ಲ ಎಂದು ಬಿಜೆಪಿ ನಗರ ಮಂಡಲ ಅಧ್ಯಕ್ಷ ಅಜಯ ಕಡಪಟ್ಟಿ, ಯಮನೂರ ಮೂಲಂಗಿ ಅಧಿಕಾರಿಗಳನ್ನು ಪ್ರಶ್ನಿಸಿದರು. ಇದಕ್ಕೆ ಅಧಿಕಾರಿಗಳು ತರಾತುರಿಯಲ್ಲಿ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ, ಶಾಸಕ ಜಗದೀಶ ಗುಡಗುಂಟಿ ಭಾವಚಿತ್ರದ ಮತ್ತೊಂದು ಬ್ಯಾನರ್ ತಂದು ಹಾಕಿಸಿದರು. ಅದರಲ್ಲಿ ಕೃಷಿ ಸಚಿವರ ಭಾವಚಿತ್ರ ಬಿಡಲಾಗಿತ್ತು.

ನಗರಸಭೆ ಸದಸ್ಯರಿಗೆ ಹಾಗೂ ವಿವಿದ ಸಂಘ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಿರಲಿಲ್ಲ. ಇದಕ್ಕೆ ನಗರಸಭೆ ಅಧ್ಯಕ್ಷ ಪರಮಾನಂದ ಗವರೋಜಿ, ‘ಜನಪ್ರತಿನಿಧಿಗಳಿಗೆ ಆಸನದ ವ್ಯವಸ್ಥೆ ಏಕೆ ಮಾಡಿಲ್ಲ’ ಎಂದು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕಟ್ಟಡದ ಶಿಲಾನ್ಯಾಸ ಕಲ್ಲಿನಲ್ಲಿ ನಗರಸಭೆ ಅಧ್ಯಕ್ಷ ಪರಮಾನಂದ ಗವರೋಜಿ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಅನ್ವರ ಮೋಮಿನ ಹೆಸರು ಇಲ್ಲದ ಕಾರಣ ಅಧಿಕಾರಿಗಳ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಬಿಜೆಪಿ ಮುಖಂಡರು ಹಾಗೂ ಕಾಂಗ್ರೆಸ್ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು.

ವೇದಿಕೆಯಲ್ಲಿದ್ದ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ವೇದಿಕೆಯಿಂದ ನಿರ್ಗಮಿಸಿದರು. ಅವರ ಜೊತೆ ಶಾಸಕ ಜಗದೀಶ ಗುಡಗುಂಟಿ, ತೇರದಾಳ ಶಾಸಕ ಸಿದ್ದು ಸವದಿ ಸಹ ವೇದಿಕೆಯಿಂದ ಕೆಳಗಿಳಿದರು.

ತೇರದಾಳ ಶಾಸಕ ಸಿದ್ದು ಸವದಿ ನಗರಸಭೆ ಅಧ್ಯಕ್ಷ ಗವರೋಜಿ ಅವರಿಗೆ ಅಗೌರವವಾಗಿ ಮಾತನಾಡಿದ್ದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಸಿದ್ದು ಸವದಿ ವಿರುದ್ಧ ಘೋಷಣೆ ಕೂಗಿದರು.

Cut-off box - ‘ಎಲ್ಲ ಕಾರ್ಯಕ್ರಮಗಳಲ್ಲೂ ಶಿಷ್ಟಾಚಾರ ಪಾಲಿಸಲಿ’ ‘ಶಾಸಕ ಜಗದೀಶ ಗುಡಗುಂಟಿ ಎಲ್ಲ ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಪಾಲಿಸಬೇಕು. ಈ ಹಿಂದೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ಬಿಜೆಪಿ ಪದಾಧಿಕಾರಿಗಳನ್ನು ವೇದಿಕೆಯಲ್ಲಿ ಕೂರಿಸಿಕೊಂಡು ಕಾರ್ಯಕ್ರಮ ಮಾಡಿಲ್ವಾ. ಅಂದು ಶಿಷ್ಟಾಚಾರ ನೆನಪು ಆಗಲಿಲ್ವಾ? ನಾನು ಶಾಸಕನಾಗಿದ್ದಾಗ ಬಿಜೆಪಿಯ ಮಾಜಿ ಶಾಸಕರು ವೇದಿಕೆಯ ಮೇಲೆ ಕುಳಿತುಕೊಳ್ಳುತ್ತಿದ್ದರು. ಜಮಖಂಡಿಯ ಅಭಿವೃದ್ಧಿ ವಿಷಯದಲ್ಲಿ ನಾವು ಯಾವತ್ತೂ ರಾಜಕೀಯ ಮಾಡಿಲ್ಲ’ ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು. ‘ನಾನು ಶಾಸಕನಾಗಿದ್ದಾಗ ಲಕ್ಕನಕೆರೆಯಲ್ಲಿ ನಗರಯೋಜನಾ ಪ್ರಾಧಿಕಾರದಿಂದ ಹಾಗೂ ಕಡಪಟ್ಟಿ ಜಗದೀಶ್ವರ ದೇವಸ್ಥಾನದ ರಸ್ತೆಯಲ್ಲಿ ಬಿಜೆಪಿಯವರು ಕಾರ್ಯಕ್ರಮ ಮಾಡಿದರು. ನಾನು ಯಾವುದೇ ಆಕ್ಷೇಪ ಮಾಡಲಿಲ್ಲ. ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡುವುದನ್ನು ಬಿಡಬೇಕು. ದ್ವೇಷ ರಾಜಕೀಯ ಮಾಡಬಾರದು. ಜನಪರ ಕೆಲಸ ಮಾಡಿ ಜನರ ಮನಸ್ಸು ಗೆಲ್ಲಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.