ಜಮಖಂಡಿ: ತಾಲ್ಲೂಕಿನ ತುಂಗಳ ಗ್ರಾಮದಲ್ಲಿ ₹50 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದ ಜೀರ್ಣೋದ್ಧಾರ ನೂತನ ಗೋಪುರದ ಕಳಸಾರೋಹಣ ಸೆ.30ರಂದು ಮಧ್ಯಾಹ್ನ 1 ಗಂಟೆಗೆ ಜರುಗಲಿದೆ ಎಂದು ಪ್ರಾಚಾರ್ಯ ಟಿ.ಪಿ. ಗಿರಡ್ಡಿ ಹೇಳಿದರು.

ಪಟ್ಟಣಲದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ 4ಗಂಟೆಗೆ ಹೋಮ, ಹವನ ಜರುಗಲಿದೆ. 10 ಗಂಟೆಗೆ ಗ್ರಾಮದ ಬಸವೇಶ್ವರ ವೃತ್ತದಿಂದ ವಿವಿಧ ವಾದ್ಯಮೇಳದೊಂದಿಗೆ ಮಹಿಳೆಯರು ಪೂರ್ಣಕುಂಭದ ಮೆರವಣಿಗೆ ಜರುಗಲಿದೆ. ದೇವಸ್ಥಾನದ ಆವರಣದಲ್ಲಿ ₹50 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಸಮುದಾಯ ಭವನ ಲೋಕಾರ್ಪಣೆಗೊಳ್ಳಲಿದೆ. ಸಚಿವ ಎಚ್.ಕೆ. ಪಾಟೀಲ ಹಾಗೂ ಮಾಜಿ ಶಾಸಕ ಆನಂದ ನ್ಯಾಮಗೌಡ ವಿಶೇಷ ಅನುದಾನ ನೀಡಿದ್ದಾರೆ. ಅಂದು ತುಂಗಳ-ಸಾವಳಗಿ ಏತ ನೀರಾವರಿಯ ಜಾಕವೆಲ್ಗೆ ತೆರಳಿ ಬಾಗಿನ ಅರ್ಪಣೆ ಮಾಡಲಿದ್ದಾರೆ ಎಂದರು.

ಮುಖಂಡ ಬಸಗೊಂಡ ಕನ್ನಾಳ ಮಾತನಾಡಿ, 1963ರಲ್ಲಿ ವಿಶೇಷ ಮೂರ್ತಿ ಪ್ರಾಣ ಪ್ರತಿಷ್ಠಾಪಿಸಲಾಗಿದೆ. ಪ್ರಾಚೀನ ದೇವಾಲಯ ಇಂದು ಜೀರ್ಣೋದ್ಧಾರಗೊಂಡು ತನ್ನದೆಯಾದ ಇತಿಹಾಸ ಹೇಳುವಂತಾಗಿದೆ ಎಂದರು.

ಕಾಡಸಿದ್ಧೇಶ್ವರ ಮಠದ ಗುರುಶಾಂತಲಿಂಗ ದೇಶಿಕೇಂದ್ರ ಶ್ರೀಗಳು, ಸಿದ್ಧಲಿಂಗ ಶಾಂಭವಿ ಆಶ್ರಮದ ಮಾತೋಶ್ರೀ ಅನುಸೂಯಾತಾಯಿ, ತುಂಗಳ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಬಿ.ಕೆ. ವೈಷ್ಣವಿ ಅಕ್ಕ, ದೇವಸ್ಥಾನದ ಅರ್ಚಕ ಶಂಕರ ಶ್ರೀಹರಿ ಕುಲಕರ್ಣಿ ವಹಿಸುವರು, ಕಾನೂನು ಮತ್ತು ಸಂಸದಿವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಉದ್ಘಾಟಿಸುವರು, ಶಾಸಕ ಜಗದೀಶ ಗುಡಗುಂಟಿ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಸಚಿವ ಆರ್.ಬಿ. ತಿಮ್ಮಾಪುರ, ಬೀಳಗಿ ಶಾಸಕ ಜೆ.ಟಿ. ಪಾಟೀಲ, ನವಲಗುಮದ ಶಾಸಕ ಎನ್.ಎಚ್. ಕೋನರಡ್ಡಿ, ಮಾಜಿ ಸಚಿವ ಎಸ್.ಆರ್. ಪಾಟೀಲ, ವಿಪ ಸದಸ್ಯ ಪಿ.ಎಚ್. ಪೂಜಾರ, ಮಾಜಿ ಶಾಸಕ ಆನಂದ ನ್ಯಾಮಗೌಡ, ಅಜಯಕುಮಾರ ಸರನಾಯಕ ಸೇರಿದಂತೆ ವಿವಿಧ ಗಣ್ಯರು ಆಗಮಿಸಲಿದ್ದಾರೆ.

ಬಸವರಾಜ ನ್ಯಾಮಗೌಡ, ಕಲ್ಲಪ್ಪ ಗಿರಡ್ಡಿ, ಶ್ರೀನಿವಾಸ ಹೊಸೂರ, ಮಲ್ಲಪ್ಪ ಗಿರಡ್ಡಿ, ಮಹೇಶ ನ್ಯಾಮಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.