ಗುವಾಹಟಿ: ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2025 ಟೂರ್ನಿಗೆ ಇಂದು (ಮಂಗಳವಾರ) ಭರ್ಜರಿ ಚಾಲನೆ ದೊರಕಲಿದೆ. ಗುವಾಹಟಿಯಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಭಾರತ ತಂಡವು ಶ್ರೀಲಂಕಾದ ಸವಾಲನ್ನು ಎದುರಿಸಲಿದೆ.

ಟೂರ್ನಿಯಲ್ಲಿ ಒಟ್ಟು ಎಂಟು ತಂಡಗಳು ಭಾಗವಹಿಸುತ್ತಿದ್ದು, ಭಾರತವು ಚೊಚ್ಚಲ ಕಿರೀಟ ಗೆಲ್ಲುವ ನಿರೀಕ್ಷೆಯಲ್ಲಿದೆ. ಇದರೊಂದಿಗೆ 47 ವರ್ಷಗಳ ಕಾಯುವಿಕೆಗೆ ತೆರೆಬೀಳಲಿದೆ.

12 ವರ್ಷಗಳ ನಂತರ ಪ್ರತಿಷ್ಠಿತ ಟೂರ್ನಿಯು ಭಾರತದಲ್ಲಿ ಆಯೋಜನೆಯಾಗುತ್ತಿದೆ. ಭಾರತದ ನಾಲ್ಕು ಕಡೆ ಮತ್ತು ಶ್ರೀಲಂಕಾದ ಕೊಲಂಬೊದಲ್ಲೂ ಪಂದ್ಯಗಳು ನಡೆಯಲಿವೆ.

ರೌಂಡ್ ರಾಬಿನ್ ಮಾದರಿಯಲ್ಲಿ ಟೂರ್ನಿ ನಡೆಯುತ್ತಿದೆ. ಲೀಗ್ ಹಂತದಲ್ಲಿ ಒಟ್ಟು 28 ಪಂದ್ಯಗಳು ನಡೆಯಲಿದೆ.

ಭಾಗವಹಿಸುವ ತಂಡಗಳು:

ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ

ಮಹಿಳೆಯರ ವಿಶ್ವಕಪ್ನಲ್ಲೂ ಭಾರತ vs ಪಾಕಿಸ್ತಾನ ಪಂದ್ಯ

ಪಾಕಿಸ್ತಾನ ತಂಡವು ತನ್ನೆಲ್ಲ ಪಂದ್ಯಗಳನ್ನು ಕೊಲಂಬೊದಲ್ಲಿ ಆಡಲಿದೆ. ಕೊಲಂಬೊದಲ್ಲಿ ಒಟ್ಟು 11 ಪಂದ್ಯಗಳು ನಡೆಯಲಿವೆ.

ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯವು ಅಕ್ಟೋಬರ್ 5ರಂದು ಕೊಲಂಬೊದಲ್ಲಿ ನಡೆಯಲಿದೆ. ಇದು ಲೀಗ್ ಹಂತದಲ್ಲಿ ಭಾರತದ ಪಾಲಿಗೆ ಎರಡನೇ ಪಂದ್ಯವಾಗಿದೆ.

ಭಾರತದ ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ:

ಸೆ.30: ಭಾರತ vs ಶ್ರೀಲಂಕಾ, ಗುವಾಹಟಿ

ಅ.5: ಭಾರತ vs ಪಾಕಿಸ್ತಾನ, ಕೊಲಂಬೊ

ಅ.9: ಭಾರತ vs ದ.ಆಫ್ರಿಕಾ, ವಿಶಾಖಪಟ್ಟಣ

ಅ.12: ಭಾರತ vs ಆಸ್ಟ್ರೇಲಿಯಾ, ವಿಶಾಖಪಟ್ಟಣ

ಅ.19: ಭಾರತ vs ಇಂಗ್ಲೆಂಡ್, ಇಂದೋರ್

ಅ.23: ಭಾರತ vs ನ್ಯೂಜಿಲೆಂಡ್, ನವಿ ಮುಂಬೈ

ಅ.26: ಭಾರತ vs ಬಾಂಗ್ಲಾದೇಶ, ನವಿ ಮುಂಬೈ

*ಈ ಎಲ್ಲ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 3ಕ್ಕೆ ಆರಂಭವಾಗಲಿದೆ.

ಸೆಮಿಫೈನಲ್-ಫೈನಲ್ ಪಂದ್ಯಗಳ ವಿವರ

ಸೆಮಿಫೈನಲ್ ಪಂದ್ಯಗಳು ಅಕ್ಟೋಬರ್ 29 ಹಾಗೂ 30ರಂದು ನವಿ ಮುಂಬೈಯಲ್ಲಿ ನಡೆಯಲಿವೆ. ಫೈನಲ್ ಪಂದ್ಯವು ನವೆಂಬರ್ 2, ಭಾನುವಾರದಂದು ನಡೆಯಲಿದೆ. ಪಾಕಿಸ್ತಾನ ಒಂದೊಮ್ಮೆ ಸೆಮಿಫೈನಲ್, ಫೈನಲ್ ತಲುಪಿದರೆ ಆ ಪಂದ್ಯಗಳಿಗೂ ಕೊಲಂಬೊ ಆತಿಥ್ಯ ವಹಿಸಲಿದೆ.

ಭಾರತ ತಂಡ ಇಂತಿದೆ:

ಹರ್ಮನ್ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂದಾನ (ಉಪ ನಾಯಕಿ), ಪ್ರತಿಕಾ ರಾವಲ್, ಹರ್ಲೀನ್ ಡಿಯೋಲ್, ಜೆಮಿಮಾ ರಾಡ್ರಿಗಸ್, ರಿಚಾ ಘೋಷ್, ಉಮಾ ಚೆಟ್ರಿ, ರೇಣುಕಾ ಸಿಂಗ್ ಠಾಕೂರ್, ದೀಪ್ತಿ ಶರ್ಮಾ, ಸ್ನೇಹ ರಾಣಾ, ಶ್ರೀ ಚರಣಿ, ರಾಧಾ ಯಾದವ್, ಅಮನ್ಜೋತ್ ಕೌರ್, ಅರುಂಧತಿ ರೆಡ್ಡಿ, ಕ್ರಾಂತಿ ಗೌಡ.

ಏಳು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ

ಐಸಿಸಿ ಮಹಿಳಾ ವಿಶ್ವಕಪ್ ಸಂಪೂರ್ಣ ವೇಳಾಪಟ್ಟಿಗಾಗಿ ಈ ಲಿಂಕ್ ಕ್ಲಿಕ್ಕಿಸಿ...
.ಐಸಿಸಿ ಮಹಿಳಾ ಏಕದಿನ ವಿಶ್ವಕಪ್: ಐಸಿಸಿ ಪ್ರಶಸ್ತಿ ಮೇಲೆ ಭಾರತದ ಕಣ್ಣು.ಏಷ್ಯಾ ಕಪ್ ಟ್ರೋಫಿ ‘ಹೊತ್ತೊಯ್ದ’ ನಕ್ವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.