ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾದಾಮಿ: ಅನುದಾನದ ನಿರೀಕ್ಷೆಯಲ್ಲಿ ಹಂಪಿ ಕನ್ನಡ ವಿ.ವಿ. ಕಲಾಕೇಂದ್ರ

Published 13 ಫೆಬ್ರುವರಿ 2024, 7:52 IST
Last Updated 13 ಫೆಬ್ರುವರಿ 2024, 7:52 IST
ಅಕ್ಷರ ಗಾತ್ರ

ಬಾದಾಮಿ: ಬೆಳ್ಳಿ ಹಬ್ಬದ ಆಚರಣೆಯ ಹೊಸ್ತಿಲಲ್ಲಿರುವ ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಕಲಾ ಕೇಂದ್ರದ ಕಟ್ಟಡಕ್ಕೆ ಹೊಸ ಸರ್ಕಾರದಿಂದ ಅನುದಾನದ ನಿರೀಕ್ಷೆಯಲ್ಲಿ ಸ್ಥಳೀಯ ಸಂಘಟನೆಗಳು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಇದ್ದಾರೆ.

ಬನಶಂಕರಿ ದೇವಾಲಯದ ಸಮೀಪದ ಶಿವಯೋಗಮಂದಿರ ರಸ್ತೆಯಲ್ಲಿ 1999ರಲ್ಲಿ ಅಂದಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಎಂ.ಎಂ. ಕಲಬುರ್ಗಿಯವರು ಚಾಲುಕ್ಯರ ನಾಡಿನಲ್ಲಿ ಕಲಾ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಾಸ್ತುಶಿಲ್ಪ, ಪ್ರತಿಮಾಶಾಸ್ತ್ರ ಮತ್ತು ಚಿತ್ರಕಲಾ ಕೇಂದ್ರವನ್ನು ಆರಂಭಿಸಿದರು.

ಪ್ರವಾಸೋದ್ಯಮ ಇಲಾಖೆಯಿಂದ ಕೇಂದ್ರದ ಪಕ್ಕದಲ್ಲಿ ನೂತನ ಹೋಟೆಲ್ ಕಟ್ಟಡ ಕಾಮಗಾರಿ ಆರಂಭವಾಗಿದೆ. ಕಲಾಕೇಂದ್ರವನ್ನು ತೆರವುಗೊಳಿಸಲು ನಾಲ್ಕು ವರ್ಷಗಳ ಹಿಂದೆಯೇ ಪ್ರವಾಸೋದ್ಯಮ ಇಲಾಖೆ ನೋಟಿಸ್ ನೀಡಿದೆ. ಆದರೂ ಇಲ್ಲಿ ಇನ್ನೂ ವರ್ಗಗಳು ನಡೆಯುತ್ತವೆ.

‘2019ರಲ್ಲಿ ಬಾದಾಮಿ ನಗರ ಅಭಿವೃದ್ಧಿ ಹೋರಾಟ ಸಮಿತಿ ಮತ್ತು ನಿಸರ್ಗ ಬಳಗವು ಅಂದಿನ ಸಚಿವ ಗೋವಿಂದ ಕಾರಜೋಳ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಲಾಗಿತ್ತು. ಸರ್ಕಾರದಿಂದ ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಬಿಡುಗಡೆ ಮಾಡಲಿಲ್ಲ’ ಎಂದು ಸಂಘಟನೆಗಳ ಪದಾಧಿಕಾರಿಗಳು ಬೇಸರ ವ್ಯಕ್ತಪಡಿಸಿದರು.

‘ಹೋಟೆಲ್ ಕಟ್ಟಡದ ಸಮೀಪವೇ ಕಲಾ ಕೇಂದ್ರದ ನಾಲ್ಕು ಎಕರೆ ನಿವೇಶನವಿದೆ. ನೂತನ ಕಟ್ಟಡಕ್ಕೆ ಇದುವರೆಗೂ ಅನುದಾನ ಮಂಜೂರು ಆಗಿಲ್ಲ. ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಕಟ್ಟಡ ಕಾಮಗಾರಿಗೆ ಮುಂಗಡ ಪತ್ರದಲ್ಲಿ ಅನುದಾನ ಮಂಜೂರು ಮಾಡಬೇಕು. ಸ್ಥಳೀಯ ಶಾಸಕರು ಸರ್ಕಾರಕ್ಕೆ ಒತ್ತಾಯಿಸಬೇಕು’ ಎಂದು ನಗರ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಮಲ್ಲಣ್ಣ ಹಿರೇಹಾಳ, ನಿಸರ್ಗ ಬಳಗದ ಅಧ್ಯಕ್ಷ ಎಸ್.ಎಚ್. ವಾಸನ ತಿಳಿಸಿದ್ದಾರೆ.

ನೂತನ ಕಟ್ಟಡಕ್ಕೆ ಕನ್ನಡ ಹಂಪಿ ವಿದ್ಯಾಲಯದ ಹಿಂದಿನ ಕುಲಪತಿ ಸ.ಚಿ. ರಮೇಶ ಸರ್ಕಾರದಿಂದ ₹20 ಕೋಟಿ ಅನುದಾನ ಮಂಜೂರು ಮಾಡಲು ಸಚಿವರಿಗೆ ಮತ್ತು ಉನ್ನತ ಶಿಕ್ಷಣ ಇಲಾಖೆಗೆ ಪತ್ರದ ಮೂಲಕ ತಿಳಿಸಿದ್ದನ್ನು ಸ್ಮರಿಸಬಹುದು.

‘ಇಲ್ಲಿ ಅಧ್ಯಯನ ಮಾಡಿದ ಸಾವಿರಾರು ಕಲಾ ವಿದ್ಯಾರ್ಥಿಗಳು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಅನೇಕ ವಿದ್ಯಾರ್ಥಿಗಳು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಕಲಾ ಕೇಂದ್ರದ ಕಟ್ಟಡಕ್ಕೆ ಅನುದಾನವನ್ನು ಮಂಜೂರು ಮಾಡಬೇಕು ’ ಎಂದು ಇಲ್ಲಿನ ಹಂಪಿ ಕನ್ನಡ ವಿವಿ ಕೇಂದ್ರದ ಮುಖ್ಯಸ್ಥ ಮೋಹನರಾವ್ ಪಂಚಾಳ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಬೇಸರ ವ್ಯಕ್ತಪಡಿಸಿದ ಸಂಘಟನೆಗಳು ಅನುದಾನ ಮಂಜೂರಾತಿಗೆ ನಿರ್ಲಕ್ಷ್ಯ ಬದುಕನ್ನು ಕಟ್ಟಿಕೊಂಡ ಕಲಾವಿದರು 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT