ಇಳಕಲ್: ಜಮಾತೆ ಇಸ್ಲಾಮಿ ಹಿಂದ್ ವತಿಯಿಂದ ನಗರದ ವಿಜಯ ಮಹಾಂತೇಶ ಅನುಭವ ಮಂಟಪದ ಆವರಣದಲ್ಲಿ ಡಿ.26, 27 ಮತ್ತು 29ರಂದು ಸಾಯಂಕಾಲ 6.45ಕ್ಕೆ ಕನ್ನಡದಲ್ಲಿ ಸಾರ್ವಜನಿಕ ಕುರ್ಆನ್ ಪ್ರವಚನ ನಡೆಯಲಿದೆ.

ಡಿ.26ರಂದು ಹಂಪಿ ಗಾಯತ್ರಿ ಪೀಠ ಸಂಸ್ಥಾನಮಠದ ದಯಾನಂದಪುರಿ ಶ್ರೀ ಹಾಗೂ ಸೈಯ್ಯದ್ ಷಾ ಮುರ್ತುಜಾ ಖಾದ್ರಿ ದರ್ಗಾದ ಸಜ್ಜಾದ ನಶೀನ್ ಆದ ಫೈಸಲ್ಪಾಷಾ ಸಾನ್ನಿಧ್ಯ ವಹಿಸುವರು. ಮುಖ್ಯ ಅತಿಥಿಯಾಗಿ ಶಾಸಕ ವಿಜಯಾನಂದ ಕಾಶಪ್ಪನವರ ಆಗಮಿಸುವರು. ಅಧ್ಯಕ್ಷತೆಯನ್ನು ಜಮಾತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷ ಮಹಮ್ಮದ ಸಅದ ವಹಿಸುವರು. ಮಂಗಳೂರಿನ ಶಾಂತಿ ಪ್ರಕಾಶನ ವ್ಯವಸ್ಥಾಪಕ ಮಹಮ್ಮದ ಕುಂಞಿ 'ಕೆಡುಕು ಮುಕ್ತ ಸಮಾಜ' ವಿಷಯವಾಗಿ ಪ್ರವಚನ ನೀಡುವರು.

ಡಿ.27, ಶನಿವಾರದಂದು ತಿಂಥಣಿ ಕನಕಗುರು ಪೀಠದ ಸಿದ್ದರಾಮನಂದ ಪುರಿ ಶ್ರೀ ಸಾನ್ನಿಧ್ಯ ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಆಗಮಿಸುವರು. ಮಹಮ್ಮದ ಕುಂಞಿ 'ದೇಶದ ಹಿತಚಿಂತನೆ, ನಮ್ಮ ಹೊಣೆಗಾರಿಕೆ' ವಿಷಯವಾಗಿ ಮಾತನಾಡುವರು.

ಡಿ.28, ಭಾನುವಾರದಂದು ಗದಗ ತೋಂಟದಾರ್ಯ ಮಠದ ಸಿದ್ದರಾಮ ಶ್ರೀ ಹಾಗೂ ವಿಜಯ ಮಹಾಂತೇಶ್ವರ ಮಠದ ಗುರುಮಹಾಂತ ಶ್ರೀ ಸಾನ್ನಿಧ್ಯ ವಹಿಸುವರು. ಮಹಮ್ಮದ ಕುಂಞಿ 'ಸುಭದ್ರ ಕುಟುಂಬ, ಸದೃಢ ಸಮಾಜ' ವಿಷಯವಾಗಿ ಪ್ರವಚನ ನೀಡುವರು ಎಂದು ಜಮಾತೆ ಇಸ್ಲಾಮಿ ಹಿಂದ್ ಇಳಕಲ್ ಘಟಕದ ಅಧ್ಯಕ್ಷ ಹುಸೇನ್ ಬಾದಷಾ ಸೂಳೇಭಾವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.