ಬಾಗಲಕೋಟೆ: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು. 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹುತಾತ್ಮ ಯೋಧರನ್ನು ಸ್ಮರಿಸಿ, ಶ್ರದ್ಧಾಂಜಲಿ ಅರ್ಪಿಸಲಾಯಿತು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ. ನಂಜ್ಯಯನಮಠ ಮಾತನಾಡಿ, ಕಾರ್ಗಿಲ್ ವಿಜಯೋತ್ಸವ ಅತ್ಯಂತ ಗರ್ವದ ಕ್ಷಣವಾಗಿದೆ. ಜವಾನರ ತ್ಯಾಗ, ಧೈರ್ಯ, ವೀರಗಾಥೆಯಿಂದಾಗಿ ಪಾಕ್ ಆಕ್ರಮಿತ ಭೂಭಾಗ ಮುಕ್ತಗೊಳಿಸಿದರು ಎಂದರು.

ಶಾಸಕ ಎಚ್.ವೈ. ಮೇಟಿ ಮಾತನಾಡಿ, ಈ ವಿಜಯೋತ್ಸವ ದೇಶಭಕ್ತಿಯ ಸಂಕೇತವಾಗಿದೆ. ದೇಶದ ರಕ್ಷಣೆಗೆ ಪ್ರಾಣವನ್ನೇ ತ್ಯಾಗ ಮಾಡಿದ ವೀರ ಸೇನಾನಿಗಳಿಗೆ ನಮನ ಸಲ್ಲಿಸಬೇಕು ಎಂದು ಹೇಳಿದರು.

ಜಿಲ್ಲಾ ವಕ್ತಾರ ಚಂದ್ರಶೇಖರ ರಾಠೋಡ, ಪ್ರಚಾರ ಸಮಿತಿ ಜಿಲ್ಲಾ ಅಧ್ಯಕ್ಷ ನಾಗರಾಜ ಹದ್ಲಿ ಮಾತನಾಡಿ, ಬಲಿದಾನ ವ್ಯರ್ಥವಾಗದಂತೆ ಒಗ್ಗಟ್ಟಿನಿಂದ ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಿಕೊಳ್ಳೋಣ ಎಂದರು.

ಜಿಲ್ಲಾ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ರಾಜು ಮನ್ನಿಕೇರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಬಳ್ಳಾರಿ, ನಿವೃತ್ತ ಯೋಧರ ವಿಭಾಗದ ಜಿಲ್ಲಾಧ್ಯಕ್ಷ ಪ್ರಭು ಕಾಳಹಸ್ತಿಮಠ, ಕತುಬುದ್ದೀನ್ ಖಾಜಿ, ಆನಂದ ಜಿಗಜಿನ್ನಿ, ನಿವೃತ್ತ ಯೋಧರಾದ ಹಜರತ್ತ ಹಳ್ಳಿ, ಅಮರೇಶ ಅಗಸಿಮುಂದಿನ, ಮಲ್ಲಪ್ಪ ಹುಣಚಗಿ, ವೆಂಕನಗೌಡ ಹಗೆದಾಳ, ಗ್ಯಾನಪ್ಪ ಪೂಜಾರಿ, ರೇಣುಕಾ ನ್ಯಾಮಗೌಡ, ಮಂಜುಳಾ ಭುಸಾರೆ, ದ್ಯಾಮಣ್ಣ ಗಾಳಿ, ಇಬ್ರಾಹಿಂ ಕಲಾದಗಿ, ಅಭಿಷೇಕ ತಳ್ಳಿಕೇರಿ, ಪ್ರಭು ರುದ್ರಾಕ್ಷಿ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.