ಕೆರೂರ: ‘ನಮ್ಮ ಜಾತಿಗಳು ನಮ್ಮ ಮನೆಯ ಹೊಸ್ತಿಲ ಒಳಗೆ ಇರಲಿ, ಹೊಸ್ತಿಲು ದಾಟಿದ ತಕ್ಷಣ ಎದೆ ತಟ್ಟಿ ಹೇಳು ನಾನೊಬ್ಬ ಹಿಂದೂ ಎಂದು. ಅಂದಾಗ ಮಾತ್ರ ಹಿಂದೂ ಧರ್ಮವನ್ನು ಜಾಗೃತಿಗೊಳಿಸಲು ಸಾಧ್ಯ’ ಎಂದು ದೇವಾಂಗಮಠದ ರುದ್ರಮುನಿ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ಶನಿವಾರ ನಡೆದ ವಿರಾಟ್ ಹಿಂದೂ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದರು.

‘ಸನಾತನ ಧರ್ಮದ ಉಳಿವಿಗಾಗಿ, ಭಾರತೀಯ ನೆಲದ ಸಂಸ್ಕೃತಿ - ಪರಂಪರೆಯನ್ನು ಉಳಿಸಿ ಬೆಳಸಿಕೊಂಡು ಹೋಗುವುದು ನಮ್ಮೇಲ್ಲರ ಜವಾಬ್ದಾರಿಯಾಗಿದೆ’ ಎಂದು ಹೇಳಿದರು.

‘ಪ್ರತಿಯೊಬ್ಬ ತಂದೆ-ತಾಯಿಗಳು ನಿಮ್ಮ ಮಕ್ಕಳಿಗೆ ಮೊದಲು ಸಂಸ್ಕಾರವನ್ನು ಕಲಿಸಿ, ನಂತರ ವಿದ್ಯೆ ಕಲಿಸಿ. ದೇಶವನ್ನು ಮತ್ತು ಹಿಂದೂ ಧರ್ಮವನ್ನು ಗಟ್ಟಿಗೊಳಿಸಲು ಯುವಕರ ಪಾತ್ರ ಪ್ರಮುಖವಾಗಿದೆ’ ಎಂದು ಮುಖ್ಯ ವಕ್ತಾರರಾದ ಪ್ರಭು ಹೂಗಾರ ಹೇಳಿದರು.

ಸ್ವರೂಪಾನಂದ ಸ್ವಾಮಿಗಳು ಕಗಲಗೊಂಬ, ಶಿವುಕುಮಾರ ಶಿವಾಚಾರ್ಯ ಸ್ವಾಮೀಜಿ ಚರಂತಿಮಠ ಇವರು ಸಾನ್ನಿಧ್ಯ ವಹಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧನಂಜಯ ಕಂದಕೂರ ವಹಿಸಿದ್ದರು. ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಶಾಂತಗೌಡ ಪಾಟೀಲ, ಬಸವರಾಜ ಬೊಂಬ್ಲೆ, ಶರಣು ಸಜ್ಜನ, ಲಕ್ಷ್ಮೀ ಪಟೆದಾರ, ರಮೇಶ ದಾಸರ, ರಾಚಣ್ಣ ಕುಂಬಾರ, ಹನಮಂತ ಪ್ರಭಾಕರ, ಅಶೋಕ ಜಿಗಳೂರ, ಭರಮಪ್ಪ ಸುಣಗಾರ, ಗುಂಡಪ್ಪ ಬೋರಣ್ಣವರ, ಮಹೇಶ ಮುಗಳಿ, ಬಿ.ಬಿ. ನಿಲುಗಲ್, ರಾಜು ಕಕರಡ್ಡಿ, ಮಲ್ಲು ಹೊಸಮನಿ, ಅಶೋಕ ಶೆಟ್ಟಿ, ಇದ್ದರು.

ಸನಾತನ ಧರ್ಮ ಉಳಿವಿಗೆ ಕರೆ ಮಕ್ಕಳಿಗೆ ಸಂಸ್ಕಾರ ಕಲಿಸಲು ಸಲಹೆ ಶೋಭಾಯಾತ್ರೆಯಲ್ಲಿ ಹಲವರು ಭಾಗಿ

ಶೋಭಾಯಾತ್ರೆ ಮೆರುಗು ಪಟ್ಟಣದ ಎಪಿಎಂಸಿ ಮಾರುಕಟ್ಟೆಯಿಂದ ಆರಂಭವಾದ ಶೋಭಾಯಾತ್ರೆ ಪ್ರಮುಖ ಬೀದಿಗಳ ಮೂಲಕ ಸಂಚರಿಸಿತು. ತಾಯಿ ಭಾರತಾಂಬೆ ಭಾವಚಿತ್ರ ಅನೇಕ ಇತಿಹಾಸಕಾರರ ಭಾವಚಿತ್ರ ಕಳಸ ಹೊತ್ತ ಮಹಿಳೆಯರು ಡೊಳ್ಳು ಕುಣಿತ ಮಹಾತ್ಮರ ವೇಷಧಾರಿಗಳು ಶೋಭಾಯಾತ್ರೆಯ ಕಳೆ ಹೆಚ್ಚಿಸಿದರು. ಹಿಂದೂ ಕಾರ್ಯಕರ್ತರು ಕೇಸರಿ ಶಲ್ಯ ತೊಟ್ಟು ಧ್ವಜ ಹಿಡಿದು ಸಂಭ್ರಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.