ಸೋಮವಾರ, ಜುಲೈ 4, 2022
25 °C

ಕಾಮಗಾರಿಗೆ ಕಾರಜೋಳ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲೋಕಾಪುರ: ಜನರಿಗೆ ಅನೂಕೂಲವಾಗುವ ಕೆಲಸ ಮಾಡಲಾಗುತ್ತಿದೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

ಹೋಬಳಿ ವ್ಯಾಪ್ತಿಯಲ್ಲಿ ವಿವಿದ ಕಾಮಗಾರಿಗಳಿಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದರು. ಜುನ್ನೂರ ಗ್ರಾಮದ 385 ಮನೆಗಳಿಗೆ ₹ 67 ಲಕ್ಷ ವೆಚ್ಚದಲ್ಲಿ ನಳಗಳ ಜೋಡಣೆ, ಬದನೂರ ಗ್ರಾಮದ 355 ಮನೆಗಳಿಗೆ ₹ 83 ಲಕ್ಷದಲ್ಲಿ ನಳಗಳ ಜೋಡಣೆಗೆ ಭೂಮಿ ಪೂಜೆ, ಮಾಚಕನೂರ ಗ್ರಾಮದಲ್ಲಿ ₹ 2.46 ಕೋಟಿ ಲಕ್ಷದಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆ ಪುನಶ್ಚೇತನಗೊಳಿಸುವ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

ಲೋಕಾಪುರ ಪಟ್ಟಣದಲ್ಲಿ ₹ 11 ಲಕ್ಷ ವೆಚ್ಚದಲ್ಲಿ ತಾಂಡಾ ಕಾಲೂನಿಯಲ್ಲಿ ವರ್ಚಗಲ್ ಕೆರೆಯನ್ನು ₹3.60 ಕೋಟಿ ವೆಚ್ಚದಲ್ಲಿ ಪುನಶ್ಚೇತನ, ಚಿಚಖಂಡಿ ಕೆ.ಡಿ. ಗ್ರಾಮದ ಹತ್ತಿರ ₹9.90 ಕೋಟಿ ವೆಚ್ಚದಲ್ಲಿ ಘಟಪ್ರಭಾ ನದಿಗೆ ಅಡ್ಡಲಾಗಿ ಬಿ.ಸಿ.ಬಿ. ನಿರ್ಮಾಣಕ್ಕೆ ಚಾಲನೆ ನೀಡಿದರು.

ತಹಶೀಲ್ದಾರ್ ಸಂಗಮೇಶ ಬಾಡಗಿ, ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ಸೋಮಶೇಖರ ಸಾವನ್, ಸಿಪಿಐ ಎಚ್.ಆರ್. ಪಾಟೀಲ, ಗ್ರಾಮೀಣ ಬಿಜೆಪಿ ಘಟಕ ಅಧ್ಯಕ್ಷ ಹನಮಂತ ತುಳಸಿಗೇರಿ, ಮುಖಂಡರಾದ ಅರುಣ ಕಾರಜೋಳ, ಲೋಕಣ್ಣ ಕತ್ತಿ, ಕುಮಾರ ಹುಲಕುಂದ, ವಿರೇಶ ಪಂಚಕಟ್ಟಿಮಠ, ವಿನೋದ ಘೋರ್ಪಡೆ, ಬಿ.ವಿ.ಹಲಕಿ, ಜಾಕೀರಸಾಬ ಅತ್ತಾರ
ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು