
ನದಿ ದಡ ಸಂಪೂರ್ಣ ಬಟ್ಟೆಗಳಿಂದ ಕೂಡಿದೆ. ಸ್ವಚ್ಚತೆ ಮಾಡುವ ಕಾರ್ಯವನ್ನು ಮಂಡಳಿಯ ಸಿಬ್ಬಂದಿ ಮಾಡಬೇಕು. ಭಕ್ತರಿಗೆ ಬಟ್ಟೆಗಳನ್ನು ನದಿಗೆ ಬಿಡುವುದರಿಂದ ಆಗುವ ತೊಂದರೆಯ ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನು ಎಲ್ಲರೂ ಮಾಡಬೇಕು.
ಜಿ. ಎಸ್. ನರೇಗಲ್, ಭಕ್ತರು ಶಿರೂರ
ನದಿ ಮಲಿನಗೊಳಿಸುವ ಕಾರ್ಯ ಯಾರೂ ಮಾಡಬಾರದು. ನದಿಯ ಸ್ವಚ್ಚತೆಗೆ ಆದ್ಯತೆ ಕೊಡಬೇಕು. ನದಿಯ ದಡದಲ್ಲಿ ಮೌಢ್ಯ ಬಿತ್ತು ಯಾವ ಚಟುವಟಿಕೆಗಳಿಗೂ ಮಂಡಳಿ ಅವಕಾಶ ಕೊಡದೆ ತಡೆಯಬೇಕು.
ಮಹದೇಶ್ವರ ಸ್ವಾಮೀಜಿ, ಬಸವ ಧರ್ಮ ಪೀಠ ಕೂಡಲಸಂಗಮ
ಜೀವನದಿಗಳು ಇತ್ತೀಚಿಗೆ ಮಾನವನ ನಿರ್ಲಕ್ಷ ವರ್ತನೆಯಿಂದ ಮಲಿನಗೊಳ್ಳುತ್ತಿವೆ. ನದಿಗಳನ್ನು ಪೂಜಿಸಿದರೆ ಸಾಲದು ಅವುಗಳು ಮಲಿನವಾಗದಂತೆ ಎಚ್ಚರ ವಹಿಸಿ ಸ್ವಚ್ಚಗೊಳಿಸುವುದು ನಮ್ಮೆಲ್ಲರ ಕರ್ತವ್ಯ. ಗಂಗಾ ನದಿ ಸಂರಕ್ಷಣೆ ಕಾರ್ಯ ಆರಂಭಿಸಿದಂತೆ ಇಲ್ಲಿಯೂ ಆರಂಭಿಸಬೇಕು.
ಬಸವ ಜಯಮೃತ್ಯುಂಜಯ ಸ್ವಾಮೀಜಿ, ಲಿಂಗಾಯತ ಪಂಚಮಸಾಲಿ ಪೀಠ ಕೂಡಲಸಂಗಮ ರಥ ಬೀದಿ ಬಳಿಯ ಕೃಷ್ಣಾ ನದಿ ದಡದ ದೃಶ್ಯ
ಕೃಷ್ಣಾ ನದಿ ದಡದಲ್ಲಿರುವ ಬಟ್ಟೆಗಳು
ನದಿಯ ದಡದಲ್ಲಿ ಮಂಡಳಿ ಹಾಕಿದ ನಾಮಫಲಕ
ಬಾಗಲಕೋಟೆಯಲ್ಲಿ ಆಲಮಟ್ಟಿ ಹಿನ್ನೀರಿನಲ್ಲಿ ಸುರಿದಿರುವ ತ್ಯಾಜ್ಯ
ಘಟಪ್ರಭಾ ಸೇರುತ್ತಿರುವ ಬಾಗಲಕೋಟೆ ಕೊಳಚೆ ನೀರು