ಬಾದಾಮಿ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಠಡಿಗಳ ಕೊರತೆಯಿಂದ ಶಾಲಾ ಮಕ್ಕಳು ಕೊಠಡಿಯ ಹೊರಗೆ ಕುಳಿತು ಶಿಕ್ಷಣ ಕಲಿಯಬೇಕಾದ ಸನ್ನಿವೇಶ ಬಿ.ಎನ್. ಜಾಲಿಹಾಳ ಗ್ರಾಮದಲ್ಲಿದೆ.

ಶಾಲೆಯಲ್ಲಿ ಒಂದರಿಂದ 7ನೇ ವರ್ಗದವರೆಗಿನ ವಿದ್ಯಾರ್ಥಿಗಳಿಗೆ ಕೇವಲ ಮೂರು ಕೊಠಡಿಗಳಿವೆ. ಅದರಲ್ಲಿ ಒಂದು ಕೊಠಡಿಯಲ್ಲಿ ಕಾರ್ಯಾಲಯವಿದೆ.

ಒಂದು ಕೊಠಡಿಯಲ್ಲಿ 1 ರಿಂದ 3ನೇ ವರ್ಗದವರೆಗೆ ನಲಿ ಕಲಿ, ಇನ್ನೊಂದು ಕೊಠಡಿಯಲ್ಲಿ 5, 6 ಮತ್ತು 7ನೇ ವರ್ಗ ಹಾಗೂ ಮತ್ತೊಂದು ಕೊಠಡಿಯಲ್ಲಿ ಕಾರ್ಯಾಲಯ ಮತ್ತು ನಾಲ್ಕನೇ ತರಗತಿ ನಡೆಯುತ್ತಿದೆ.

ಕಾರ್ಯಾಲಯದ ಛಾವಣಿ ಸಿಮೆಂಟ್ ಮತ್ತು ಜೆಲ್ಲಿಕಲ್ಲುಗಳು ಬೀಳಲು ಆರಂಭಿಸಿದ್ದು, ಶಿಕ್ಷಕರಿಗೆ ಮತ್ತು ಮಕ್ಕಳಿಗೆ ಭಯದ ವಾತಾವರಣ ಉಂಟಾಗಿದೆ. ಎರಡು ತರಗತಿಗಳಿಗೆ ಶಿಕ್ಷಕರು ಹೊರಗೆ ಪಾಠ ಮಾಡುತ್ತಿದ್ದಾರೆ.

ಮಕ್ಕಳಿಗೆ ಕುಳಿತುಕೊಳ್ಳಲು ಜಾಗವಿಲ್ಲದ ಕಾರಣ ಅನಿವಾರ್ಯವಾಗಿ ಎರಡು ವರ್ಗಗಳಿಗೆ ಹೊರಗೆ ಪಾಠ ಬೋಧನೆ ಮಾಡುತ್ತೇವೆ ಎಂದು ಶಿಕ್ಷಕರು ಹೇಳಿದರು.

‘ಆಸರೆ ಬಡಾವಣೆಯಲ್ಲಿ 15 ವರ್ಷಗಳ ಹಿಂದೆಯೇ ಒಂದು ಕೊಠಡಿ ನಿರ್ಮಿಸಲಾಗಿದೆ. ಅದು ಉಪಯೋಗಕ್ಕೆ ಬಾರದಂತಾಗಿದೆ. ಆಸರೆ ಬಡಾವಣೆಯ ಮಕ್ಕಳೆಲ್ಲ ಇದೇ ಶಾಲೆಗೆ ಬರುವರು. ಸರಿಯಾಗಿ ಕಟ್ಟಡ ಇರದ್ದರಿಂದ ಮಕ್ಕಳು ಬೇರೆ ಊರುಗಳ ಶಾಲೆಗೆ ಹೋಗುವರು. ಹೊಸ ಕೊಠಡಿಗಳನ್ನು ನಿರ್ಮಿಸಬೇಕು ’ ಎಂದು ಗ್ರಾಮಸ್ಥರು ಆಗ್ರಹಿಸಿದರು.

‘ಒಂದೇ ಕೊಠಡಿಯಲ್ಲಿ ಎರಡು, ಮೂರು ವರ್ಗಕ್ಕೆ ಪಾಠ ಬೋಧನೆ ನಡೆಯುತ್ತಿದೆ. ಶಿಕ್ಷಕರು ಕಲಿಸುವುದು ಹೇಗೆ ಮತ್ತು ಮಕ್ಕಳು ವಿಷಯವನ್ನು ಹೇಗೆ ಅರಿತುಕೊಳ್ಳುತ್ತಾರೆ. ಬೋಧನೆ ಸರಿಯಾಗಿ ಆಗದ್ದರಿಂದ ಮಕ್ಕಳು ಕಲಿಕೆಯಲ್ಲಿ ಹಿಂದುಳಿಯುವರು’ ಎಂದು ಹೇಳಿದರು.

‘ ಕೊಠಡಿ ಕೊರತೆ ಬಗ್ಗೆ ಶಾಸಕ ಮತ್ತು ಬಿಇಒ ಅವರಿಗೆ ಅನೇಕ ಬಾರಿ ಮನವಿ ಸಲ್ಲಿಸಲಾಗಿದೆ. ನಾಲ್ಕು ಕೊಠಡಿಗಳ ಅವಶ್ಯಕತೆ ಇದೆ. ತುರ್ತಾಗಿ ಎರಡು ಕೊಠಡಿಗಳನ್ನಾದರೂ ನಿರ್ಮಿಸಬೇಕಿದೆ ’ ಎಂದು ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಚನ್ನಬಸಯ್ಯ ಕೋಟಿ ಹೇಳಿದರು.

‘ನೂತನ ಕೊಠಡಿಗಳ ನಿರ್ಮಾಣ ಮತ್ತು ಶಾಲಾ ಕೊಠಡಿಗಳ ದುರಸ್ತಿಗೆ ಕ್ರಿಯಾ ಯೋಜನೆ ತಯಾರಿಸಿದ ಜಿಲ್ಲಾ ಪಂಚಾಯಿತಿಗೆ ಕಳುಹಿಸಲಾಗಿದೆ’ ಎಂದು ಬಿಇಒ ಕೇಶವ ಪೆಟ್ಲೂರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.