ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಾಪುರ ದುರ್ಗಾದೇವಿ ಜಾತ್ರೆ: ಟಗರಿನ ಕಾಳಗ

Published 18 ಜೂನ್ 2024, 14:16 IST
Last Updated 18 ಜೂನ್ 2024, 14:16 IST
ಅಕ್ಷರ ಗಾತ್ರ

ಲೋಕಾಪುರ: ಪಟ್ಟಣದ ಆರಾಧ್ಯ ದೇವತೆ ದುರ್ಗಾದೇವಿ ಜಾತ್ರೆಯ ಅಂಗವಾಗಿ ಸೋಮವಾರ ಟಗರಿನ ಕಾಳಗ ಆಯೋಜಿಸಲಾಗಿತ್ತು.

ಬಾಲಕೀಯರ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ ಕಾಳಗವನ್ನು ನೋಡುವುದಕ್ಕೆ ಅಪಾರ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ತಡ ರಾತ್ರಿವರೆಗೂ ಟಗರಿನ ಕಾಳಗ ನಡೆಯಿತು. ಜನರೆಲ್ಲರೂ ಕುತೂಹಲದಿಂದ ವೀಕ್ಷಿಸಿದರು.

ಅಂಕಲಗಿ ಗ್ರಾಮದ ಶ್ರೀಲಕ್ಷ್ಮೀದೇವಿ ಪ್ರಸನ್ನ ಟಗರು ಪ್ರಥಮ ಸ್ದಾನ, ಚಿಕ್ಕೂರ ಗ್ರಾಮದ ಶ್ರೀಹನುಮಾನ ಟಗರು ದ್ವಿತೀಯ ಸ್ಥಾನ, ಕೂಣ್ಣೂರದ ಕರಿಸಿದ್ದೇಶ್ವರ ಪ್ರಸನ್ನ ತೃತೀಯ ಸ್ಥಾನ ಪಡೆದವು. ಸಿಂಗಲ ಸಿಂಹ ಬರಗಿ ಗಿಡ್ಡ ಟಗರು ಚತುರ್ಥ ಹಾಗೂ ಚಿಕ್ಕೂರ ಗ್ರಾಮದ ಶ್ರೀ ಜೈಶ್ರೀರಾಮ ಟಗರು ಪಂಚಮ ಬಹುಮಾನ ಪಡೆದುಕೊಂಡವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT