ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವೀರ ಶರಣ ಮಡಿವಾಳ ಮಾಚಿದೇವ: ಪೂಜಾರ

Published 1 ಫೆಬ್ರುವರಿ 2024, 15:42 IST
Last Updated 1 ಫೆಬ್ರುವರಿ 2024, 15:42 IST
ಅಕ್ಷರ ಗಾತ್ರ

ಬಾಗಲಕೋಟೆ: 12ನೇ ಶತಮಾನದ ಕಲ್ಯಾಣ ಕ್ರಾಂತಿಯಲ್ಲಿ ಬಿಜ್ಜಳ ರಾಜನನ್ನೇ ಎದುರಿಸಿ ವೀರಶರಣ ಎನಿಸಿಕೊಂಡವರು ಮಡಿವಾಳ ಮಾಚಿದೇವ ಎಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಹೇಳಿದರು.

ಜಿಲ್ಲಾಡಳಿತ ವತಿಯಿಂದ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂದಿನ ಶರಣರು ವೃತ್ತಿಗೆ, ಸ್ವಾಭಿಮಾನಕ್ಕೆ ಧಕ್ಕೆ ಬಂದರೆ, ಯಾವ ಮಹಾರಾಜನಿಗೂ ಹೆದರುತ್ತಿರಲಿಲ್ಲ ಎಂಬುದಕ್ಕೆ ಮಡಿವಾಳ ಮಾಚಿದೇವ ನಿದರ್ಶನವಾಗಿದ್ದಾರೆ ಎಂದರು.

ಶರಣರು ತಮ್ಮ ಅನುಭವದ ನುಡಿಗಳನ್ನೇ ವಚನಗಳನ್ನಾಗಿ ರಚಿಸಿ ಮೇಲು, ಕೀಳು, ಜ್ಞಾನಿ, ಅಜ್ಞಾನಿ ಎಂಬ ಭೇದಭಾವ ಮಾಡದೇ ಮಾನವ ಕುಲ ಒಂದೇ ಎಂದು ಸಾರಿ ಸಮಾನತೆಯ ಹಾಗೂ ಸ್ವಾಭಿಮಾನದ ಬದುಕಿನ ದಾರಿ ತೋರಿಸಿದ್ದಾರೆ ಎಂದು ಹೇಳಿದರು.

ಉಪನ್ಯಾಸ ನೀಡಿದ ಬಸವರಾಜ ಕುಂಬಾರ, ಬಸವಣ್ಣನವರೇ ತಮ್ಮ ವಚನದಲ್ಲಿ ಎನ್ನ ಕಾಯವ ಶುದ್ದಿ ಮಾಡಿದವ ಮಡಿವಾಳ ಎಂದು ವರ್ಣಿಸಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್‌.ವೈ. ಮೇಟಿ ಮಾತನಾಡಿ, ವೃತ್ತಿಯಲ್ಲಿ ಮಡಿವಾಳನಾದರೂ ಭಕ್ತಿಯಲ್ಲಿ ಬಸವಣ್ಣನಗಿಂತಗೈ ಅಗ್ರಸ್ಥಾನ ಪಡೆದವರು ಮಡಿವಾಳ ಮಾಚಿದೇವ. ಜಾತಿ, ಮತ, ಪಂಥ ಸಂಕೋಲೆಯಿಂದ ಹೊರಬಂದು ಮನುಷ್ಯಕುಲ ಒಂದೇ ಎಂದು ಸಾರಿದರು ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪೂರ, ಮುತ್ತು ಮಡಿವಾಳರ, ಅಮರೇಶ ಕೊಳ್ಳಿ, ವಿ.ಬಿ.ಮಡಿವಾಳರ, ಶಂಕರ ಮಡಿವಾಳರ, ಸುಮ್ಮಕ್ಕ ಮಡಿವಾಳರ, ಕೃಷ್ಣಪ್ಪ ಮಡಿವಾಳರ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT