ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಸಕ್ತಿಯಿಂದ ಗಣಿತ ಅಧ್ಯಯನ ಮಾಡಿ: ದೇಸಾಯಿ

Published : 31 ಆಗಸ್ಟ್ 2024, 16:07 IST
Last Updated : 31 ಆಗಸ್ಟ್ 2024, 16:07 IST
ಫಾಲೋ ಮಾಡಿ
Comments

ರಾಂಪುರ: ‘ವಿದ್ಯಾರ್ಥಿಗಳು ಗಣಿತ ವಿಷಯದಲ್ಲಿ ಹೆಚ್ಚು ಆಸಕ್ತಿ ವಹಿಸಿ ಅಧ್ಯಯನ ಮಾಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದು ಮುಗಳೊಳ್ಳಿಯ ಕರ್ನಾಟಕ ಪಬ್ಲಿಕ್ ಶಾಲೆ ಮುಖ್ಯಶಿಕ್ಷಕ ಕೆ.ಎಸ್.ದೇಸಾಯಿ ಹೇಳಿದರು.

ಸಮೀಪದ ಮುಗಳೊಳ್ಳಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸಮುದಾಯ ಹಾಗೂ ಅಕ್ಷರ ಫೌಂಡೇಷನ್ ಮತ್ತು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಶುಕ್ರವಾರ ನಡೆದ ಗ್ರಾಮ ಪಂಚಾಯತಿ ಮಟ್ಟದ ಶಾಲಾ ಮಕ್ಕಳ ಗಣಿತ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಾ ಭಜನ್ನವರ ಉದ್ಘಾಟಿಸಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಚ್.ಎಚ್.ನದಾಫ ಮಾತನಾಡಿ, ‘ಮಕ್ಕಳು ಗಣಿತ ಕಠಿಣ ವಿಷಯವೆಂದು ಭಾವಿಸಬಾರದು. ಆಸಕ್ತಿವಹಿಸಿ ಕಲಿತರೆ ಯಾವುದು ಕಠಿಣವಲ್ಲ’ ಎಂದರು.

ಸಿಆರ್‌ಪಿ ಪ್ರಕಾಶ ಕೋಟಿ ಗಣಿತ ಕಲಿಕಾ ಆಂದೋಲನದ ಉದ್ದೇಶ ಕುರಿತು ಮಾತನಾಡಿದರು. ಮುಖ್ಯಶಿಕ್ಷಕ ಸೋಮಸಿಂಗ ರಾಠೋಡ, ಶಿಕ್ಷಕ ಅರ್ಜುನ ಹಂಚಿನಾಳ, ಹೊನ್ನಾಕಟ್ಟಿ ತೋಟದ ಶಾಲೆಯ ಮುಖ್ಯಶಿಕ್ಷಕಿ ಲಕ್ಷ್ಮಿ ಲಮಾಣಿ, ತಳ್ಳಿಕೇರಿ ಪಾಲ್ಗೊಂಡಿದ್ದರು.

4ನೇ ತರಗತಿಯಲ್ಲಿ ಮುಗಳೊಳ್ಳಿ ಎಲ್.ಟಿ ಶಾಲೆಯ ದೀಪಿಕಾ ರಾಠೋಡ –ಪ್ರಥಮ, ಸಂಗೊಂದಿ ತೋಟದ ಶಾಲೆಯ ವಿಜಯ ಮಾದರ –ದ್ವೀತಿಯ ಹಾಗೂ ಸಂಗಮ ಕ್ರಾಸ್ ತೋಟದ ಶಾಲೆಯ– ಸುಕನ್ಯಾ ಲೋಂಡವೆ ತೃತಿಯ ಸ್ಥಾನ ಪಡೆದರು.

5 ನೇ ತರಗತಿಯಲ್ಲಿ ಸಂಗಮ ಕ್ರಾಸ್ ತೋಟದ ಶಾಲೆಯ ಸುಜಲ್ ನರಗುಂದ– ಪ್ರಥಮ, ಹೊನ್ನಾಕಟ್ಟಿಯ ಮಣಿಕಂಠ ಪೂಜಾರಿ– ದ್ವಿತೀಯ ಮತ್ತು ಮುಗಳೊಳ್ಳಿ ಎಲ್.ಟಿಯ ನಿಖಿತಾ ರಾಠೋಡ– ತೃತಿಯ ಸ್ಥಾನ ಪಡೆದರೆ, 6ನೇ ತರಗತಿಯಲ್ಲಿ ಕೆಪಿಎಸ್ ಮುಗಳೊಳ್ಳಿಯ ಮೋಹನ ಬಂಡಿವಡ್ಡರ –ಪ್ರಥಮ, ಮುಗಳೊಳ್ಳಿ ಎಲ್.ಟಿಯ ಪ್ರಜ್ವಲ್ ರಾಠೋಡ– ದ್ವಿತೀಯ ಮತ್ತು ಮುಗಳೊಳ್ಳಿ ಕೆಪಿಎಸ್‌ನ ಪ್ರವೀಣ ಹಾಲವಾರ– ತೃತೀಯ ಸ್ಥಾನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT