ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸರ್ಕಾರ ಮುಳುಗಲು ಇನ್ನು ಮೂರು ಗೇಣು ಮಾತ್ರ: ಸಂಸದ ಗೋವಿಂದ ಕಾರಜೋಳ

Published : 5 ಆಗಸ್ಟ್ 2024, 16:16 IST
Last Updated : 5 ಆಗಸ್ಟ್ 2024, 16:16 IST
ಫಾಲೋ ಮಾಡಿ
Comments

ಮುಧೋಳ: ‘ರಾಜ್ಯದಲ್ಲಿ ಹಗರಣಗಳು, ಭ್ರಷ್ಟಾಚಾರ, ವರ್ಗಾವಣೆ ದಂಧೆಯಲ್ಲಿ ಮುಳುಗಿರುವ ರಾಜ್ಯ ಸರ್ಕಾರ ಮುಳುಗಲು ಇನ್ನೂ ಮೂರು ಗೇಣು ಮಾತ್ರ ಬಾಕಿ ಇದ್ದು ಈ ಸರ್ಕಾರ ಪತನವಾಗುವುದು ಖಚಿತ’ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಹೇಳಿದರು.

ಮುಧೋಳದ ಯಾದವಾಡ ಸೇತುವೆ ಹತ್ತಿರ ಪ್ರವಾಹ ಪರಿಸ್ಥಿತಿಯನ್ನು ಸೋಮವಾರ ವೀಕ್ಷಿಸಿದ ಅವರು, ‘ಕಳೆದ ವರ್ಷ ಬರ ಆವರಿಸಿದಾಗ ರೈತರ ನೆರವಿಗೆ ಈ ಸರ್ಕಾರ ಬರಲಿಲ್ಲ. ಮೇವು ಬ್ಯಾಂಕ್, ಗೋಶಾಲೆ ಆರಂಭಿಸದೆ ಎಲ್ಲರಿಗೂ ಪರಿಹಾರ ನೀಡಿಲ್ಲ. ಈಗ ಪ್ರವಾಹದಿಂದ ಜನರು ಕಂಗಾಲಾಗಿದ್ದಾರೆ. ಬೆಳೆ ಹಾನಿಯಾಗಿ ರೈತರು ತೊಂದರೆಯಲ್ಲಿದ್ದಾರೆ. ವಾಸ್ತವಿಕ ಸಮೀಕ್ಷೆ ನಡಿಸಿ, ಮನೆ ಕಳೆದುಕೊಂಡವರಿಗೆ ಪೂರ್ಣ ಪ್ರಮಾಣದಲ್ಲಿ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.

‘ರಾಜ್ಯದಲ್ಲಿ ವರ್ಗಾವಣೆ ದಂಧೆಯಾಗಿ ಮಾರ್ಪಟ್ಟಿದೆ. 6 ತಿಂಗಳಿಗೊಮ್ಮ ಅಧಿಕಾರಿಗಳು ದುಡ್ಡುಕೊಟ್ಟು ರಿನಿವಲ್ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಅಧಿಕಾರಿಗಳ ಸಾವಾಗುತ್ತಿದೆ. ಮುಡಾ ವಾಲ್ಮೀಕಿ ಹಗರಣದ ಬಗ್ಗೆ ಮುಖ್ಯಮಂತ್ರಿ ನೈತಿಕ ಹೋಣೆ ಹೊತ್ತು ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

‘ಬಿಜೆಪಿ–ಜೆಡಿಎಸ್ ಸೇರಿಕೊಂಡು ರಾಜಭವನವನ್ನು ದುರುಪಯೋಗಪಡಿಕೊಂಡು ಸರ್ಕಾರ ಅಸ್ತಿರಗೊಳಿಸುವ ಯತ್ನ ಮಾಡುತ್ತಿವೆ’ ಎಂಬ ಕಾಂಗ್ರೆಸ್‌ ಆರೋಪದ ಬಗ್ಗೆ  ಪತ್ರಕರ್ತರ ಪ್ರಶ್ನೆಗೆ ‘ಕಾಂಗ್ರೆಸ್ ನವರು ತಮ್ಮಂತೆ ಎಲ್ಲರೂ ಇದ್ದಾರೆ ಎಂದು ಭಾವಿಸಿದ್ದಾರೆ. 60 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ 56 ಬಾರಿ ಸರ್ಕಾರಗಳನ್ನು ಕಿತ್ತುಹಾಕಿದ್ದಾರೆ. ಭಾರಧ್ವಾಜ ಎಂಬ ರಾಜ್ಯಪಾಲರಿಂದ ಯಡಿಯೂರಪ್ಪ ವಿರುದ್ಧ ಸುಳ್ಳು ಕೇಸ್ ಹಾಕಲಾಗಿತ್ತು. ನ್ಯಾಯಾಲಯ ಇವರಿಗೆ ಛೀಮಾರಿ ಹಾಕಿದ್ದರು’ ಎಂದು ಹೇಳಿದರು.

‘ಮುಖ್ಯಮಂತ್ರಿ ನಿರಪರಾಧಿಯಾಗಿದ್ದರೆ ಮುಡಾ ಹಗರಣವನ್ನು ಸಿಬಿಐಗೆ ವಹಿಸಬೇಕು’ ಎಂದು ಆಗ್ರಹಿಸಿದರು.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಡಾ.ರವಿ ನಂದಗಾಂವಿ, ಮೀನುಗಾರರ ಪ್ರಕೋಷ್ಠದ ರಾಜ್ಯ ಸಂಚಾಲಕ ನಾಗಪ್ಪ ಅಂಬಿ, ರಾಜು ಯಡಹಳ್ಳಿ, ಕೆ.ಎಂಎಫ್ ನಿರ್ದೇಶಕ ರಾಜುಗೌಡ ಪಾಟೀಲ, ಕೆ.ಆರ್.ಮಾಚಪ್ಪನವರ, ಶಂಕರ ನಾಯಕ, ಸದಪ್ಪ ತೇಲಿ, ಹಣಮಂತ ತುಳಸಿಗೇರಿ, ಕರಬಸಯ್ಯ ಹಿರೇಮಠ ಇದ್ದರು.

ಮುಧೋಳದ ಯಾದವಾಡ ಸೇತುವೆ ಹತ್ತಿರ ಪ್ರವಾಹ ಪರಿಸ್ಥಿತಿ ನೋಡುತ್ತಿರುವ ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ
ಮುಧೋಳದ ಯಾದವಾಡ ಸೇತುವೆ ಹತ್ತಿರ ಪ್ರವಾಹ ಪರಿಸ್ಥಿತಿ ನೋಡುತ್ತಿರುವ ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT